More

    ಬೆ. 9ರಿಂದ ಸಂಜೆ 5ರವರೆಗೆ ವಹಿವಾಟು

    ಹುಬ್ಬಳ್ಳಿ: ಕರೊನಾ ಮಹಾಮಾರಿ ನಿಯಂತ್ರಣದ ಕ್ರಮವಾಗಿ ನಗರದಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟನ್ನು ಜು. 13ರಿಂದ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರ ತನಕ ಮಾತ್ರ ನಡೆಸಲು ವ್ಯಾಪಾರಸ್ಥರು ತೀರ್ವನಿಸಿದ್ದಾರೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಾಜಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ತಿಳಿಸಿದರು.

    ನಗರದ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆಟೋಮೊಬೈಲ್, ಎಪಿಎಂಸಿ ವರ್ತಕರು, ಭಾಂಡೆ ಸಾಮಗ್ರಿ, ಇಲೆಕ್ಟ್ರಾನಿಕ್ ಮಳಿಗೆದಾರರು, ಸಣ್ಣ ಉದ್ಯಮದಾರರು ಸೇರಿ ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಸಂಜೆ 5ಕ್ಕೆ ವಹಿವಾಟು ಸ್ಥಗಿತಕ್ಕೆ ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರು.

    ಕರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕಾಗಿ ವರ್ತಕರಿಗೆ, ನಾಗರಿಕರಿಗೆ ತಿಳಿವಳಿಕೆ ನೀಡಲು ತಜ್ಞವೈದ್ಯ ಡಾ. ಶೈಲೇಂದ್ರಕುಮಾರ ಸಂಸ್ಥೆಗೆ ಆಗಮಿಸಿದ್ದರು. ಕರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳು, ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೊನಾ ಸೇನಾನಿಗಳಾಗಿ ವೈದ್ಯರು, ಪೊಲೀಸರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಎಲ್ಲರೂ ಬಹಳಷ್ಟು ಶ್ರಮಿಸುತ್ತಿದ್ದಾರೆ. ಅವರೊಂದಿಗೆ ಕೈಜೋಡಿಸುವ ದಿಸೆಯಲ್ಲಿ ವ್ಯಾಪಾರಸ್ಥರು ನಿಗದಿತ ಅವಧಿಯಲ್ಲಿ ವಹಿವಾಟು ನಡೆಸುವ ತೀರ್ವನಕ್ಕೆ ಬಂದಿದ್ದಾರೆ. ಈ ವ್ಯವಸ್ಥೆ ಜು. 13ರಿಂದ ಜಾರಿಯಾಗಲಿದೆ ಎಂದರು.

    ಆಗಾಗ ಬಿಸಿ ನೀರು ಕುಡಿಯುವುದು ಸೇರಿ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಜನರಿಗೆ ತಿಳಿವಳಿಕೆ ನೀಡಲು ಕರಪತ್ರ ಹಂಚಿ ಜಾಗೃತಿ ಸಹ ಮೂಡಿಸಲಾಗುವುದು ಎಂದು ಅವರು ತಿಳಿಸಿದರು.

    ಸಂಜೆ ವೇಳೆಗೆ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಜನರ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಮಾಡುವಂತೆ ವಾಯವ್ಯ ಸಾರಿಗೆ ಸಂಸ್ಥೆಗೆ ಮನವಿ ಮಾಡಲಾಗುವುದು. ಮದ್ಯ ಮಾರಾಟಕ್ಕೂ ಸಮಯ ನಿಗದಿ ಮಾಡುವ ಕುರಿತು ಸಂಬಂಧಪಟ್ಟವರೊಂದಿಗೆ ರ್ಚಚಿಸಲಾಗುವುದು ಎಂದರು.

    ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಉಪಾಧ್ಯಕ್ಷರಾದ ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ ಗೋಷ್ಠಿಯಲ್ಲಿದ್ದರು.

    ಎಪಿಎಂಸಿ ಸೆಸ್ ಕೈಬಿಡಿ

    ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಕಾಯ್ದೆಯಿಂದ ಎಪಿಎಂಸಿಯಲ್ಲಿ ವ್ಯಾಪಾರ ಮಾಡುವವರಿಗೆ ಅನ್ಯಾಯವಾಗಲಿದೆ. ಶೇ. 1.5ರಷ್ಟು ಸೆಸ್ ಹಾಕಲಾಗುತ್ತಿದೆ. ಆದರೆ, ರೈತರಿಂದ ನೇರವಾಗಿ ಉತ್ಪನ್ನ ಖರೀದಿ ಮಾಡುವವರಿಗೆ ಯಾವುದೇ ಸೆಸ್ ಇಲ್ಲ. ಹಾಗಾಗಿ ಸೆಸ್ ಕೈ ಬಿಡಬೇಕು. ಏಕರೂಪ ಕಾನೂನು ಜಾರಿ ಮಾಡಬೇಕು ಎಂದು ಕೆಸಿಸಿಐ ಮಾಜಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ ಒತ್ತಾಯಿಸಿದರು.

    ಕಳೆದ ವಾರ ಎಪಿಎಂಸಿ ನಿರ್ದೇಶಕರೊಂದಿಗೆ ರ್ಚಚಿಸಿ ಸೆಸ್ ಕಡಿಮೆ ಮಾಡಲು ಒತ್ತಾಯಿಸಲಾಗಿತ್ತು. ಆದರೆ, ಇದುವರೆಗೂ ಬೇಡಿಕೆ ಈಡೇರಿಲ್ಲ. ಎಪಿಎಂಸಿ ಸೆಸ್ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಬರುವ ತೆರಿಗೆಯೂ ಕೈ ತಪ್ಪಲಿದೆ. ಎಪಿಎಂಸಿ ವ್ಯವಸ್ಥೆಯೇ ಹಾಳಾಗಲಿದೆ. ಎಪಿಎಂಸಿ ಮೇಲೆ ಅವಲಂಬಿತ ಲಕ್ಷಾಂತರ ಕಾರ್ವಿುಕರು, ಕೆಲಸಗಾರರು ತೊಂದರೆ ಅನುಭವಿಸಬೇಕಾಗುತ್ತದೆ. ಆದಷ್ಟು ಶೀಘ್ರ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

    ಹೊಸ ಕಾಯ್ದೆಯಿಂದ ರೈತರು ಹಾಗೂ ಗ್ರಾಹಕರಿಗೆ ಪೆಟ್ಟು ಬೀಳಲಿದೆ. ರಾಜ್ಯದಲ್ಲಿ ಈಗಿರುವ ಎಪಿಎಂಸಿ ಕಾಯ್ದೆ ಮಾದರಿಯಾಗಿದೆ ಎಂದು ಶಂಕ್ರಣ್ಣ ಅಭಿಪ್ರಾಯಪಟ್ಟರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts