More

    ಭದ್ರಕೋಟೆ ಉಳಿಸಿಕೊಂಡ ಕಾಂಗ್ರೆಸ್

    ಯಾದಗಿರಿ: ತೀವೃ ಜಿದ್ದಾಜಿದ್ದಿನಿಂದ ಕೂಡಿದ್ದ ವಿಧಾನಸಭಾ ಚುನಾವಣೆ ಫಲಿತಾಂಶ ಮಂಗಳವಾರ ಹೊರ ಬಿದ್ದಿದ್ದು, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ 1ರಲ್ಲಿ ಜೆಡಿಎಸ್ ಹಾಗೂ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಭೇರಿ ಬಾರಿಸಿದೆ.
    ಯಾದಗಿರಿ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ 2018ರಲ್ಲಿ ಜಿಲ್ಲೆಯ ಶಹಾಪುರದಲ್ಲಿ ಮಾತ್ರ ಗೆಲುವು ಸಾಸುವ ಮೂಲಕ ತನ್ನ ಅಸ್ಥಿತ್ವ ಕಳೆದುಕೊಂಡಿತ್ತು. ನಿರೀಕ್ಷೆಯಂತೆ ಸುರಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಸೋಲನುಭವಿಸಿದ್ದು, ಕಾಂಗ್ರೆಸ್ನ ರಾಜಾ ವೆಂಕಟಪ್ಪ ನಾಯಕ ಗೆಲುವಿನ ನಗೆ ಬೀರಿದ್ದಾರೆ. ಇನ್ನೂ ಯಾದಗಿರಿ ಕ್ಷೇತ್ರದಲ್ಲಿ ಯಾರೂ ಸಹ ಊಹೆ ಮಾಡದಂತೆ ಕಾಂಗ್ರೆಸ್ನ ಚನ್ನಾರಡ್ಡಿ ಪಾಟೀಲ್ ತುನ್ನೂರ ಗೆಲುವು ಸಾಸಿದ್ದಾರೆ. ಶಹಾಪುರದಲ್ಲಿ ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ಮತ್ತೊಮ್ಮೆ ವಿನ್ ಆಗುವ ಮೂಲಕ ಗೆಲುವಿನ ನಾಗಾಲೋಟ ಮುಂದುವರೆಸಿದರೆ, ಗಡಿ ಭಾಗದ ಗುರುಮಠಕಲ್ ಕ್ಷೇತ್ರದಲ್ಲಿ ಯೂತ್ ಐಕಾನ್ ಜೆಡಿಎಸ್ ಅಭ್ಯಥರ್ಿ ಶರಣಗೌಡ ಕಂದಕೂರಗೆ ಮತದಾರ ಜೈ ಎಂದಿದ್ದಾನೆ.
    ಶನಿವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಮತ ಎಣಿಕೆಯಲ್ಲಿ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಹಾವು-ಏಣಿ ಆಟ ಮುಂದುವರೆದಿತ್ತಾದರೂ, ಕೆಲ ಹೊತ್ತಿನಲ್ಲಿ ಸುರಪುರದಲ್ಲಿ ಕಾಂಗ್ರೆಸ್ ಸ್ಪಷ್ಟ ಗೆಲುವು ಸಾಸುವ ಬಗ್ಗೆ ಸೂಚನೆ ಸಿಕ್ಕಿತ್ತು. ಬೆಳಗ್ಗೆ 10 ಗಂಟೆ ಹೊತ್ತಿಗೆ ಶಹಾಪುರದಲ್ಲಿ ಕಾಂಗ್ರೆಸ್ನ ಶರಣಬಸಪ್ಪ ದರ್ಶನಾಪುರ ತಮ್ಮ ಗೆಲುವಿನ ಮುನ್ಸೂಚನೆ ತೋರುತ್ತಾ ಹೋದರೂ, ಅಲ್ಲಲ್ಲಿ ಬಿಜೆಪಿಯ ಅಮೀನರಡ್ಡಿ ಯಾಳಗಿ ಅಡ್ಡಗಾಲು ಹಾಕುತ್ತಿದ್ದರು. ಅವರ ನಂತರದಲ್ಲಿ ಜೆಡಿಎಸ್ ಅಭ್ಯಥರ್ಿ ಗುರು ಪಾಟೀಲ್ ಶಿರವಾಳ ಸ್ವಲ್ಪ ಅಂತರ ಕಾಪಾಡುವಲ್ಲಿ ಮುಂದಾದರು. ಅದಾದ ನಂತರ ಎಂಟ್ರಿ ಹೊಡೆದ ಕಾಂಗ್ರೆಸ್ ಅಭ್ಯಥರ್ಿ ಶರಣಬಸ್ಸಪ್ಪ ದರ್ಶನಾಪುರ ಲೀಡ್ ಪಡೆದುಕೊಳ್ಳುವಲ್ಲಿ ಕೊನೆವರೆಗೂ ಯಶಸ್ವಿಯಾದರು.
    ಆರಂಭದಿಂದಲೂ ಯಾದಗಿರಿ ಕ್ಷೇತ್ರದಲ್ಲಿ ಬಿಜೆಪಿಯ ವೆಂಕಟರಡ್ಡಿ ಮುದ್ನಾಳ್ಗೆ ಪ್ರಬಲ ಪೈಪೋಟಿ ನೀಡಿದ ಪಕ್ಷೇತರ ಅಭ್ಯಥರ್ಿ ಹನಮೇಗೌಡ ಬೀರನಕಲ್, ಕೊನೆ ಹಂತದವರೆಗೂ ಕೇಸರಿ ಪಡೆಯನ್ನು ಎಡೆಬಿಡಿದೆ ಕಾಡಿದರು. ಈ ಮಧ್ಯೆ ಆಗಾಗ ಸಣ್ಣ ಪ್ರಮಾಣದಲ್ಲಿ ಲೀಡ್ ಕೊಡುತ್ತ ಬಂದ ಕಾಂಗ್ರೆಸ್ನ ಚನ್ನಾರಡ್ಡಿ ಪಾಟೀಲ್ ತುನ್ನೂರ, ಕೊನೆ ಕ್ಷಣದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ಸಿಯಾದರು.
    ಮತಎಣಿಕೆ ಆರಂಭದ ಪ್ರತಿ ಕ್ಷಣಕ್ಕೂ ಗುರುಮಠಕಲ್ ಕ್ಷೇತ್ರ ರೋಚಕ ಹಣಾಹಣಿಗೆ ಸಾಕ್ಷಿಯಾಯಾಯಿತು. ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯಥರ್ಿ ಬಾಬುರಾವ್ ಚಿಂಚನಸೂರ ಮುನ್ನಡೆ ಸಾಸುವ ಮೂಲಕ ಕೈ ಪಾಳಯದಲ್ಲಿ ಪ್ರಥಮ ಸ್ಥರದಲ್ಲಿ ಭರವಸೆ ಮೂಡಿಸಿದೆ. ನಂತರದ ಅವಯಲ್ಲಿ ಜೆಡಿಎಸ್ನ ಶರಣಗೌಡ ಕಂದಕೂರ ಕಾಂಗ್ರೆಸ್ನ್ನು ಎಡೆಬಿಡದೆ ಕಾಡತೊಡಗಿದರು. ಮಧ್ಯ ಪ್ರವೇಶಿದ ಬಿಜೆಪಿ ಅಭ್ಯಥರ್ಿ ಲಲಿತಾ ಅನಪುರ ಸಹ ಲೀಡ್ ಇಲ್ಲದಿದ್ದರೂ ಕಮಲ ಪಡೆಯ ಅಸ್ಥಿತ್ವದ ಗುರುತು ಉಳಿಸಿಕೊಳ್ಳುವಲ್ಲಿ ಮುಂದಾದರೂ, 19ನೇ ಸುತ್ತಿನವರೆಗೂ ಗುರುಮಠಕಲ್ ಕ್ಷೇತ್ರದಲ್ಲಿ ಯಾರೂ ಗೆಲ್ಲುತ್ತಾರೆ ಎಂಬುದು ಊಹಿಸಲೂ ಆಗದಂತಾದರೂ ಕೂದಲೆಳೆ ಅಂತರದಲ್ಲಿ ಜಡಿಎಸ್ ಅಭ್ಯಥರ್ಿ ಶರಣಗೌಡ ಕಂದಕೂರ ತಮ್ಮ ಗೆಲುವು ದಾಖಲಿಸಿದರು.
    ಆಯಾ ಕ್ಷೇತ್ರಗಳಲ್ಲಿ ತಮ್ಮ ನಾಯಕರು ಗೆಲುವು ಸಾಸುತ್ತಿದ್ದಂತೆ ಕಾರ್ಯಕರ್ತರರ ಹಷರ್ೋದ್ಘಾರ ಮುಗಿಲು ಮುಟ್ಟತೊಡಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts