More

    ಭಕ್ತರಿಗಾಗಿ ಕೊಠಡಿ, ಸಭಾಭವನ ನಿರ್ಮಾಣ

    ಬಂಕಾಪುರ: ಬಹುತೇಕ ದೇವಸ್ಥಾನ ಕಟ್ಟಬೇಕಾದರೆ ನೀರು ಬಳಸಲಾಗುತ್ತದೆ. ಆದರೆ, ಇಲ್ಲಿಯ ಭಕ್ತರು ರೇವಣಸಿದ್ಧೇಶ್ವರ ದೇವಸ್ಥಾನ ನಿರ್ವಿುಸಲು ಕುರಿ ಹಾಲು ಬಳಸಿರುವುದು ಇತಿಹಾಸ. ಇಂತಹ ಪವಿತ್ರ ಪುಣ್ಯಕ್ಷೇತ್ರದ ದರ್ಶನ ಪಡೆಯಬೇಕು ಎಂದು ಜಿ.ಪಂ. ಸದಸ್ಯ ರಮೇಶ ದುಗ್ಗತ್ತಿ ಹೇಳಿದರು.

    ಬಂಕಾಪುರ-ಮಣ್ಣೂರ ಸರಹದ್ದಿನಲಿರುವ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ರೇಣುಕಾಚಾರ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.

    ಈ ದೇವಸ್ಥಾನ ಮುಂದೊಂದು ದಿನ ಪುಣ್ಯಕ್ಷೇತ್ರವಾಗಲಿದ್ದು, ಖಾಲಿ ಜಾಗ ನೀಡಿದರೆ ಇಲ್ಲಿ ಬರುವ ಭಕ್ತರಿಗೆ ಮತ್ತು ಸಾಮೀಜಿಗಳಿಗೆ ಉಳಿಯಲು ಕೊಠಡಿ ಮತ್ತು ಸಭಾಭವನ ನಿರ್ಮಾಣ ಮಾಡಲಾಗುವುದು ಎಂದರು.

    ಸಾನ್ನಿಧ್ಯ ವಹಿಸಿದ್ದ ಸೊಲ್ಲಾಪುರ ಹಾಲಚಿಂಚೊಳಿಯ ಅಮೋಘ ಸಿದ್ಧಮಠದ ಬಿಳಿಯನಸಿದ್ಧ ಸ್ವಾಮೀಜಿ ಮಾತನಾಡಿ, ಕುರಿ ಹಾಲಿನಿಂದ ನಿರ್ವಿುಸಿದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಈ ಪುಣ್ಯಭೂಮಿಯ ಪಾದಸ್ಪರ್ಶದಿಂದ ಮಾನವನ ದೇಹ ಪಾವನವಾಗಲಿದೆ ಎಂದರು.

    ಸವಣೂರ ಸಿಡಿಪಿಒ ಅಣ್ಣಪ್ಪ ಹೆಗಡೆ, ಶೇಖರಗೌಡ ಪಾಟೀಲ, ಮಹದೇವಪ್ಪ ಕುಂಬಾರ ಮಾತನಾಡಿದರು. ವಿಠ್ಠಲ ಬನ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶಗೌಡ ಪಾಟೀಲ, ಶಂಕರಗೌಡ ಪಾಟೀಲ, ಮಾಳಪ್ಪ ಗಡ್ಡೆ, ರಾಮಣ್ಣ ರಾಣೋಜಿ, ಸತೀಶ ಆಲದಕಟ್ಟಿ, ಸಿದ್ದಣ್ಣ ಹಳವಳ್ಳಿ, ಮಲ್ಲನಗೌಡ ಪಾಟೀಲ, ಅಜೀತ ಹಿರೇಕುರಬರ, ಲಗಮಣ್ಣ ಹುಕ್ಕೇರಿ ಇತರರು ಇದ್ದರು. ಗೌಡಪ್ಪ ಬನ್ನೆ ಕಾರ್ಯಕ್ರಮ ನಿರ್ವಹಿಸಿದರು.

    ಈ ಪೂರ್ವದಲ್ಲಿ ಸವಣೂರ ತಾಲೂಕು ಪಶುವೈದ್ಯಾಧಿಕಾರಿ ಎಚ್. ಬಿರೇಶ ಅವರು ಕುರಿಗಳಿಗೆ ಬರುವ ರೋಗಗಳ ಲಕ್ಷಣ, ಲಸಿಕೆ ಮತ್ತು ರೋಗ ಹತೋಟಿಯ ಕ್ರಮಗಳ ಕುರಿತು ಕುರಿಗಾಹಿಗಳಿಗೆ ಮಾಹಿತಿ ನೀಡಿದರು. ನಂತರ ಅನ್ನ ಸಂತರ್ಪಣೆಯ ದಾನಿಗಳನ್ನು ಸನ್ಮಾನಿಸಲಾಯಿತು. ರಾತ್ರಿ ಸವದತ್ತಿಯ ತಾಲೂಕಿನ ಮುಗಳಿಹಾಳ ಮಹಾಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಹಾಗೂ ಗೋಕಾಕ ವೀರಭದ್ರೇಶ್ವರ ಗಾಯನ ಸಂಘದವರಿಂದ ಅಹೋರಾತ್ರಿ ಭಾರಿ ಸವಾಲ್ ಜವಾಬ್ ಡೊಳ್ಳಿನ ಪದಗಳ ಸ್ಪರ್ಧೆ ನಡೆಯಿತು.<

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts