More

    ಭಾರತೀಯರ ಡಿಎನ್‌ಎದಲ್ಲಿ ಯೋಗವಿದೆ

    ಬಾಗಲಕೋಟೆ: ಯೋಗ-ಆಧ್ಯಾತ್ಮ ಭರತ ಭೂಮಿಯ ಆತ್ಮಗಳು ಇದ್ದಂತೆ. ನಮ್ಮ ಡಿಎನ್‌ಎದಲ್ಲಿ ಅಡಗಿಕೊಂಡಿವೆ. ಅವುಗಳನ್ನು ಮುಂದುವರೆಸಿ ಯುವ ಜನಾಂಗಕ್ಕೆ ಪರಿಚಯಿಸಲು ಮಹಿಳೆಯರ ಪಾತ್ರ ಬಹಳ ಮಹತ್ವ ಪಡೆದುಕೊಂಡಿದೆ ಎಂದು ಯೋಗ ಗುರು ಬಾಬಾರಾಮದೇವ ಹೇಳಿದರು.
    ನಗರದ ಕಲಾಭವನದಲ್ಲಿ ಮಹಿಳಾ ಪತಂಜಲಿ ಯೋಗ ಸಮಿತಿಯ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಮಹಾ ಸಮಾವೇಶದಲ್ಲಿ ವಿಡಿಯೋ ಕಾನ್ಸರೇನ್ಸ್ ಮೂಲಕ ಅವರು ಮಾತನಾಡಿದರು.
    ನಮ್ಮ ದೇಶ, ಸಮಾಜವನ್ನು ಆಧ್ಯಾತ್ಮ, ಆರೋಗ್ಯ ದೃಷ್ಟಿಕೋನದಿಂದ ಕಟ್ಟಬೇಕಿದೆ. ಮತ್ತೆ ಪರಮ ವೈಭಯಕ್ಕೆ ತೆಗೆದುಕೊಂಡು ಹೋಗಬೇಕಿದೆ. ಯೋಗ ಮಾಡಿದರೇ ರೋಗದಿಂದ ಮುಕ್ತರಾಗಿ ಇರಬಹುದು. ಯೋಗದಿಂದ ಕಾಮ, ಧ್ವೇಷ, ಅಸೂಯೆ ಬಿಡಲು ಸಾಧ್ಯ ಎಂದರು.
    ಯೋಗದಲ್ಲಿ ಸಂಯೋಗವಿದೆ. ಸನಾತನ ಸಂಸ್ಕೃತಿ ಬೆಳೆಯಬೇಕಾದರೆ ಯೋಗ ಅಗತ್ಯವಾಗಿ ಬೆಳೆಯಬೇಕು. ಹಣ, ಅಂತಸ್ತು, ಪ್ರತಿಷ್ಠೆಯಿಂದ ನೆಮ್ಮದಿ ಸಿಗುವದಿಲ್ಲ. ಶಾಂತಮಯ ಮನಸ್ಥಿತಿ ಉಂಟಾಗುವದಿಲ್ಲ. ಯೋಗದಿಂದ ನೆಮ್ಮದಿ, ಶಾಂತಿ, ಆರೋಗ್ಯಯುಕ್ತ ಜೀವನ ಸಾಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಪತಂಜಲಿ ಅಭಿಯಾನ ನಡೆಸುತ್ತಿದೆ. ಈ ಅಭಿಯಾನ ಯಶಸ್ವಿಗೊಳಿಸಲು ಮಹಿಳೆಯರ ಪಾತ್ರ ಹಿರಿದು. ಸೇವೆ, ಸಮರ್ಪಣೆ, ವಾತ್ಸಲ್ಯ ಪ್ರತೀಕ ಮಹಿಳೆ ಎಂದು ಹೇಳಿದರು.
    ಡಾ.ಸಾದ್ವಿ ದೇವಪ್ರೀಯಾ ಮಾತನಾಡಿ, ನಮ್ಮ ಜೀವನ ಕ್ರಮದಲ್ಲಿ ಯೋಗವು ಬಹಳ ಮಹತ್ವದ ಪಡೆದುಕೊಂಡಿದೆ. ದೇಹದಲ್ಲಿ ೬೦ ಸಾವಿರಕ್ಕೂ ಹೆಚ್ಚು ಜೀವ ಕೋಶಗಳಿವೆ. ಒಂದು ಜೀವ ಕೋಶ ಕೆಲಸ ಮಾಡಿಲಿಲ್ಲವೆಂದರೇ ದೇಹ ನಿಷ್ಕ್ರೀಯಗೊಳ್ಳುತ್ತದೆ. ಅದೇ ರೀತಿ ಎಲ್ಲರು ಸೇರಿ ಉತ್ತಮ ಸಮಾಜ, ದೇಶವನ್ನು ನಿರ್ಮಿಸಬೇಕಿದೆ. ಸಂಘಟಿಸಬೇಕಿದೆ. ಆಕ್ರಮಣಕಾರರ ದಾಳಿಯಿಂದ ನಮ್ಮ ದೇಶದ ಸಂಸ್ಕೃತಿ, ಶಿಕ್ಷಣ ಪದ್ಧತಿ ಹಾಳಾಯಿತು. ಇದೀಗ ಕಾಲ ಚಕ್ರ ಬದಲಾಗಿದ್ದು, ಸಂಸ್ಕೃತಿಯ ಪುನರುತ್ಥಾನ ಆರಂಭವಾಗಿದೆ. ಭಾರತ ಮತ್ತೆ ವಿಶ್ವ ಗುರುವಾಗುವತ್ತ ಧಾಪುಗಾಲು ಇಡುತ್ತಿದೆ. ಮಹಿಳೆಯರಿಗೆ ಗುರುಕುಲ-ಸನಾತನ ಶಿಕ್ಷಣ ಪದ್ಧತಿ ದೊರೆತಲ್ಲಿ ನಮ್ಮ ಜೀವನ ಶೈಲಿ ಬದಲಾಗುತ್ತದೆ ಎಂದು ಹೇಳಿದರು.

    ಮಹಿಳಾ ಸಮಾವೇಶಕ್ಕೆ ೧೬ ಜಿಲ್ಲೆಯಿಂದ ೧೬೦೦ ಮಹಿಳೆಯರು ಭಾಗವಹಿಸಿದ್ದರು. ಹುಬ್ಬಳ್ಳಿ ನೀಲಕಂಠ ಮಠದ ಶಿವಶಂಕರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತಂಜಲಿ ಯೋಗ ಸಮಿತಿ ಕರ್ನಾಟಕ ಹಾಗೂ ದಕ್ಷಿಣ ಭಾರತದ ವರಿಷ್ಠ ಪ್ರಭಾರಿ ಭವರ್‌ಲಾಲ್ ಆರ್ಯಜಿ, ಮಹಿಳಾ ಪತಂಜಲಿ ಯೋಗ ಸಮಿತಿ ಉತ್ತರ ಕರ್ನಾಟಕದ ರಾಜ್ಯ ಮುಖ್ಯ ಪ್ರಭಾರಿ ಆರತಿ ಕಾನಗೋ, ಪತಂಜಲಿ ಕಿಸಾನ ಸೇವಾ ಸಮಿತಿ ಪ್ರಭಾರಿ ಸಂಜಯ ಕೆ., ಯುವ ಭಾರತ ರಾಜ್ಯ ಪ್ರಭಾರಿ ಕಿರಣ ಜೀ., ಬಾಗಲಕೋಟೆ ಮುಖ್ಯಪ್ರಭಾರಿಗಳಾದ ಸುಜಾತಾ ಗಾಣಗೇರ, ಸೀಮಾ ಮಣ್ಣೂರ, ಸುಧಾ, ಕಶ್ಮೀರಾ, ಕವಿತಾ, ಮಾಲತಿ ಕೆ., ಎಚ್.ಎನ್.ಇನಾಂದಾರ ಇದ್ದರು. ಕಾಂಚನಾ ಬಾರ್ಶಿ ನಿರೂಪಿಸಿದರು.

    ಬಾಕ್ಸ್..
    ಕನ್ನಡದಲ್ಲಿ ಬಾಬಾ ಮಾತು..
    ಭಾಷಣ ಆರಂಭದಲ್ಲಿ ನನ್ನೆಲ್ಲ ಸಹೋದರ, ಸಹೋದರಿಯರಿಗೆ ನಮಸ್ಕರಗಳು ಅಂತ ಬಾಬಾ ರಾಮದೇವ ಅವರು ಹೇಳುತ್ತಿದ್ದಂತೆ ಸಮಾವೇಶದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು. ಯೋಗದಿಂದ ರೋಗ ಮುಕ್ತ, ನಶೆ ಮುಕ್ತ ನಿರ್ಮಿಸಲು ಸಾಧ್ಯ. ನಾವು ಯೋಗ ಆರಂಭಿಸಿದ ಬಳಿಕ ಸರ್ಕಾರ, ರಾಜಕೀಯ ಪಕ್ಷಗಳು ಇದನ್ನು ಅಳವಡಿಕೊಂಡಿವೆ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಭಾಗ ವೈವಿದ್ಯಮಯವಾಗಿವೆ. ಇಲ್ಲಿನ ಮಹಿಳೆಯರ ಹೆಸರು ವಿಶಿಷ್ಠವಾಗಿರುತ್ತದೆ. ಆಹಾರ ಪದ್ಧತಿಯೂ ಆರೋಗ್ಯಕ್ಕೆ ಉತ್ತಮ ಎಂದು ಬಾಬಾ ರಾಮ ದೇವ ತಮ್ಮ ಭಾಷಣದಲ್ಲಿ ಬಣ್ಣಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts