More

    ಭಾರತೀಯ ಪರಂಪರೆಯಲ್ಲಿ ಹೆಣ್ಣಿಗಿದೆ ವಿಶೇಷ ಸ್ಥಾನ

    ಭದ್ರಾವತಿ: ಭಾರತೀಯ ಸಂಸ್ಕøತಿ, ಪರಂಪರೆಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನ ಹಾಗೂ ಗೌರವವಿದೆÉ ಎಂದು ಪೌರಾಯುಕ್ತ ಮನುಕುಮಾರ್ ಹೇಳಿದರು.
    ಹಳೇನಗರದ ವೀರಶೈವ ಸಭಾಭವನದಲ್ಲಿ ನಗರಸಭೆ, ದೀನದಯಾಳು ಅಂತ್ಯೋದಯ ಯೋಜನೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿ ಮಾತನಾಡಿ, ಅಂದಿನ ಕಾಲಕ್ಕೂ ಇಂದಿನ ಕಾಲಕ್ಕೂ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮಹಿಳೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾಳೆ ಎಂದರು.
    ಮಹಿಳೆಯರ ಜೀವನೋಪಾಯ ಸುಧಾರಿಸಲು ಸರ್ಕಾರ ಸೀಶಕ್ತಿ ಸ್ವಸಹಾಯ ಸಂಘಗಳ ಮೂಲಕ ಸಾಕಷ್ಟು ಯೋಜನೆಗಳನ್ನು ಒದಗಿಸಿಕೊಟ್ಟಿದೆ. ಇಂದು ಮಹಿಳೆ ಅಬಲೆಯಾಗಿ ಉಳಿಯದೆ ಸಬಲೆಯಾಗಿದ್ದಾಳೆ. ಯೋಧೆಯಾಗಿ, ವೈದ್ಯೆಯಾಗಿ, ಶಿಕ್ಷಕಿಯಾಗಿ ತನ್ನ ಸ್ಥಾನಮಾನಗಳನ್ನು ವಿಸ್ತರಿಸಿಕೊಂಡಿದ್ದಾಳೆ. ಪುರುಷನಿಗೆ ಸಮಾನವಾಗಿ ಸಮಾಜದಲ್ಲಿ ಬೆಳೆಯುತ್ತಿರುವ ಮಹಿಳೆಗೆ ಇನ್ನೂ ಹೆಚ್ಚಿನ ಸ್ಥಾನಮಾನಗಳು ಲಭಿಸಬೇಕು ಎಂದು ಹೇಳಿದರು.
    ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಭಾರತ ದೇಶದ ಸಂಸ್ಕøತಿ ಇನ್ನೂ ಜೀವಂತವಾಗಿ ಉಳಿದಿದೆ ಎಂದಾದರೆ ಅದು ಹೆಣ್ಣಿನಿಂದಲೆ ಎಂಬುದನ್ನು ಎಲ್ಲರೂ ಅರಿಯಬೇಕಾಗಿದೆ. ಅಂದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಸೀಶಕ್ತಿ ಸಂಘಗಳು ಇಂದು ಸಾಕಷ್ಟು ಅಭಿವೃದ್ಧಿ ಕಾಣುತ್ತಿವೆ. ದೇಶದಲ್ಲಿ ಯಾವುದೇ ಸರ್ಕಾರಗಳು ಬರಲಿ, ಬರುವ ಎಲ್ಲ ಸರ್ಕಾರಗಳು ಸೀ ಸಬಲೀಕರಣಕ್ಕೆ ಹೆಚ್ಚಿನ ಸೌಕರ್ಯಗಳನ್ನು ಒದಗಿಸಲಿ ಎಂದರು.
    ಹಾಸ್ಯ ಲೇಖಕಿ ಇಂದುಮತಿ ಸಾಲಿಮಠ್ ಮಾತನಾಡಿ, ಮನುಷ್ಯನಲ್ಲಿ ಸಾಹಿತ್ಯ ಸಂಗೀತದ ಅಭಿರುಚಿ ಇರಬೇಕು. ನಗು ನಮ್ಮ ಸೌಂದರ್ಯ ಹಾಗು ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿದೆ. ಎಲ್ಲರೂ ನಗುವಿನ ಮೂಲಕ ಸಂತೋಷದ ಬದುಕನ್ನು ಸಾಗಿಸುವ ಕಡೆಗೆ ಗಮನಹರಿಸಬೇಕು. ಹೆಣ್ಣು ಮಕ್ಕಳ ಮೇಲಿನ ತಾತ್ಸಾರ, ಕೀಳು ಮನೋಭಾವ ಇಂದಿಗೂ ಇದೆ. ಅದು ಹೋಗಲಾಡಿಸಬೇಕು. ಸಮಾಜದಲ್ಲಿ ಪುರುಷರಿಗೆ ಸಿಗುವ ಗೌರವ ಸ್ಥಾನಮಾನಗಳು ಮಹಿಳೆಯರಿಗೂ ಸಮಾನವಾಗಿ ಸಿಗಬೇಕು. ಹೆಣ್ಣು ಮಾನವಂತೆಯಾಗಿ ಬದುಕು ಸಾಗಿಸುತ್ತಿದ್ದಾಳೆ ಎಂದು ತಿಳಿಸಿದರು.
    ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳಾ ಬೈರಪ್ಪ, ಸದಸ್ಯ ಮಣಿ, ನಾಗರತ್ನಾ ಅನಿಲ್, ಮಂಜುಳಮ್ಮ, ಶಶಿಕಲಾ, ಗೀತಾ ರಾಜ್‍ಕುಮಾರ್, ಸುಹಾಸಿನಿ, ಹೇಮಂತಕುಮಾರ್, ಲಕ್ಷ್ಮೀ, ಸುರೇಶ್, ಪ್ರೇಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts