More

    ಬೆಳೆ ವಿಮೆ ಪರಿಹಾರ ನೀಡಲು ಒತ್ತಾಯ

    ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಪಿ.ಮಹದೇವಪುರ ಗ್ರಾಮದ ಅನೇಕ ರೈತರಿಗೆ ಬೆಳೆ ವಿಮೆ ಪರಿಹಾರ ಸಿಕ್ಕಿಲ್ಲ. ಅಲ್ಲಿಯ ಕೃಷಿ ಮತ್ತು ವಿಮೆ ಅಧಿಕಾರಿಗಳು, ಮತ್ತಿತರರು ಒಳ ಒಪ್ಪಂದ ಮಾಡಿಕೊಂಡು ರೈತರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿ ಗ್ರಾಮದ ನೂರಾರು ಮಂದಿ ಮಂಗಳವಾರ ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿ ಪ್ರತಿಭಟಿಸಲು ಮುಂದಾದ ಗ್ರಾಮಸ್ಥರಿಗೆ ರಾಜ್ಯ ರೈತಸಂಘ ಬೆಂಬಲ ನೀಡಿತು. ರೈತರಿಗೆ ಅನ್ಯಾಯ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

    2022-23ನೇ ಸಾಲಿನ ಬೆಳೆ ವಿಮೆ ಸಂಬಂಧ ನಿಗದಿತ ಮೊತ್ತವನ್ನು ಪಿ.ಮಹದೇವಪುರ ಗ್ರಾಪಂ ವ್ಯಾಪ್ತಿಯ ಸಾವಿರಕ್ಕೂ ಹೆಚ್ಚು ಮಂದಿ ರೈತರು ಕಟ್ಟಿದ್ದಾರೆ. ಆದರೆ, ವಿಮೆ ಪರಿಹಾರ ಮಾತ್ರ ಬೆರಳೆಣಿಕೆಯಷ್ಟು ರೈತರಿಗೆ ಮಾತ್ರ ಸಿಕ್ಕಿದೆ. ಬಡ ರೈತರಿಗೆ ಮೋಸ ಮಾಡುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ನೊಂದ ರೈತರ ಖಾತೆಗಳಿಗೆ ಒಂದು ವಾರದೊಳಗೆ ವಿಮೆ ಪರಿಹಾರದ ಮೊತ್ತ ಜಮಾ ಆಗಬೇಕು. ಇಲ್ಲದಿದ್ದರೆ, ಕೃಷಿ ಇಲಾಖೆ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.

    ಇದಕ್ಕಾಗಿ ಸಮಿತಿ ರಚಿಸಿ ತನಿಖೆ ಕೈಗೊಳ್ಳಲಾಗುವುದು. ತಪ್ಪು ಕಂಡುಬಂದಲ್ಲಿ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಲಾಗುವುದು ಎಂದು ಡಿಸಿ ದಿವ್ಯಾಪ್ರಭು ಭರವಸೆ ನೀಡಿದರು.

    ರೈತ ಮುಖಂಡರಾದ ಟಿ.ನುಲೇನೂರು ಎಂ.ಶಂಕರಪ್ಪ, ಕೆ.ಪಿ.ಭೂತಯ್ಯ, ಹಂಪಯ್ಯನಮಾಳಿಗೆ ಧನಂಜಯ, ಗ್ರಾಮಸ್ಥರಾದ ದೊಡ್ಡೇಗೌಡ, ತಿಮ್ಮಾರೆಡ್ಡಿ, ಕೃಷ್ಣ, ವೀರಣ್ಣ, ನಾರಾಯಣರೆಡ್ಡಿ, ಹನುಮಂತರಾಯ, ವೆಂಕಟಪ್ಪ, ಗೋವಿಂದಪ್ಪ, ಪಾಲಮ್ಮ, ಗೌರಮ್ಮ, ರೇಣುಕಮ್ಮ, ರಂಗಮ್ಮ, ಜಾನಕಮ್ಮ, ನಿಂಗಮ್ಮ, ಶಶಿಕಲಾ, ಲಕ್ಷ್ಮಿದೇವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts