More

    ಬೈಲಹೊಂಗಲ ಪಟ್ಟಣದಲ್ಲಿ ಡೆಂಗಿ ಪ್ರಕರಣ

    ಬೈಲಹೊಂಗಲ: ಪಟ್ಟಣದಲ್ಲಿ ಡೆಂಗಿ ಪ್ರಕರಣಗಳು ಪತ್ತೆಯಾಗಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಮುಖ ಓಣಿಗಳಲ್ಲಿ ವಾತಾವರಣ ಕಲುಷಿತಗೊಂಡಿದ್ದರಿಂದ ಸೊಳ್ಳೆಗಳ ಹಾವಳಿಯೂ ಹೆಚ್ಚಾಗಿದೆ.

    ಕರೊನಾ ಸೋಂಕಿನ ಆತಂಕದಲ್ಲಿದ್ದ ಬೈಲಹೊಂಗಲ ಜನರಿಗೆ ಈಗ ಡೆಂಗಿ ಭೀತಿ ಎದುರಾಗಿದೆ. ಪಟ್ಟಣದ ಮೂಗಿ ಗಲ್ಲಿಯೊಂದರಲ್ಲೇ 6 ಮಕ್ಕಳಿಗೆ ಸೇರಿ 15ಕ್ಕೂ ಹೆಚ್ಚು ಜನರಿಗೆ ಡೆಂಗಿ ಪತ್ತೆಯಾಗಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಕರೊನಾ ಸೋಂಕಿನಿಂದ ಕೆಲಸ ಕಳೆದುಕೊಂಡು ಮನೆಯಲ್ಲೇ ಕುಳಿತಿರುವ ಬಡ ಜನರು ಈಗ ಡೆಂಗಿ ಜ್ವರದ ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಟಾರ ಸ್ವಚ್ಛತೆ ಮಾಡಿ ಹಲವು ತಿಂಗಳು ಕಳೆದಿವೆ. ಸೊಳ್ಳೆ ನಿವಾರಕ ಔಷಧ ಸಿಂಪಡಣೆ ಮಾಡಿಲ್ಲ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿ ಜನರು ಡೆಂಗಿ ಜ್ವರಕ್ಕೆ ತುತ್ತಾಗುತ್ತಿದ್ದಾರೆ ಎಂದು ಮೂಗಿ ಗಲ್ಲಿಯ ನಿವಾಸಿ ಮಹಾಂತೇಶ ಮೂಗಿ ದೂರಿದ್ದಾರೆ.

    ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಕೆ.ಐ.ನಾಗನೂರ ಪ್ರತಿಕ್ರಿಯಿಸಿದ್ದು, ಬೈಲಹೊಂಗಲದ ಮೂಗಿ ಗಲ್ಲಿಯಲ್ಲಿ ಈಗಾಗಲೇ ಸೊಳ್ಳೆ ನಿವಾರಕ ಔಷಧ ಸಿಂಪಡಿಸಲಾಗಿದೆ. ಸೋಮವಾರ ಮತ್ತೆ ಸಿಂಪಡಣೆ ಮಾಡಲಾಗುವುದು. ಡೆಂಗಿ ಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಬೈಲಹೊಂಗಲದ ಮೂಗಿ ಗಲ್ಲಿಯಲ್ಲಿ ಡೆಂಗಿ ಪತ್ತೆಯಾದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸೋಮವಾರ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮನೆ, ಮನೆಗೆ ಭೇಟಿ ನೀಡುತ್ತೇನೆ. ಒಂದು ವೇಳೆ ಡೆಂಗಿ ಪತ್ತೆಯಾಗಿದ್ದರೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು.
    | ಎಸ್.ಎಸ್. ಸಿದ್ದಣ್ಣವರ ತಾಲೂಕು ಆರೋಗ್ಯ ಅಧಿಕಾರಿ, ಬೈಲಹೊಂಗಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts