More

    ಭತ್ತ ನಾಟಿ ಮಾಡಿ ರೈತರ ಶ್ರಮ ಅರಿತ ಮಕ್ಕಳು

    ತ್ಯಾಗರ್ತಿ: ಮಲೆನಾಡಿನ ರೈತಾಪಿಗೆ ಹವಾಮಾನ ವೈಪರೀತ್ಯಗಳು, ಕೂಲಿಕಾರರ ಸಮಸ್ಯೆ, ಕೃಷಿ ಸಲಕರಣೆಗಳ ಬೆಲೆ ಏರಿಕೆ ಮುಂತಾದ ಸವಾಲುಗಳಿಂದಾಗಿ ಮಕ್ಕಳು ಈ ರೈತಾಪಿ ಕೆಲಸಗಳಲ್ಲಿ ತೊಡಗುವ ಬದಲು ಉನ್ನತ ವ್ಯಾಸಂಗ ಮಾಡಿ ಯಾವುದಾದರೂ ಉದ್ಯೋಗ ಕಂಡುಕೊಳ್ಳಲಿ ಎನ್ನುವುದು ಎಲ್ಲ ಪಾಲಕರ ಮನದಾಳ. ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯಿಂದ ಇಂದಿನ ಮಕ್ಕಳಿಗೆ ಪಾರಂಪರಿಕವಾಗಿ ಬಂದ ಕುಲಕಸುಬು ಕೂಡ ಮರೆಯಾಗುತ್ತಿದೆ. ಇದರಿಂದ ಮಕ್ಕಳು ಕೃಷಿ ಜಮೀನಿನ ಕಡೆ ಆಸಕ್ತಿ ವಹಿಸುವುದು ಕಡಿಮೆಯಾಗುತ್ತಿದೆ. ಆದರೆ ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಕೆಳಗಿನಮನೆ ಸರ್ಕಾರಿ ಉನ್ನತೀಕರಿಸಿದ ಶಾಲಾ ಶಿಕ್ಷಕರು ಶುಕ್ರವಾರ ಮಾದರಿಯಾಗಿ ಮಕ್ಕಳ ಮೂಲಕ ಭತ್ತ ನಾಟಿ ಮಾಡುವ ಕೆಲಸವನ್ನು ಕೈಗೊಂಡು ಮಕ್ಕಳಿಗೆ ಆಹಾರ ಧಾನ್ಯಗಳ ಉತ್ಪಾದನೆ ಹಾಗೂ ಅದರ ಹಿಂದಿರುವ ಶ್ರಮಗಳ ಬಗ್ಗೆ ಪರಿಚಯಿಸುವ ಪ್ರಯತ್ನ ಮಾಡಿದರು. ಮಕ್ಕಳನ್ನು ಕೃಷಿಯ ನೈಜತೆ ಹಾಗೂ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಮಕ್ಕಳನ್ನು ಗ್ರಾಮದ ರೈತರೊಂದಿಗೆ ಭತ್ತ ನಾಟಿ ಮಾಡುವ ಕೆಲಸದಲ್ಲಿ ತೊಡಗಿಸಲಾಗಿದೆ ಎಂದು ಶಿಕ್ಷಕ ನಾರಾಯಣಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts