More

    ಭಟ್ಕಳದಲ್ಲಿ ಪೊಲೀಸರ ಪಥ ಸಂಚಲನ

    ಭಟ್ಕಳ: ಪಟ್ಟಣ ಕರೊನಾ ವಿಷಯದಲ್ಲಿ ಹಾಟ್​ಸ್ಪಾಟ್ ಆಗಿ ಗುರುತಿಸಿಕೊಳ್ಳುತ್ತಿರುವಂತೆ ಶಾಂತಿ ಸುವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ಪಟ್ಟಣದ ಪೊಲೀಸರು ಪಥಸಂಚಲನ ನಡೆಸಿದರು.

    ಪಟ್ಟಣದಲ್ಲಿ ಮಾ.23ರಿಂದಲೇ ಲಾಕ್​ಡೌನ್ ಜಾರಿಯಾಗಿದೆ. ಆದರೂ ಭಟ್ಕಳದಲ್ಲಿ ಜನತೆ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ. ಮೊದ ಮೊದಲು ಪೊಲೀಸರು ಲಾಠಿ ಹಿಡಿದು ಜನರ ನಿಯಂತ್ರಣ ಮಾಡಿದ್ದರು. ನಂತರ ಪೊಲೀಸ್ ವರಿಷ್ಠರ ಸೂಚನೆಯಂತೆ ಲಾಠಿ ಪ್ರಹಾರ ಕಡಿಮೆ ಮಾಡಲಾಗಿತ್ತು. ಇದನ್ನೇ ವರವಾಗಿ ಪರಿಗಣಿಸಿದ ಜನರು ಮತ್ತೆ ರೋಡಿಗಿಳಿದಿದ್ದರು. ಸ್ವತಃ ಭಟ್ಕಳ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಡಿವೈಎಸ್​ಪಿ ರಸ್ತೆಗಿಳಿದು ಅನಾವಶ್ಯಕವಾಗಿ ತಿರುಗಾಡುವವರ ವಾಹನಗಳನ್ನು ವಶಕ್ಕೆ ಪಡೆದಿದ್ದರು. ಆದರೂ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಇಲಾಖೆ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ಎಚ್ಚರಿಕೆ ನೀಡಿ ಪಥಸಂಚಲನ ನಡೆಸಿದೆ.

    ಪಟ್ಟಣದ ಸರ್ಕಲ್​ನಲ್ಲಿ ಪರೇಡ್ ನಡೆಸಿ, ನಂತರ ಬೈಕ್​ಗಳಲ್ಲಿ ಜಾಥಾ ಆರಂಭಿಸಿ ಹಳೇ ಬಸ್ ನಿಲ್ದಾಣ, ಸುಲ್ತಾನ್​ಸ್ಟ್ರೀಟ್, ಚಿನ್ನದಪಳ್ಳಿ, ರಥಬೀದಿ, ಸರ್ಕಲ್ ಮುಖಾಂತರ ಶಿರಾಲಿ, ಜಾಲಿ, ಗಾಂಧಿನಗರ, ಹೆಬಳೆಯಿಂದ ಶಿರಾಲಿ ಮಾವಿನಕಟ್ಟೆಗೆ ತೆರಳಿ ಜಾಗೃತಿಯ ಸಂದೇಶ ನೀಡಿದ್ದಾರೆ. ಈ ಸಂದರ್ಭದಲ್ಲಿ ಡ್ರೋಣ್ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಡಿವೈಎಸ್​ಪಿ ಗೌತಮ ಕೆ.ಸಿ., ಸಿಪಿಐ ಪ್ರಕಾಶ ಎಂ, ಕಾರವಾರ ಅಪರಾಧ ದಳದ ಸಿಪಿಐ ರಾಮಚಂದ್ರ ನಾಯಕ, ಪಿಎಸ್​ಐ ಎಚ್ ಕುಡಗಂಟಿ, ರೂರಲ್ ಪಿಎಸ್​ಐ ಓಂಕಾರಪ್ಪ, ಎಎಸ್​ಐ ನವೀನ್ ಬೋರ್ಕರ ಸೇರಿ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ನೂರಾರು ಪೊಲೀಸರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts