More

    ಚೇಳೂರಿನಲ್ಲಿ ಮೂಲಸೌಲಭ್ಯ ಮರೀಚಿಕೆ

    ಚೇಳೂರು: ಹೋಬಳಿ ಕೇಂದ್ರವಾಗಿದ್ದ ಚೇಳೂರು ತಾಲೂಕು ಕೇಂದ್ರವಾಗಿ ೋಷಣೆಯಾಗಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲಸೌಲಭ್ಯಗಳಿಂದ ವಂಚಿತವಾಗಿದೆ, ಸ್ವಚ್ಛಭಾರತ್ ಮಿಷನ್ ಇಲ್ಲಿ ತದ್ವಿರುದ್ಧದಂತಿದೆ!

    ಪಟ್ಟಣದಲ್ಲಿ ಸರಿಸುಮಾರ 4 ಸಾವಿರಕ್ಕೂ ಹೆಚ್ಚು ಮನೆಗಳಿದ್ದು, 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಅಲ್ಲದೆ, ಇತ್ತೀಚೆಗೆ ತಾಲೂಕು ಆಗಿಯೂ ೋಷಣೆಯಾಗಿದೆ, ಆದರೆ ಯಾವುದೇ ಸೌಲಭ್ಯಗಳಿಲ್ಲದೆ ಜನರು ತೊಂದರೆ ಅನುಭವಿಸುವಂತಾಗಿದೆ.

    ಪಟ್ಟಣದ ಕೆಲ ರಸ್ತೆಗಳಂತೂ ಹಳ್ಳಕೊಳ್ಳಗಳಿಂದ ಕೂಡಿದ್ದು ಮಳೆ ಬಂತೆಂದರೆ ಕೆಸರುಗದ್ದೆಗಳಾಗಿ ಬದಲಾಗುತ್ತವೆ, ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಯಾವುದು? ಗುಂಡಿ ಯಾವುದು? ಎಂದು ತಿಳಿಯದೆ ವಾಹನ ಸವಾರರು ಬಿದ್ದು ಎದ್ದ ಉದಾಹರಣೆಗಳು ಸಾಕಷ್ಟಿವೆ, ಕೈ ಕಾಲು ಮುರಿದುಕೊಂಡವರೂ ಇದ್ದಾರೆ!

    ಕತ್ತಲಲ್ಲಿ ಓಡಾಡುವ ಪರಿಸ್ಥಿತಿ : ಪಟ್ಟಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿಗಳ ತುಂಬ ಕಸಕಡ್ಡಿ ತುಂಬಿದ್ದು ಕೊಳಚೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ, ಇದರೊಂದಿಗೆ ಬೀದಿ ದೀಪಗಳು ಇಲ್ಲದ ಕಾರಣ ರಾತ್ರಿ ವೇಳೆಯಲ್ಲಿ ವೃದ್ಧರು, ಮಕ್ಕಳು ಓಡಾಡುವುದೇ ಕಷ್ಟವಾಗಿದೆ.

    ಚರಂಡಿ, ಬೀದಿ ದೀಪಗಳು ಹಾಗೂ ರಸ್ತೆಗಳು ಇದ್ದೂ ಇಲ್ಲದಂತಾಗಿದೆ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.
    ಜಿ.ವಿ.ಅಶ್ವತ್ಥನಾರಾಯಣ ಶೆಟ್ಟಿ, ಸ್ಥಳೀಯ.

    ಸ್ವಚ್ಛಭಾರತ ಅಭಿಯಾನದಡಿ ಸರ್ಕಾರ ಕೋಟ್ಯಾಂತರ ರೂ.ಖರ್ಚು ಮಾಡುತ್ತದೆ. ಆದರೆ ಇಲ್ಲಿ ಸ್ವಚ್ಛತೆ, ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಹಲವು ಬಾರಿ ಪಿಡಿಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ.

    ಬೀದಿ ದೀಪ, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸಿ ಮೂರು ದಿನಗಳೊಳಗೆ ಸರಿಪಡಿಸಲಾಗುವುದು.
    ಕೆ.ಜಿ.ಸುರೇಶ್, ಪಿಡಿಒ ಚೇಳೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts