More

    ಬೈಕ್‌ಗೆ ಟ್ರಕ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

    ಕಲಬುರಗಿ: ತಾಲ್ಲೂಕಿನ ಪಟ್ಟಣ ಕ್ರಾಸ್ ಮತ್ತು ಸಾವಳಗಿ ನಡುವಿನ ರಸ್ತೆಯಲ್ಲಿ ಭಾನುವಾರ ಬೈಕ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಘವೇಂದ್ರ ಮತ್ತು ಶಿವರಾಜ ಮೃತಪಟ್ಟವರು. ಸಂಚಾರ ಪೊಲೀಸ್ ಠಾಣೆ– 2ರಲ್ಲಿ ಪ್ರಕರಣ ದಾಖಲಾಗಿದೆ. ಕೆಬಿಎನ್ ದರ್ಗಾ ಮೆರವಣಿಗೆ ನೋಡಲು ರಾಘವೇಂದ್ರ, ಶಿವರಾಜ ಮತ್ತು ಆತನ ಇತರೆ ಸ್ನೇಹಿತರು ಹೋಗಿದ್ದರು. ಮೆರವಣಿಗೆ ಬಳಿಕ ಪಟ್ಟಣ ಕ್ರಾಸ್ ಸಮೀಪ ಚಹಾ ಕುಡಿದು ವಾಪಸ್ ನಗರಕ್ಕೆ ಬರುತ್ತಿದ್ದರು. ಆಳಂದನತ್ತ ವೇಗವಾಗಿ ಮತ್ತು ಅಲಕ್ಷ್ಯತನದ ಟ್ರಕ್ ಚಲಾಯಿಸುತ್ತಿದ್ದ ಚಾಲಕ, ರಾಘವೇಂದ್ರ ಮತ್ತು ಶಿವರಾಜ ಅವರಿದ್ದ ಬೈಕ್‌ಗೆ ಡಿಕ್ಕಿ ಹೊಡೆದ. ಗಂಭೀರವಾಗಿ ಗಾಯಗೊಂಡು ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಟ್ರಕ್ ಸಮೇತ ಚಾಲಕ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts