More

    ಬೊಮ್ಮಾಯಿ ಜೆಡಿಎಸ್​ಗೆ ಬರುವುದಾದರೆ ಬೇಡ ಎನ್ನುವುದಿಲ್ಲ

    ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ತೊರೆದು ಜೆಡಿಎಸ್​ಗೆ ಬರುವುದಾದರೆ ಬೇಡ ಎನ್ನುವುದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.

    ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಹಲವು ಮುಖಂಡರು, ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ. ದಿ. ಎಸ್.ಆರ್. ಬೊಮ್ಮಾಯಿ ಅವರು ತುಂಬಾ ಒಳ್ಳೆಯವರಾಗಿದ್ದರು. 2023ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಎಸ್.ಆರ್. ಬೊಮ್ಮಾಯಿ ಅವರು ಬೃಹತ್ ಮೂರ್ತಿ ಸ್ಥಾಪನೆ ಮಾಡುತ್ತೇವೆ. ಅವರಲ್ಲಿ ಹೆಸರಿನಲ್ಲಿ ರಾಜ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ತೆರೆಯುತ್ತೇವೆ. ಹುಬ್ಬಳ್ಳಿ ಈದ್ಗಾ ಮೈದಾನದ ವಿವಾದವನ್ನು ನಾನು ಮತ್ತು ಬೊಮ್ಮಾಯಿ ಸೇರಿಕೊಂಡು ಸೌಹಾರ್ದಯುತವಾಗಿ ಬಗೆಹರಿಸಿದ್ದೇವು ಎಂದರು.

    ಹಳೇ ಮೈಸೂರು ಭಾಗದಲ್ಲಿ 70, ಉತ್ತರ ಕರ್ನಾಟಕ ಭಾಗದಲ್ಲಿ 40 ಸ್ಥಾನಗಳನ್ನು ಗೆಲ್ಲುತ್ತೇವೆ. ಎಚ್.ಡಿ. ಕುಮಾರಸ್ವಾಮಿ ಮುಂದಿನ ಸಿಎಂ ಆಗುವುದು ನಿಶ್ಚಿತ. ಜತೆಗೆ ಕೇಂದ್ರಕ್ಕೆ ಹೋಗುವ ಅವಕಾಶವು ಇದೆ. ಹಾಗೇ ಆದಲ್ಲಿ ಬೇರೆಯವರು ಸಿಎಂ ಆಗುತ್ತಾರೆ ಎಂದು ಹೇಳಿದರು.

    ಎಲ್.ಕೆ. ಅಡ್ವಾಣಿ, ಜಗನ್ನಾಥರಾವ್ ಜೋಶಿ, ಮೋಹನ ಭಾಗವತ ಇವರೆಲ್ಲ ಅಪ್ಪಟ ದೇಶಭಕ್ತರು. ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಡುಪ್ಲಿಕೇಟ್ ಇದ್ದಂತೆ. ಟಿಕೆಟ್ ಹಂಚುವ ಸ್ಥಾನದಲ್ಲಿದ್ದ ಎನ್.ಎಚ್. ಕೊನರಡ್ಡಿ, ಬಸವರಾಜ ಹೊರಟ್ಟಿ ಅವರು ಜೆಡಿಎಸ್ ತೊರೆದ ಮೇಲೆ ಟಿಕೆಟ್ ಬೇಡುವ ಸ್ಥಿತಿಗೆ ತಲುಪಿದ್ದಾರೆ. ಬಸವಕೃಪಾದಿಂದ ಕೇಶವ ಕೃಪಾಗೆ ಹೋಗಿ ಸಂಕಟ ಪಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ಬಂದಿದೆ. ಅವರು ವರುಣಾದಿಂದ ಸ್ಪರ್ಧಿಸುವುದು ಸೂಕ್ತ ಎಂದು ಅಭಿಪ್ರಾಯಿಸಿದರು.

    2023ಕ್ಕೆ ಪಂಚರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತು ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರಲಿವೆ. ಇಲ್ಲಿ ಜಯಗಳಿಸಿದ ನಂತರ 2024ರ ಲೋಕಸಭೆ ಚುನಾವಣೆ ಗೆಲುವು ಸುಲಭವಾಗಲಿದೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್​ಸಿ ಇಸ್ಮಾಯಿಲ್ ಕಾಲೇಬುಡ್ಡೆ, ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದಿ, ನವೀನ ಮಡಿವಾಳರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts