More

    ಬೇಕಾಬಿಟ್ಟಿಯಾಗಿ ತಿರುಗಬೇಡಿ

    ಉಪ್ಪಿನಬೆಟಗೇರಿ: ಲಾಕ್​ಡೌನ್ ಅವಧಿಯಲ್ಲಿ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಕರೊನಾ ತಡೆಗಾಗಿ ನಾವು ಇನ್ನೂ ಹೋರಾಟ ನಡೆಸವುದು ಅನಿವಾರ್ಯವಾಗಿದೆ ಎಂದು ಶಾಸಕ ಅಮೃತ ದೇಸಾಯಿ ಹೇಳಿದರು.

    ಗ್ರಾಮದ ಶ್ರೀ ಗುರು ವಿರೂಪಾಕ್ಷೇಶ್ವರ ಪ್ರೌಢಶಾಲೆ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

    ಕರೊನಾ ಸೋಂಕಿಗೆ ಹೆದರವ ಅಗತ್ಯವಿಲ್ಲ. ಆದರೆ, ಮನೆಯಿಂದ ಹೊರಗಡೆ ಬೇಕಾಬಿಟ್ಟಿಯಾಗಿ ತಿರುಗವಂತಿಲ್ಲ. ಸದಾ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸಬೇಕು. ಪಡಿತರ ಚೀಟಿದಾರ ಕುಟುಂಬಗಳಿಗೆ ಎರಡು ತಿಂಗಳ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಮುಂದಿನ ಅವಧಿಯ ಪಡಿತರ ದಾಸ್ತಾನಿದ್ದು, ವಿತರಣೆಯಾಗಲಿದೆ. ಎಲ್ಲ ಗ್ರಾಪಂ ಮಟ್ಟದಲ್ಲಿ ರಚಿಸಲಾದ ಕಾರ್ಯಪಡೆ ಸದಸ್ಯರು, ವೈದ್ಯರು, ದಾದಿಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕರೊನಾ ಹತೋಟಿಗೆ ಶ್ರಮಿಸತ್ತಿದ್ದಾರೆ ಎಂದರು.

    ನಾಮದೇವ ಶಿಂಪಿ ಸಮಾಜದವರು ತಯಾರಿಸಿದ ಮಾಸ್ಕ್​ಗಳನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕರು ವಿತರಿಸಿದರು. ತಹಸೀಲ್ದಾರ್ ಸಂತೋಷಕುಮಾರ ಬಿರಾದಾರ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ ಮಾತನಾಡಿದರು. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ತವನಪ್ಪ ಅಷ್ಟಗಿ, ಧಾರವಾಡ ಕೆಎಂಎಫ್ ನಿರ್ದೇಶಕ ಶಂಕರ ಮುಗದ, ಎಪಿಎಂಸಿ ಸದಸ್ಯ ಬಸವರಾಜ ಹೊಸೂರ, ತಾಪಂ ಇಒ ಎಸ್.ಎ. ಕಾದ್ರೊಳ್ಳಿ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರಿಯಾಂಕಾ ಚವ್ಹಾಣ, ಗ್ರಾಪಂ ಉಪಾಧ್ಯಕ್ಷೆ ರತ್ನವ್ವ ವಿಜಾಪೂರ, ಸಂತೋಷಗೌಡ ಪಾಟೀಲ, ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts