More

    ಭಗವಂತನಿಂದ ಗುರುಪರಂಪರೆ

    ಶೃಂಗೇರಿ: ಸನಾತನ ಧರ್ಮದಲ್ಲಿ ಗುರುಪರಂಪರೆ ಇದೆ. ಅದರ ಆರಂಭ ಭಗವಂತನಿಂದ ಪ್ರಾರಂಭವಾಗುತ್ತದೆ. ಪರಮಾತ್ಮನನ್ನು ಸದಾಶಿವ,ನಾರಾಯಣ ಹೀಗೆ ವಿವಿಧ ಹೆಸರಿನಿಂದ ಕರೆದರೂ ಅದರ ಹಿಂದಿರುವ ಚೈತನ್ಯ ಒಂದೇ ಎಂದು ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು. ಗುರುವಾರ ಜಗದ್ಗುರು ಶ್ರೀ ಸುರೇಶ್ವರಾಚಾರ್ಯರ ಜಯಂತಿ ಪ್ರಯುಕ್ತ ಪ್ರವಚನ ಮಂದಿರದಲ್ಲಿ ಆಶೀರ್ವಚನ ನೀಡಿದ ಅವರು ಪರಮಾತ್ಮ ಆತ್ಮ ತತ್ವವನ್ನು ಮಹರ್ಷಿಗಳಿಗೆ ತಿಳಿಸಿದ್ದಾರೆ. ಋಷಿಗಳು ಶಿಷ್ಯರಿಗೆ ಆತ್ಮಜ್ಞಾನದ ಅರಿವು ತಿಳಿಸುತ್ತಾರೆ. ಭಗವದ್ಗೀತೆಯಲ್ಲಿ, ಉಪನಿಷತ್ತಿನಲ್ಲೂ ಭಗವಂತನಿಗೆ ಸಮಾನರಾದವರು ಯಾರೂ ಇಲ್ಲ ಎಂದು ಉಲ್ಲೇಖಿಸಲಾಗಿದೆ. ಪ್ರಸ್ಥಾನತ್ರಯಕ್ಕೆ ಭಾಷ್ಯಗಳನ್ನು ರಚನೆ ಮಾಡಿ ಜನಸಾಮಾನ್ಯರಿಗೆ ಆತ್ಮತತ್ವ ಅರಿವು ಮೂಡಿಸಲು ಅಹರ್ನಿಶಿಯಾಗಿ ದುಡಿದ ಶ್ರೀ ಶಂಕರ ಭಗವತ್ಪಾದರಿಗೆ ಗುರುಪರಂಪರೆಯಲ್ಲಿ ವಿಶಿಷ್ಟ ಸ್ಥಾನವಿದೆ. ಸನಾತನ ಧರ್ಮದ ಶ್ರೇಯೋಭಿವೃದ್ಧಿಗಾಗಿ ದುಡಿದ ಶ್ರೇಷ್ಠ ಸನ್ಯಾಸಿ ಶ್ರೀ ಶಂಕರ ಭಗವತ್ಪಾದರಿಗೆ ನಾವು ಸದಾ ಋಣಿಯಾಗಬೇಕು ಎಂದು ಹೇಳಿದರು.

    ಶರೀರವೇ ನಾನು ಎಂದು ತಿಳಿದುಕೊಂಡಾಗ ಮಾತ್ರ ದುಖಃ ಉಂಟಾಗುತ್ತದೆ. ನಾವು ಈ ಹಿಂದೆ ಮಾಡಿದ ಕರ್ಮ ಫಲದ ಅನುಸಾರವಾಗಿ ಶರೀರ ಧರಿಸುತ್ತೇವೆ. ಶರೀರಕ್ಕೆ ಗಾಯವಾದಾಗ ನೋವು ಅನುಭವಿಸುತ್ತೇವೆ. ನಿದ್ರಾವಸ್ಥೆಯಲ್ಲಿ ಶರೀರ ನೋವು ಅರಿವಿಗೆ ಬರುವುದಿಲ್ಲ. ನಿದ್ರೆಯಲ್ಲಿ ಶರೀರ ಹಾಗೂ ಇಂದ್ರಿಯಗಳ ಕುರಿತು ಯಾವುದೇ ಅಭಿಮಾನ ಇರುವುದಿಲ್ಲ. ನಿದ್ರಾವಸ್ಥೆಯಲ್ಲಿ ಎಲ್ಲ ಜೀವಿಗಳೂ ಪರಮಾತ್ಮನಲ್ಲಿ ಐಕ್ಯವಾಗುತ್ತವೆ ಎಂದು ಉಪನಿಷತ್ತು ತಿಳಿಸಿದೆ. ಧರ್ಮ-ಅಧರ್ಮವು ಪುಣ್ಯ-ಪಾಪಗಳಿಂದ ಬರುತ್ತದೆ. ಲೌಕಿಕ ಸಂಪತ್ತಿನಿಂದ ಯಾವುದೇ ಶಾಶ್ವತ ಫಲ ದೊರಕಲು ಸಾಧ್ಯವಿಲ್ಲ. ಪಾರಮಾರ್ಥಿಕ ಸತ್ಯದ ಅರಿವಿಗೆ ಆತ್ಮಜ್ಞಾನ ಪ್ರಮುಖ ಎಂದು ನುಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts