More

    ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಆಗ್ರಹ

    ಭಾಲ್ಕಿ: ತಾಲೂಕಿನ ಗಡಿಭಾಗ ಸೇರಿ ವಿವಿಧೆಡೆ ಅತಿವೃಷ್ಟಿಗೆ ಬೆಳೆ ಹಾನಿ ಸಂಭವಿಸಿದ್ದು, ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ನೀಡುವಂತೆ ತಾಲೂಕು ರೈತ ಸಂಘ ಒತ್ತಾಯಿಸಿದೆ.

    ತಹಸಿಲ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಮುಂಗಾರಿನ ಆರಂಭದಲ್ಲಿ ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಮೊಳಕೆಯೊಡೆಯದೇ ಹಾಳಾಗಿವೆ. ಜುಲೈನಲ್ಲಿ ಬಿತ್ತನೆ ಕಂಡ ಸೋಯಾ, ಅವರೆ, ತೊಗರಿ, ಉದ್ದು, ಹೆಸರು ಸೇರಿ ವಿವಿಧ ಬೆಳೆಗಳು ಮತ್ತು ತೋಟಗಾರಿಕೆ ಬೆಳೆಗಳು ವಾಡಿಕೆಗಿಂತ ಹೆಚ್ಚು ಸುರಿದ ಮಳೆಗೆ ಜಲಾವೃತಗೊಂಡು ನಷ್ಟಕ್ಕೀಡಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೆ ಬೆಳೆ ಹಾನಿ ಸಮೀಕ್ಷೆ ಪಾರದರ್ಶಕವಾಗಿ ನಡೆಸಿ ಸರ್ಕಾರಕ್ಕೆ ಸಮರ್ಪಕ ವರದಿ ಸಲ್ಲಿಸಿ ಅರ್ಹ ರೈತರಿಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಲು ಒತ್ತಾಯಿಸಿದರು.

    ಬೆಳೆ ಹಾನಿ ಸಮೀಕ್ಷೆಗೆ ವಿಳಂಬ ನೀತಿ ಅನುಸರಿಸಿದರೆ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತ ಸಂಘದ ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಪಕೆ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ್, ಶೇಷರಾವ ಕಣಜೆ, ಭಾವುರಾವ ಪಾಟೀಲ್, ಶ್ರೀರಂಗ ಗಾಜರೆ, ನಾಗಶೆಟ್ಟೆಪ್ಪ ಖಂದಾರೆ, ಬಾಬುರಾವ ಸೋನಜಿ, ಬಾಬುರಾವ ಭಾಸಗೆ, ಸತ್ಯವಾನ ಸೂರ್ಯವಂಶಿ, ನಾಗಶೆಟ್ಟಿ ಲಂಜವಾಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts