More

    ಬೆಳೆ ಹಾನಿಗೆ ಪರಿಹಾರ ನೀಡಲು ಮನವಿ

    ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ರೈತರು ಮಳೆಯಿಂದ ಭತ್ತದ ಬೆಳೆಗೆ ಆದ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

    ಸನವಳ್ಳಿ ಗ್ರಾಮದಲ್ಲಿ ಸುಮಾರು 300 ಎಕರೆ ಕೃಷಿ ಜಮೀನಿನಲ್ಲಿ ರೈತರು ಶೇ. 80ರಷ್ಟು ಭತ್ತದ ಬೆಳೆ ಬೆಳೆದಿದ್ದಾರೆ. ಭತ್ತವು ತೆನೆ ಬಿಡುವ ಸಮಯದಲ್ಲಿ ಅತಿಯಾದ ಮಳೆ ಬಿದ್ದ ಕಾರಣ ಭತ್ತದ ಕಾಳು ಗಟ್ಟಿಯಾಗದೇ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ತಿರುಗಿ ಜೊಳ್ಳು ಆಗಿವೆ. ಈವರೆಗೆ ಬೆಳೆಗೆ ಉಳುಮೆ, ಬೀಜ ಬಿತ್ತನೆ, ಗೊಬ್ಬರ, ಔಷಧ, ಕಳೆಗೆ ಮತ್ತು ಇನ್ನಿತರ ಚಟುವಟಿಕೆಗಳಿಗೆ ಸಾಕಷ್ಟು ಸಾಲ ಮಾಡಿ ಖರ್ಚು ಮಾಡಿದ್ದೇವೆ. ಮಾಡಿದ ಖರ್ಚು ಕೂಡ ಕೈಗೆ ಸಿಗುವ ಸಾಧ್ಯತೆ ಇಲ್ಲ. ಆದ್ದರಿಂದ ಮಳೆಯಿಂದ ಭತ್ತದ ಬೆಳೆಗೆ ಆದ ಹಾನಿಗೆ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ನಂತರ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ರಾಜು ಗುಬ್ಬಕ್ಕನವರ, ಮಂಜು ಕೋಣನಕೇರಿ, ಫಕೀರೇಶ ಬೋಕಿಯವರ, ಕುಮಾರಸ್ವಾಮಿ ಹಿರೇಮಠ, ಪರಶುರಾಮ ಮಟ್ಟಿಮನಿ, ಅರ್ಜುನ ಆರೆಗೊಪ್ಪ, ಪ್ರಭು ಅರಶಿಣಗೇರಿ, ಬಸಪ್ಪ ಕಳಸಗೇರಿ, ಅಜ್ಜಯ್ಯ ಹಿರೇಮಠ, ಸಹದೇವಪ್ಪ ಕ್ಯಾಮನಕೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts