More

    ಬೆಳೆ ಹಾನಿ ಸರ್ವೆ ಸರಿಯಿರಲಿ

    ಮುಂಡಗೋಡ: ಕಾಡಾನೆಗಳ ದಾಳಿಯಿಂದ ಹಾನಿಯಾಗಿರುವ ಬೆಳೆಯ ಸರ್ವೆಯನ್ನು ಸರಿಯಾದ ರೀತಿಯಲ್ಲಿ ಮಾಡಲು

    ಆರ್​ಎಫ್​ಒ ಅವರಿಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಶ್ರೀಧರ ಮುಂದಲಮನಿ ತಿಳಿಸಿದರು.

    ಕಾಡಾನೆ ದಾಳಿಯಿಂದ ಹಾನಿಗೊಳಗಾದ ತಾಲೂಕಿನ ಶಿಂಗನಳ್ಳಿ ಮತ್ತು ಹುಲಿಹೊಂಡ ಗ್ರಾಮದ ರೈತರ ತೋಟ ಮತ್ತು ಗದ್ದೆಗಳಿಗೆ ಮಂಗಳವಾರ ಅವರು ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಲವು ದಿನಗಳಿಂದ ಶಿಂಗನಳ್ಳಿ, ಹುಲಿಹೊಂಡ ಮತ್ತು ನಂದಿಪುರ ಭಾಗದ ಅರಣ್ಯದ ಅಂಚಿನಲ್ಲಿರುವ ರೈತರ ತೋಟ ಮತ್ತು ಗದ್ದೆಗಳಿಗೆ ಕಾಡಾನೆ ದಾಳಿ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದವು. ಇದರಿಂದ ಕಂಗಾಲಾದ ರೈತರು ಸೋಮವಾರ ಅರಣ್ಯ ಇಲಾಖೆಗೆ ಮತ್ತು ನನಗೆ ಶಾಶ್ವತ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಈ ಕಾರಣದಿಂದ ಸ್ಥಳ ಪರಿಶೀಲನೆಗೆ ಆಗಮಿಸಿದ್ದೇನೆ ಎಂದರು.

    ಇ-ಪರಿಹಾರದಲ್ಲಿ ರೈತರ ಬೆಳೆ ಪರಿಹಾರ ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ರೈತರು ಅರಣ್ಯ ಅತಿಕ್ರಮಣ ಮಾಡಿರುವುದನ್ನು ಕೈ ಬಿಡಬೇಕು. ಅರಣ್ಯ ಇಲಾಖೆಯವರೊಂದಿಗೆ ಜನರೂ ಸಹಕಾರ ನೀಡಬೇಕು ಎಂದರು.

    ಕಾತೂರ ಆರ್​ಎಫ್​ಒ ಅಜಯ ನಾಯ್ಕ ಮಾತನಾಡಿ, ಶಾಶ್ವತ ಪರಿಹಾರಕ್ಕಾಗಿ ರೈತರ ಕೋರಿಕೆ ಇದೆ. ನಮ್ಮ ವಲಯಕ್ಕೆ 35 ಕಿ.ಮೀ.ವ್ಯಾಪ್ತಿಯಲ್ಲಿ ಆನೆ ನಿರೋಧ ಕಂದಕಗಳನ್ನು ತೋಡುವ ಬಗ್ಗೆ ಸರ್ವೆ ಮಾಡಿ ವರದಿ ಸಲ್ಲಿಸಲಾಗಿದೆ. ಅತಿ ಶೀಘ್ರದಲ್ಲಿ ಪರಿಹಾರ ನೀಡಲು ಯತ್ನಿಸಲಾಗುವುದು ಎಂದರು. ಈ ವೇಳೆ ಸ್ಥಳೀಯ ರೈತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts