More

    ಭಯದಲ್ಲೇ ಪುಟಾಣಿಗಳ ಲಾಲನೆ, ಶಿಥಿಲಾವಸ್ಥೆಯಲ್ಲಿ ಜಲಿಪಿಗಾರಪಲ್ಲಿ ಅಂಗನವಾಡಿ, ಕಟ್ಟಡದ ಮೇಲೆ ಬೆಳೆದಿದೆ ಅರಳಿ ಮರ!

    ಚೇಳೂರು: ಸುಮಾರು 30 ಮಕ್ಕಳ ಲಾಲನೆ-ಪಾಲನೆ, ಅಭ್ಯಾಸಕ್ಕೆ ಆಸರೆಯಾಗಿರುವ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡ ಇಂದು, ನಾಳೆಯೋ ಬೀಳುವ ಸ್ಥಿತಿಯಲ್ಲಿದ್ದು, ಪಾಲಕರ ಮಕ್ಕಳನ್ನು ಕೇಂದ್ರಕ್ಕೆ ಕಳುಹಿಸಿ ಮನೆಗೆ ಮರಳುವ ವರೆಗೂ ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.

    ತಾಲೂಕಿನ ಎಂ.ನಲ್ಲಗುಟ್ಲಪಲ್ಲಿ ಗ್ರಾಪಂ ವ್ಯಾಪ್ತಿಯ ಜಲಿಪಿಗಾರಪಲ್ಲಿಯ ಅಂಗನವಾಡಿ ಕೇಂದ್ರದ ಕಟ್ಟಡ ಸಾಕಷ್ಟು ಹಳೆಯದಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಶಿಥಿಲಗೊಂಡಿರುವ ಛಾವಣಿಯಿಂದ ಮಳೆ ನೀರು ತೊಟ್ಟಿಕ್ಕುತ್ತಿದೆ.
    ಜಿಲ್ಲೆಯ ವಿವಿಧೆಡೆ ನರೇಗಾ ಸೇರಿ ವಿವಿಧ ಯೋಜನೆಗಳಡಿ ಅಂಗನವಾಡಿ ಕೇಂದ್ರಗಳನ್ನು ಮಾದರಿಯನ್ನಾಗಿಸುತ್ತಿದ್ದರೆ ಇಲ್ಲಿನ ಕೇಂದ್ರ ಸುಣ್ಣ ಬಣ್ಣ ಕಂಡು ದಶಕಗಳೇ ಕಳೆದಿವೆ. ಕಟ್ಟಡದ ಮೇಲೆಯೇ ಅರಳಿ ಮರ ಬೆಳೆದಿದ್ದು, ಕಟ್ಟಡ ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಸಿಬ್ಬಂದಿ, ಮಕ್ಕಳು ಹಾಗೂ ಪಾಲಕರ ನೆತ್ತಿಯ ಮೇಲೆ ಜವರಾಯ ಕೂತಂತೆ ಭಾಸವಾಗುತ್ತಿದೆ.

    ಕೆಲವು ವರ್ಷಗಳ ಹಿಂದೆಯೇ ಅಂಗನವಾಡಿ ಕೇಂದ್ರ ಮಂಜೂರಾಗಿತ್ತು, ಆದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ನಿವೇಶನ ಗುರುತಿಸದೆ ನಿರ್ಲಕ್ಷ್ಯ ವಹಿಸಿದ್ದರು, ಕೊನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಪಂ ಗಮನಕ್ಕೆ ತರಲಾಯಿತಾದರೂ ಇದುವರೆಗೂ ಯಾರಿಂದಲೂ ಪ್ರತಿಕ್ರಿಯೆ ಬಂದಿಲ್ಲ, ಮಕ್ಕಳಿಗೆ ಏನಾದರೂ ಆದರೆ ಹೊಣೆ ಯಾರು ಎನ್ನುವುದು ಗ್ರಾಮಸ್ಥರ ಆಕ್ರೋಶದ ಪ್ರಶ್ನೆ.

    ಗ್ರಾಮದಲ್ಲಿ ಬೇಕಾದಷ್ಟು ಜಾಗ ಖಾಲಿ ಇದೆ, ಜಾಗ ಗುರುತಿಸಿ ಕಟ್ಟಡ ನಿರ್ಮಿಸಲು ಇನ್ನಾದರೂ ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

    ಕಟ್ಟಡ ನಿರ್ಮಾಣಕ್ಕೆ ಗ್ರಾಪಂ ಎದುರು ಗ್ರಾಮಸ್ಥರೆಲ್ಲರೂ ಸೇರಿ ಪ್ರತಿಭಟನೆ ನಡೆಸಿದ್ದೆವು, ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.
    ನರಸಿಂಹಪ್ಪ, ಜಲಿಪಿಗಾರಪಲ್ಲಿ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts