More

    ಬ್ಯಾಡಗಿಗೆ ಕಮಲ, ರಾಣೆಬೆನ್ನೂರಲ್ಲಿ ಮೇಲುಕೈ

    ರಾಣೆಬೆನ್ನೂರ: ಇಲ್ಲಿಯ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್​ಡಿ)ನ 9 ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ 6 ಕಾಂಗ್ರೆಸ್ ಹಾಗೂ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬ್ಯಾಂಕ್ ಒಟ್ಟು 14 ಸದಸ್ಯರ ಬಲಾಬಲ ಹೊಂದಿದ್ದು, 5 ಕ್ಷೇತ್ರಗಳಿಗೆ ಅವಿರೋಧ ಆಯ್ಕೆಯಾಗಿತ್ತು.

    ಚುನಾವಣೆಯಲ್ಲಿ 6 ಹಾಗೂ ಅವಿರೋಧವಾಗಿ 3 ಸದಸ್ಯರು ಸೇರಿ ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ಹಾಗೂ ಚುನಾವಣೆಯಲ್ಲಿ 3 ಹಾಗೂ ಅವಿರೋಧವಾಗಿ ಇಬ್ಬರು ಸೇರಿ ಬಿಜೆಪಿ ಬೆಂಬಲಿತ 5 ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಎಸ್. ಕುಮ್ಮೂರ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ವಿಕ್ರಮ ಕುಲಕರ್ಣಿ ಕಾರ್ಯನಿರ್ವಹಿಸಿದರು.

    ಆಯ್ಕೆಯಾದ ಅಭ್ಯರ್ಥಿಗಳು: ರಾಣೆಬೆನ್ನೂರ ಕ್ಷೇತ್ರದಿಂದ ಜಯಶೀಲಾ ಹರಪನಹಳ್ಳಿ, ಇಟಗಿಯಿಂದ ಪ್ರವೀಣ ದೂಳೆಹೊಳಿ, ಹಲಗೇರಿಯಿಂದ ನಾಗರಾಜ ಬಣಕಾರ, ಮೇಡ್ಲೇರಿಯಿಂದ ಹನುಮಪ್ಪ ಪೂಜಾರ, ಕುಪ್ಪೇಲೂರನಿಂದ ಕರೇಗೌಡ ಬಾಗೂರ, ಬಿಲ್ಲಹಳ್ಳಿಯಿಂದ ಕುಮಾರ ಬತ್ತಿಕೊಪ್ಪದ, ಜೋಯಿಸರಹರಳಹಳ್ಳಿಯಿಂದ ವೀರನಗೌಡ ಪೊಲೀಸಗೌಡ್ರ, ಕರೂರನಿಂದ ಭೀಮಪ್ಪ ಕುಡುಪಲಿ, ಸಾಲ ಪಡೆಯದವರ ಕ್ಷೇತ್ರದಿಂದ ಚಂದ್ರಪ್ಪ ರೊಡ್ಡನವರ ಆಯ್ಕೆಯಾಗಿದ್ದಾರೆ.

    ಅವಿರೋಧ ಆಯ್ಕೆಯಾದವರು: ಹೊನ್ನತ್ತಿ ಕ್ಷೇತ್ರದ ವೀರಪ್ಪ ಭಜ್ಜಿ, ಗುಡಗೂರ ಕ್ಷೇತ್ರದ ಶಾರದಾ ಕೆಂಚರೆಡ್ಡಿ, ಮುದೇನೂರ ಕ್ಷೇತ್ರದ ಸುರೇಶಪ್ಪ ಜಾಡರ, ಕಾಕೋಳ ಕ್ಷೇತ್ರದ ಬಸವಣೆಪ್ಪ ಪಾರ್ವತಿ, ಗುಡ್ಡಗುಡ್ಡಾಪುರ ಕ್ಷೇತ್ರದ ದುಂಡೆಪ್ಪ ಹರಿಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಮತ್ತೆ ಬಿಜೆಪಿ ಮಡಿಲಿಗೆ ಆಡಳಿತ

    ಬ್ಯಾಡಗಿ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರ 6 ಸ್ಥಾನಗಳಿಗೆ ಶುಕ್ರವಾರ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಆಡಳಿತವನ್ನು ಮತ್ತೊಮ್ಮೆ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 14 ಕ್ಷೇತ್ರಗಳಲ್ಲೂ ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿರುವುದು ವಿಶೇಷವಾಗಿದೆ.

    ನಾಮಪತ್ರ ವಾಪಸು ಪಡೆಯಲು ಕೊನೆಯ ದಿನವಾದ ಜ. 25ರಂದು 14 ಕ್ಷೇತ್ರಗಳ ಪೈಕಿ 8ರಲ್ಲಿ ಜನ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 6 ಕ್ಷೇತ್ರಗಳಿಗೆ ಇಲ್ಲಿನ ಎಸ್​ಜೆಜೆಎಂ ಶಾಲೆಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಮುರಡೆಪ್ಪ ಹೆಡಿಯಾಲ (ಕದರಮಂಡಲಗಿ), ಹನುಮನಗೌಡ ಪಾಟೀಲ (ಕಾಗಿನೆಲೆ), ರೇಣುಕವ್ವ ಕರಿಯಮ್ಮನವರ (ಕುಮ್ಮೂರು), ಮಹಾಲಿಂಗಪ್ಪ ಗೂಳೇರ (ಘಾಳಪೂಜಿ), ಮಹಾದೇವಪ್ಪ ಶಿಡೇನೂರು (ಬಿಸಲಹಳ್ಳಿ) ಮತ್ತು ಪುಷ್ಟಾ ಪಾಟೀಲ (ಮಲ್ಲೂರು) ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಪ್ರಕಾಶ ಎಸ್. ಹಿರಗೂಳ ಕಾರ್ಯ ನಿರ್ವಹಿಸಿದರು.

    ವಿಜಯೋತ್ಸವ: ವಿಜೇತ ಅಭ್ಯರ್ಥಿಗಳು ಪ್ರವಾಸಿ ಮಂದಿರಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು. ಬಳಿಕ ಮಾತನಾಡಿದ ಶಾಸಕರು, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಸುರೇಶ ಯತ್ನಳ್ಳಿ, ತಾಪಂ ಸದಸ್ಯ ಶಾಂತಪ್ಪ ದೊಡ್ಡಮನಿ, ವಿ.ವಿ. ಹಿರೇಮಠ, ಶಂಕ್ರಪ್ಪ ಮಾತನವರ, ಸುರೇಶ ಆಸಾದಿ, ಶಿವಯೋಗಿ ಶಿರೂರು, ಕೆಂಪೇಗೌಡ್ರ ಪಾಟೀಲ, ವೀರಭದ್ರಪ್ಪ ಗೊಡಚಿ, ಜಗದೀಶ ಕಣಗಿಲಬಾವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts