More

    ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ

    ಶಿರಸಿ: ಲಾಕ್​ಡೌನ್ ನಿಯಮ ಸಡಿಲಿಸಿ ಮದ್ಯದಂಗಡಿಗಳಿಗೆ ಅವಕಾಶ ನೀಡಿದ 4 ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯೊಂದರಲ್ಲೇ ಅಂದಾಜು 5 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ.

    ಸರ್ಕಾರದ ನಿಯಮಾವಳಿ ಪ್ರಕಾರ ಮೇ 4ರಿಂದ ಬಾಗಿಲು ತೆರೆದ ಜಿಲ್ಲೆಯ 73 ವೈನ್ ಶಾಪ್​ಗಳು ಹಾಗೂ 16 ಎಂಎಸ್​ಐಎಲ್ ಮಳಿಗೆಗಳಲ್ಲಿ ದಾಖಲೆ ಪ್ರಮಾಣದ ಮದ್ಯ ಹಾಗೂ ಬಿಯರ್ ಮಾರಾಟವಾಗಿದೆ. ಮೇ 4ರಿಂದ ಮೇ 7ರವರೆಗೆ ಅಂದಾಜು 1.15 ಲಕ್ಷ ಲೀಟರ್ ಮದ್ಯ ಹಾಗೂ 43,147 ಲೀಟರ್ ಬೀಯರ್ ಮದ್ಯಪ್ರಿಯರ ಕೈಸೇರಿದೆ. ಇದರಿಂದ ದಿನವೊಂದಕ್ಕೆ ಸರಾಸರಿ 1 ಕೋಟಿ ರೂ.ಗೂ ಅಧಿಕ ಆದಾಯ ಸರ್ಕಾರದ ಬೊಕ್ಕಸಕ್ಕೆ ಸೇರ್ಪಡೆಯಾಗಿದೆ. ಸಾದಾ ದಿನಗಳಲ್ಲಿ 20-25 ಸಾವಿರ ಲೀಟರ್ ಮದ್ಯ, 3-5 ಲೀಟರ್ ಬಿಯರ್ ಮಾರಾಟವಾಗುತ್ತಿತ್ತು.

    ಪರಸ್ಪರ ಅಂತರ ಕಡ್ಡಾಯ: ಪ್ರತಿ ವೈನ್​ಶಾಪ್ ಎದುರು ಸಾಮಾಜಿಕ ಅಂತರ ಕಾಪಾಡಲು ಬಣ್ಣದಿಂದ ಚೌಕಾಕಾರದ ಗುರುತು ಮಾಡಲಾಗಿದೆ. ನಿಯಮ ಪಾಲಿಸಿದರೆ ಮಾತ್ರ ಮದ್ಯ ನೀಡುವ ಕಾರಣ ಮದ್ಯಪ್ರಿಯರು ಶಿಸ್ತಿನಿಂದಲೇ ಖರೀದಿಯಲ್ಲಿ ತೊಡಗುತ್ತಿದ್ದಾರೆ. ಅಬಕಾರಿ ಹಾಗೂ ಪೊಲೀಸ್ ಇಲಾಖೆ ವೈನ್​ಶಾಪ್​ಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಾರಣ ಯಾವುದೇ ಅವಘಡಗಳು ಈವರೆಗೆ ಸಂಘವಿಸಿಲ್ಲ.

    ದುಪ್ಪಟ್ಟು ದರ: ಗ್ರಾಮೀಣ ಭಾಗದ ಕೆಲವು ಅಂಗಡಿಕಾರರು ನಗರದಲ್ಲಿನ ಮದ್ಯದಂಗಡಿಗಳಿಂದ ಮದ್ಯ ಖರೀದಿಸಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸರ್ಕಾರದ ನಿಯಮಾವಳಿ, ಪೊಲೀಸರ ಕಣ್ಗಾವಲು ತಪ್ಪಿಸಿ ನಗರಕ್ಕೆ ಬರಲಾಗದ ಕೆಲವು ಮದ್ಯ ವ್ಯಸನಿಗಳು ಇಂತಹ ಮದ್ಯವರ್ತಿಗಳಿಂದ ಅನಿವಾರ್ಯವಾಗಿ ದುಪ್ಪಟ್ಟು ಹಣ ನೀಡಿ ಖರೀದಿಸುವಂತಾಗಿದೆ.

    ಸರ್ಕಾರವು ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ ಹತೋಟಿ ಮೀರುವ ಹಂತ ತಲುಪಿದ್ದ ಕಳ್ಳಭಟ್ಟಿ ದಂಧೆ ನಿಯಂತ್ರಣಕ್ಕೆ ತರಲು ಸಹಕಾರಿಯಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆ ತಡೆಗಟ್ಟಲು ಇದು ಅನುಕೂಲವಾಗಿದೆ. ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ. | ಮಹೇಂದ್ರ ನಾಯ್ಕ ಅಬಕಾರಿ ಅಧಿಕಾರಿ, ಶಿರಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts