More

    ಭಕ್ತರಿಗೆ ಮಜ್ಜಿಗೆ, ಪಾನಕ ವಿತರಣೆ


    ನಾಗಮಂಗಲ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಆಂಜನೇಯ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

    ತಾಲೂಕಿನ ಆದಿಚುಂಚನಗಿರಿ, ಹದ್ದಿನಕಲ್ಲು ಹನುಮಂತರಾಯಸ್ವಾಮಿ, ಸುಖಧರೆ, ಕಂಬದಹಳ್ಳಿ, ಬೆಳ್ಳೂರು ಕ್ರಾಸ್, ಮಠದಭೂವನ ಹಳ್ಳಿ, ಉಪ್ಪಾರಹಳ್ಳಿ, ಪಟ್ಟಣದ ಬೆಟ್ಟದ ಆಂಜನೇಯಸ್ವಾಮಿ ಮತ್ತು ಪಟ್ಟಣದ ಹೃದಯ ಭಾಗದಲ್ಲಿರುವ ಪ್ರಸನ್ನಾಂಜನೇಯ ದೇವಾಲಯ ಸೇರಿದಂತೆ ಹಲವೆಡೆ ಹನುಮನ ಜಪ ಮಾಡಲಾಯಿತು. ಭಕ್ತರಿಗೆ ಹಲವೆಡೆ ಮಜ್ಜಿಗೆ, ಪಾನಕ ನೀಡುವುದು ಮಾತ್ರವಲ್ಲದೆ ಅನ್ನಸಂತರ್ಪಣೆ ಮಾಡಲಾಯಿತು.

    ಹನುಮ ಜಯಂತಿ ನಿಮಿತ್ತ ಆಂಜನೇಯ ಮೂರ್ತಿಯನ್ನು ಹೂಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯಗಳನ್ನು ತಳಿರು-ತೋರಣ ಮತ್ತು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕೃತಗೊಳಿಸಲಾಗಿತ್ತು. ಪಟ್ಟಣದ ಉಪ್ಪಾರಹಳ್ಳಿ ಗ್ರಾಮದಲ್ಲಿ ವಿಶೇಷವಾಗಿ ಹನುಮ ಜಯಂತಿಯನ್ನು ಆಚರಿಸಲಾಯಿತು. ಸ್ವರ್ಣಲೇಪಿತ ಸಾರೋಟಿನೊಂದಿಗೆ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನದೊಂದಿಗೆ ಹನುಮನ ಮೂರ್ತಿಯನ್ನು ಗ್ರಾಮದೆಲ್ಲೆಡೆ ಮೆರವಣಿಗೆ ಮಾಡಲಾಯಿತು.

    ತಾಲೂಕಿನ ಸುಖಧರೆ ಗ್ರಾಮದಲ್ಲಿ ವಿವಿಧ ಬಗೆಯ ಮದ್ದುಗುಂಡುಗಳ ಪ್ರದರ್ಶನದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಪಟ್ಟಣ ಹಾಗೂ ಬೆಳ್ಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts