More

    ಬೇಗ ವ್ಯಾಪಾರ ಮುಗಿಸಲು ಸೂಚನೆ

    ಹುಬ್ಬಳ್ಳಿ: ಇಲ್ಲಿಯ ಅಮರಗೋಳ ಎಪಿಎಂಸಿ ಪ್ರಾಂಗಣದ ಸಗಟು ತರಕಾರಿ ಮಾರುಕಟ್ಟೆಗೆ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಬೆಳಗ್ಗೆ 7ರಿಂದ 10 ಗಂಟೆ ವರೆಗೂ ಕಿಕ್ಕಿರಿದು ತುಂಬುವ ತರಕಾರಿ ಮಾರುಕಟ್ಟೆಯಲ್ಲಿ ಯಾವುದೇ ಅಂತರ ಕಾಯ್ದುಕೊಳ್ಳದೇ ವಹಿವಾಟು ನಡೆಸುತ್ತಿದ್ದರಿಂದ ಕಳೆದ ಒಂದು ವಾರದಿಂದ ತರಕಾರಿ ಮಾರಾಟವನ್ನು ಎಪಿಎಂಸಿಯ ವಿವಿಧ ರಸ್ತೆಗಳಿಗೆ ಹಂಚಲಾಗಿತ್ತು.

    ಆಗ ಒಂದಿಷ್ಟು ಜನ ಸಂದಣಿ ಒಂದೇ ಕಡೆ ಸೇರುವುದು ಕಡಿಮೆಯಾಗಿತ್ತು. ಆದರೂ, ತರಕಾರಿಗಾಗಿ ಜನ ಮುಗಿ ಬೀಳುವುದು ನಿಂತಿಲ್ಲ. ಜನರ ಮಧ್ಯೆ ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಆರ್. ದಿಲೀಪ್, ಎಸಿಪಿ ಗೋವಿಂದರಾಜ್ ಹಾಗೂ ನವನಗರ ಠಾಣೆ ಇನ್ಸ್​ಪೆಕ್ಟರ್ ಪ್ರಭು ಸೂರಿನ್ ಇತರ ಸಿಬ್ಬಂದಿ ತರಕಾರಿ ಮಾರುಕಟ್ಟೆಯಲ್ಲಿ ಕೆಲಕಾಲ ನಿಂತು ಆಗುಹೋಗುಗಳನ್ನು ಗಮನಿಸಿದರು.

    ಐದಾರು ರಸ್ತೆಗೆ ತರಕಾರಿ ಮಾರುಕಟ್ಟೆ ಹಂಚಿಕೆ ಮಾಡಿದ್ದರೂ ವರ್ತಕರು, ಚಿಲ್ಲರೆ ವ್ಯಾಪಾರಸ್ಥರು, ಜನರು ಮಾತ್ರ ಗುಂಪು ಗೂಡುವುದು ನಿಂತಿಲ್ಲ. ಪೊಲೀಸರು ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ. ತರಕಾರಿ ಮಾರಾಟ ವಹಿವಾಟು ಆದಷ್ಟು ಬೇಗ ಮುಗಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ವ್ಯಾಪಾರಸ್ಥರಿಗೆ ಸೂಚಿಸಿದರು.

    ಕಾಳುಕಡಿ ವ್ಯಾಪಾರ:

    ಹುಬ್ಬಳ್ಳಿ ಎಪಿಎಂಸಿಯಲ್ಲಿ ಕಳೆದ ನಾಲ್ಕೈದು ದಿನದಿಂದ ಕಾಳು ಕಡಿ ವ್ಯಾಪಾರವೂ ಪುನಾರಂಭವಾಗಿದೆ. ಕಡಲೆ, ಸೋಯಾಬಿನ್, ಗೋಧಿ, ಜೋಳ ಸೇರಿ ವಿವಿಧ ಬೆಳೆಗಳನ್ನು ರೈತರು ತಂದು ಮಾರಾಟ ಮಾಡುತ್ತಿದ್ದಾರೆ.

    ಹುಬ್ಬಳ್ಳಿಯಲ್ಲಿ 13ರಿಂದ ಕಡಲೆ ಖರೀದಿ

    ಹುಬ್ಬಳ್ಳಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಏ. 13ರಿಂದ ಖರೀದಿ ಆರಂಭಿಸಲಾಗುವುದು ಎಂದು ಸಹಕಾರ ಮಾರಾಟ ಮಹಾಮಂಡಳದ ವ್ಯವಸ್ಥಾಪಕ ಸಚಿನ್ ಪಾಟೀಲ್ ತಿಳಿಸಿದ್ದಾರೆ. ಸದ್ಯ ನೋಂದಣಿ ಪ್ರಕ್ರಿಯೆ ಮುಂದುವರಿದಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts