More

    ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ


    ಮಡಿಕೇರಿ :ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಒಕ್ಕೂಟದ ವತಿಯಿಂದ ಎಲ್‌ಐಸಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಲಾಯಿತು.
    ಒಕ್ಕೂಟದ ಅಧ್ಯಕ್ಷ ವಿ.ಎ.ಮಂಜುನಾಥ್ ಮಾತನಾಡಿ, ರಾಷ್ಟ್ರೀಯ ನಾಯಕರ ಸೂಚನೆಯಂತೆ ನ.30 ರವರೆಗೆ ಪ್ರತಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಯಲಿದೆೆ. ಸೆ 30ರಂದು ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಪ್ರತಿಭಟನೆ ನಡೆಸಲಾಗುವುದು. ಅ.31 ರಂದು ವಿಭಾಗೀಯ ಕಚೇರಿ ಮುಂಭಾಗ ಪ್ರತಿಭಟನೆ, ನ.15 ರಂದು ಮಡಿಕೇರಿ ನಗರದಲ್ಲಿ ಮೆರವಣಿಗೆ ನಡೆಸಲಾಗುವುದು. ನ.30ರಂದು ವೃತ್ತ ಕಚೇರಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.


    ಪಾಲಿಸಿದಾರರ ಬೋನಸ್ ಹೆಚ್ಚಿಸುವುದು, ಸಾಲದ ಬಡ್ಡಿ ಕಡಿಮೆ ಮಾಡುವುದು, ಪಾಲಿಸಿದಾರರಿಗೆ ದಕ್ಷಸೇವೆ ಒದಗಿಸುವುದು, 5 ವರ್ಷ ಮೇಲ್ಪಟ್ಟ ಪಾಲಿಸಿಗಳ ನವೀಕರಣ ಮಾಡುವುದು, ಕ್ಲೇಮು ಆಗದೆ ಉಳಿದಿರುವ ಹಣವನ್ನು ಗ್ರಾಹಕರ ಕಲ್ಯಾಣಕ್ಕೆ ಮೀಸಲಿಡುವುದು ಸೇರಿದಂತೆ ಹಲವು ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts