More

    ಬೈರಂಬಾಡ ಸಹಕಾರ ಸಂಘಕ್ಕೆ 25.77 ಲಕ್ಷ ರೂ. ಲಾಭ : ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಮಾಹಿತಿ


    ಕೊಡಗು : ಗೋಣಿಕೊಪ್ಪದ 2021-22ನೇ ಸಾಲಿನಲ್ಲಿ ಬೈರಂಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಒಟ್ಟು 25.77 ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಹೇಳಿದರು.


    ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ 41ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
    ಸಂಘದಲ್ಲಿ ಒಟ್ಟು 1442 ಸದಸ್ಯರಿದ್ದು, 83.24 ಲಕ್ಷ ರೂ. ಪಾಲು ಬಂಡವಾಳವಿದೆ. ಕೆಸಿಸಿ ಕೃಷಿ ಸಾಲ, ಸ್ವಸಹಾಯ ಗುಂಪು ಸಾಲ, ವ್ಯಾಪಾರ ಸಾಲ, ಆಭರಣ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ನಿತ್ಯ ನಿಧಿ ಠೇವಣಿಸಾಲ ಹಾಗೂ ಸಂಬಳ ಆಧಾರಿತ ಸಾಲ ಸೇರಿ ಒಟ್ಟು 8.87 ಕೋಟಿ ರೂ. ಸಾಲ ವಿತರಿಸಲಾಗಿದೆ, ಸಂಘವು 2021-22ನೇ ಸಾಲಿನಲ್ಲಿ 57.28 ಕೋಟಿ ರೂ. ವ್ಯವಹಾರ ನಡೆಸಿದೆ. ದುಡಿಯುವ ಬಂಡವಾಳವು 14.09 ಕೋಟಿ ರೂ. ಇದ್ದು, ಲಾಭದಲ್ಲಿ ಸದಸ್ಯರಿಗೆ ಶೇ.15 ಡಿವಿಡೆಂಡ್ ನೀಡಲಾಗುವುದು ಎಂದು ತಿಳಿಸಿದರು.


    ಸಂಘದ ಉಪಾಧ್ಯಕ್ಷ ವಿ.ಆರ್.ಹರೀಶ್, ನಿರ್ದೇಶಕರಾದ ಪೊರ್ಕೊಂಡ ಬಿ.ಸವಿತಾ, ಬೊಪ್ಪಂಡ ಪಿ.ಗಣಪತಿ, ಅಪ್ಪಾರಂಡ ಎಂ. ಕಾರ್ಯಪ್ಪ, ಕೊಪ್ಪಡ ಎಂ.ಗಣೇಶ್, ಕೆ.ಎಸ್.ದಿನೇಶ್, ಜಿಲ್ಲಂಡ ಸಿ.ಉತ್ತಪ್ಪ, ಪಿ.ಎ.ಮಂಜುನಾಥ, ವಿ.ಆರ್.ಪ್ರಭಾವತಿ, ಎಚ್.ತಮ್ಮಯ್ಯ, ಸಿಇಒ ತಾತಂಡ ಡಿ.ಭೀಮಯ್ಯ, ಮೇಲ್ವಿಚಾರಕ ಶ್ರೀನಿವಾಸ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts