More

    ಭಗವದ್ಗೀತೆ ಮನುಕುಲದ ಮೌಲಿಕ ಗ್ರಂಥ


    ಯಾದಗಿರಿ: ವ್ಯಕ್ತಿ ನಿಮರ್ಾಣಕ್ಕೆ ಸಂಭಂದಿಸಿದ ಜಗತ್ತಿನ ಅನಘ್ರ್ಯ ರತ್ನ ಭಗವದ್ಗೀತೆ. ವ್ಯಕ್ತಿತ್ವ ವಿಕಸನಕ್ಕೆ ಇದರಷ್ಟು ಪ್ರಖರವಾದ ಮಹಾಗ್ರಂಥ ಬೇರೆ ಯಾವುದೂ ಇಲ್ಲ ಎಂದು ವಿಶ್ವ ಹಿಂದು ಪರಿಷತ್ತಿನ ಉಪಾಧ್ಯಕ್ಷ ಮಹೇಶಭಟ್ಟ ಹೆಗಡೆ ತಿಳಿಸಿದರು.

    ಶನಿವಾರ ಸಂಜೆ ಗುರುಮಠಕಲ್ ತಾಲೂಕಿನ ಬೋರಬಂಡಾ ಗ್ರಾಮದ ಶ್ರೀಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಪ್ರಾಂಗಣದಲ್ಲಿ ಹಮ್ಮಿಕೂಂಡಿದ್ದ ಗೀತಾ ಜಯಂತಿಯ ಗೀತಾ ಪಠಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಗೀತೆಯಲ್ಲಿನ 18 ಅಧ್ಯಾಯಗಳ ಎಲ್ಲ 700 ಶ್ಲೂಕಗಳಲ್ಲಿನ ಅಂಶಗಳು ವ್ಯಕ್ತಿಗೆ ಶ್ರೇಷ್ಠತೆಯತ್ತ ಒಯ್ಯುವ ಜತೆಗೆ ಉತ್ತಮ ಬದುಕಿಗೆ ಸರಳ ಮಾರ್ಗ ತೋರಿಸುತ್ತವೆ. ಇದು ಮನುಕುಲ ಉದ್ಧಾರದ ಮೌಲಿಕ ಗ್ರಂಥ ಎಂದು ಹೆಳಿದರು.

    ಕೋವಿಡ್ನಿಂದ ಜನರಲ್ಲಿ ಧೈರ್ಯ ಕಡಿಮೆಯಾಗಿದೆ, ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ. ಈ ಕಾಯಿಲೆ ತಡೆಯಲು ಗೀತೆಯಲ್ಲಿ ಇದಕ್ಕೆ ಪರಿಹಾರ ಭೋದಿಸಲಾಗಿದೆ, ಈಗಿನ ಸ್ಥಿತಿಯಲ್ಲಿ ಮನಸ್ಸನ್ನು ಸಧೃಡಗೂಳಿಸುವ ಶಕ್ತಿ ಭಗವದ್ಗೀತೆಗಿದೆ ಎಂದರು.

    ಗೀತಾ ಅಭಿಯಾನ ಜಿಲ್ಲಾ ಸಂಚಾಲಕ ರವೀಂದ್ರ ಮಾತನಾಡಿ, ಸೋಂದಾ ಸ್ವರ್ಣವಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆದೇಶದಂತೆ ಭಗವದ್ಗೀತೆ ಕುರಿತು ಅಭಿಯಾನ ನಡೆಸಿ ಮಕ್ಕಳಲ್ಲಿ ಗೀತೆಯ ಸಾರವನ್ನು ತಿಳಿಯಪಡಿಸಲಾಗುತ್ತಿದೆ ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts