More

    ಭಾರತದ ಪ್ರತಿ ಪ್ರಜೆಗೂ ಘನತೆಯ ಬದುಕು ಇದು ಮೋದಿ ಸಂಕಲ್ಪ

    ಬಾಗಲಕೋಟೆ : ವಿಕಸಿತ ಭಾರತದಲ್ಲಿ ಪ್ರತಿ ಪ್ರಜೆಗೂ ಘನತೆಯ ಬದುಕು ನಿಡುವುದು ಮೋದಿಯ ಸಂಕಲ್ಪ ವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

    ಅವರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ನಗರದ 12 ನೇ ವಾರ್ಡಿನಲ್ಲಿ ಹಮ್ಮಿಕೊಂಡ ಚುನಾವಣಾ ಪ್ರಚಾರ ಪಾದಯಾತ್ರೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು.

    ಭ್ರಷ್ಟಾಚಾರ ವಿರುದ್ಧ ಹೋರಾಟ, ಬಡತನ ನಿವಾರಣೆಯ ದಿಟ್ಟ ಕ್ರಮಗಳು, ಅಭಿವೃದ್ಧಿ ಯೋಜನೆಗಳು ಜನರನ್ನು ಪರ್ಣಾಮಕಾರಿ ತಲುಪಿ ಬಗೆ, ನುಡಿದಂತೆ ನಡೆದಿದ್ದರಿಂದ ಗಳಿಸಿರುವ ಜನರ ಪ್ರೀತಿ, ಕಳೆದ ಹತ್ತುವರ್ಷಗಳಲ್ಲಿ ವೃದ್ಧಿಸಿರುವು ಭಾರತದ ವರ್ಚಸ್ಸು,
    ಜಗತ್ತಿನ ರಾಷ್ಟçಗಳ ಪೈಕಿ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯನ್ನು ಪ್ರಧಾನಿ ಮೋದಿ 10 ವರ್ಷಗಳಲ್ಲಿ 5ನೇ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ, ಅದಷ್ಟು ಬೇಗ ಭಾರತ ಹೇಗೆ ವಿಶ್ವದ ಮೂರನೇ ಆರ್ಥಿಕತೆ ಆಗಬಲ್ಲದು, ಬಡತನ ವಿರುದ್ದದ ಹೋರಾಟವನ್ನು ಗೆಲ್ಲಲು ಮೋದಿ 25 ಕೋಟಿ ಜನರಿಗೆ ಸಹಾಯ ಮಾಡಿದ್ದಾರೆ.

    ಯಾವುದೇ ಸೌಲಭ್ಯ, ಸೌಕರ್ಯಗಳಿಲ್ಲದ ಬಡವರಿಗೆ ಬ್ಯಾಂಕ್ ಖಾತೆ, ಎಲ್‌ಪಿಜಿ ಗ್ಯಾಸ್ ಸಂಪರ್ಕ, ನಲ್ಲಿ ನೀರು, ಆರೋಗ್ಯ ವಿಮೆ.ಮನೆಗಳು ಶೌಚಗೃಹಗಳು ನಿರ್ಮಾಣ ಹಿಗೇ ಹಲವು ಅವಶ್ಯಕ ಸೌಕರ್ಯ ಕಲ್ಪಿಸಿ ಅವರ ಜೀವನಮಟ್ಟವನ್ನು ಉತ್ತಮಪಡಿಸಿದ್ದು ಪ್ರಧಾನಿ ಮೋದಿಯ ಬಿಜೆಪಿ ಸರಕಾರ.ಬಡವರು ಚಿಂತೆಗಳಿಂದ ಸಂಪೂರ್ಣ ಮುಕ್ತರಾಗಿ, ಸಾಧ್ಯತೆಗಳಿದಿಂ ಯುಕ್ತರಾಗಿ ಬದುಕು ಸಾಗಿಸುವಂತಾಗಬೇಕು, ವೀಕಸಿತ ಭಾರತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಘನತೆ ಮತ್ತು ಸಂತೋಷದ ಜೀವನ ನಡೆಸುವಂತಾಗಬೇಕು ಎಂಬುದು ಬಜೆಪಿಯ ಸಂಕಲ್ಪವಾಗಿದೆ ಎಂದರು.

    ಪಾದಯಾತ್ರೆ ಬಾಗಲಕೋಟೆ ನಗರದ 12 ನೇ ವಾರ್ಡಿನಲ್ಲಿ ಕೋತ್ತಲೇಶ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಪಾದಯಾತ್ರೆ ಕಿಲ್ಲಾ ಓಣಿ, ಟಂಕಸಾಲಿ ಗಲ್ಲಿ ಯಲ್ಲಿ ಮನೆ ಮನೆ ಬೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಲಾಯಿತು.

    ಪಾದಯಾತ್ರೆಯಲ್ಲಿ ಬಸವರಾಜ ಯಂಕಂಚಿ, ರಾಜು ನಾಯ್ಕರ, ಮುತ್ತಣ್ಣ ಬೇಣ್ಣೂರ, ಸಲಿಂ ಮೋಮಿನ್, ನಗರಸಭೆ ಸದಸ್ಯ ಪ್ರದೀಪ್ ರಾಯ್ಕರ್, ಶಶಿಕಲಾ ಮಜ್ಜಗಿ, ಶೋಭಾರಾವ, ರವಿ ಧಾಮಜಿ ಬೀಮಶಿ ಮೋರೆ, ತಾನಾಜಿ ಜಮಖಂಡಿ, ಮಮ್ಹದ ಆಸಿಪ್ ಗೋವೆ, ಪ್ರದೀಪ ಮೀರಜಕರ, ಸಂತೋಷ ಅರಕೇರಿ,ಸಂತೋಷ ಪಡಸಲಗಿ, ಪ್ರಜ್ವಲ ಕರಿಯಪ್ಪ ಕರಿಯಪ್ಪನ್ನವರ್, ಸಂಗಣ್ಣ ಹಡಗಲಿ,ಗೀರಶ ಅಶ್ರೀತ್, ಹನಮಂತ ದೇಶಪಾಂಡೆ,ರಾಜು ಅನ್ವೇಕರ, ರಾಘವೇಂದ್ರ ಕುಲಕರ್ಣೀ, ರಾಘು ಕರಾಂಡೆ, ಮಿಥುನ ಪತ್ತಾರ,ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts