More

    ಭಟ್ಕಳ ಕೋರ್ಟ್ ಕಟ್ಟಡದಲ್ಲಿ ಅಗ್ನಿ ಅನಾಹುತ

    ಭಟ್ಕಳ: ಪಟ್ಟಣದ ರಂಗಿನಕಟ್ಟೆಯಲ್ಲಿರುವ ಜೆಎಂಎಫ್ ನ್ಯಾಯಾಲಯ ಕಟ್ಟಡದ ಮುಂಭಾಗಕ್ಕೆ ಬೆಂಕಿ ತಗುಲಿ ಪೀಠೋಪಕರಣ ಹಾಗೂ ಹಲವು ದಾಖಲೆಗಳು ಸುಟ್ಟು ಹೋಗಿರುವ ಘಟನೆ ಶುಕ್ರವಾರ ಸಂಭವಿಸಿದೆ.

    ಪಟ್ಟಣದ ರಂಗಿನಕಟ್ಟೆಯ ನ್ಯಾಯಾಲಯ ಕಟ್ಟಡಕ್ಕೆ ಬೆಳಗಿನಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ ಎನ್ನ ಲಾಗಿದೆ. ಕಟ್ಟಡದ ಮೇಲ್ಛಾವಣಿ, ಕಂಪ್ಯೂ ಟರ್, ಜೆರಾಕ್ಸ್ ಯಂತ್ರ, ಇತರೆ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಜ್ವಾಲೆ ಕಟ್ಟಡ ವನ್ನು ವ್ಯಾಪಿಸುವುದರೊಳಗೆ ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು.

    ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ, ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ರವಿಚಂದ್ರ ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸ್ಥಳಕ್ಕೆ ದೌಡಾಯಿಸಿದ ಶಾಸಕ: ಅಗ್ನಿ ದುರಂತದ ವಿಷಯ ತಿಳಿಯುತ್ತಿದ್ದಂತೆ ಸುನೀಲ ನಾಯ್ಕ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಲೋಕೋಪಯೋಗಿ ಇಂಜಿನಿಯರ್​ರನ್ನು ಕರೆಯಿಸಿ ತಾತ್ಕಾಲಿಕವಾಗಿ ಕಟ್ಟಡ ದುರಸ್ತಿಗೆ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಅಲ್ಲದೆ, ಮರು ನಿರ್ವಣಕ್ಕೆ ನೀಲಿ ನಕ್ಷೆ ಸಿದ್ಧಪಡಿಸಿ ನೀಡುವಂತೆ ಸೂಚನೆ ನೀಡಿದ್ದಾರೆ. ಬಾರ್ ಕೌನ್ಸಿಲ್ ಅಧ್ಯಕ್ಷ ಆರ್.ಆರ್. ಶ್ರೇಷ್ಟಿ, ಮಾಜಿ ಅಧ್ಯಕ್ಷ ರಾಜೇಶ ನಾಯ್ಕ, ಕಾನೂನು ಪ್ರಕೋಷ್ಟದ ಜಿಲ್ಲಾ ಸಂಚಾಲಕ ಸುರೇಶ ನಾಯ್ಕ, ಜಿಲ್ಲಾ ಹಿಂದುಳಿದ ಮೊರ್ಚಾದ ಜಿಲ್ಲಾಧ್ಯಕ್ಷ ರವಿ ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts