More

    ಭಾರತೀಯರಿಂದ ಸ್ವಾಮಿ ವಿವೇಕಾನಂದರ ದೂರ ಮಾಡುವ ಆತಂಕ

    ತೀರ್ಥಹಳ್ಳಿ: ದೇಶದಿಂದ ಬುದ್ಧನನ್ನು ನಾಪತ್ತೆ ಮಾಡಿದಂತೆ ಸ್ವಾಮಿ ವಿವೇಕಾನಂದರನ್ನೂ ಭಾರತೀಯರಿಂದ ದೂರ ಮಾಡುವ ಬೆಳವಣಿಗೆ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ತುಂಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಿ.ಗಣಪತಿ ಆತಂಕ ವ್ಯಕ್ತಪಡಿಸಿದರು.
    ತುಂಗಾ ಕಾಲೇಜಿನಲ್ಲಿ ಗುರುವಾರ ವಿಶ್ವ ಮಾನವ ದಿನಾಚರಣೆ ಹಾಗೂ ರಾಷ್ಟ್ರೀಯ ಯುವದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಾನವೀಯ ನೆಲೆಯಲ್ಲಿ ಎಲ್ಲರನ್ನೂ ಪ್ರೀತಿಸುವ ಬದಲಾಗಿ ಹೃದಯವಂತಿಕೆಗೆ ವಿರುದ್ಧವಾದ ಆಲೋಚನೆ ಇಂದು ವಿಜೃಂಭಿಸುತ್ತಿರುವಂತೆ ಭಾಸವಾಗುತ್ತಿದೆ. ಜಾತಿ, ಧರ್ಮ, ಆಹಾರ, ಉಡುಪು, ಆಚರಣೆ ವಿಚಾರದಲ್ಲಿ ಮಾನಸಿಕವಾಗಿ ಜನರನ್ನು ಒಡೆಯುವ ಬೆಳವಣಿಗೆ ಸಾತ್ವಿಕ ಪ್ರಜ್ಞೆಯ ಮೂಲಕ ಜಗತ್ತಿಗೆ ಸಂದೇಶವನ್ನು ಸಾರಿದ ಈ ದೇಶದ ಪರಂಪರೆಗೆ ವಿರುದ್ಧವಾಗಿದೆ. ಈ ಬಗ್ಗೆ ವಿಶೇಷವಾಗಿ ಯುವ ಜನತೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.
    ಪ್ರಥಮ ಬಾರಿಗೆ ಜಗತ್ತು ಭಾರತವನ್ನು ನೋಡುವಂತೆ ಮಾಡಿದ ವಿವೇಕಾನಂದ, ಬುದ್ಧ, ಗಾಂಧಿ, ಕುವೆಂಪು ಮುಂತಾದ ದಾರ್ಶನಿಕರು ದೈಹಿಕವಾಗಿ ಇಂದು ನಮ್ಮೊಡನೆ ಇಲ್ಲ. ಆದರೆ ಅವರು ನೀಡಿದ ಸಂದೇಶಗಳು ಶಾಶ್ವತವಾಗಿವೆ. 10ನೇ ಶತಮಾನದ ಆದಿಕವಿ ಪಂಪನ ಮನುಜ ಕುಲಂ ತಾನೊಂದೆ ವಲಂ ಆಶಯದಂತೆ, ರಾಷ್ಟ್ರಕವಿ ಕುವೆಂಪುರವರ ಮನುಜಮತ ವಿಶ್ವಪಥ, ಸರ್ವೋದಯ ಹಾಗೂ ಸಮನ್ವಯದೊಂದಿಗೆ ಅಲ್ಪ ಮಾನವರಾಗದೇ ವಿಶ್ವ ಮಾನವರಾಗೋಣ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts