More

    ಬೆಳಗಾವಿ ವನಿತೆಯರು ಧೈರ್ಯಶಾಲಿಗಳು

    ಬೆಳಗಾವಿ: ಜಿಲ್ಲೆಯ ಮಣ್ಣಿನಿಂದ ಬಂದವರು ವೀರ ವನಿತೆಯರು. ಬೆಳಗಾವಿಗೆ ತನ್ನದೆಯಾದ ಸ್ಥಾನಮಾನ ಇದೆ. ಇಲ್ಲಿನ ಮಹಿಳೆಯರು ಎಲ್ಲಿದ್ದರೂ ವೀರರೇ. ಇತಿಹಾಸದಲ್ಲೂ ನಮಗೆ ಅತ್ಯುನ್ನತವಾದ ಗೌರವವಿದೆ ಎಂದು ಪುಣೆಯ ರೀಚರ್ಖ ದಿ ಇಕೊಸೋಸಿಯೊ ಟ್ರೈಬ್ ಸಂಸ್ಥಾಪಕಿ ಅಮಿತಾ ದೇಶಪಾಂಡೆ ಹೇಳಿದರು.

    ನಗರದ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಸಭಾಂಗಣದಲ್ಲಿ ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕವು ಸೋಮವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಾಹಿಳಾ ಸಮಾವೇಶದಲ್ಲಿ ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿ ಪಡೆದ ಸ್ವಶಕ್ತಿ ಸಂಘದ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ತಂತ್ರಜ್ಞಾನವು ಆಧುನಿಕ ಯುಗದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತದೆ. ಅದರಿಂದಲೇ ಗ್ರಾಮೀಣ ಮತ್ತು ದುರ್ಗಮ ಪ್ರದೇಶದ ಮಹಿಳೆಯರಿಗೆ ಒಳ್ಳೆಯ ಅವಕಾಶ ಕಲ್ಪಿಸಲು ಸಾಧ್ಯವಾಗಿದೆ ಎಂದರು.

    ಕೈಚೀಲಗಳು, ಟೋಟ್‌ಗಳು, ಗೃಹಾಲಂಕಾರಿಕ ಮತ್ತು ಇನ್ನಿತರ ಅಲಂಕಾರಿಕ ಸಾಮಗ್ರಿ ತಯಾರಿಸಲಾಗುತ್ತದೆ. ಗ್ರಾಮೀಣ ಹಾಗೂ ಸಣ್ಣ ಪಟ್ಟಣಗಳಿಂದ ಬರುವ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಂದಲೇ ಇಕೋಸೊಸಿಯೋ ಉದ್ಯಮ ನಡೆಯುತ್ತಿದೆ ಎಂದು ತಿಳಿಸಿದರು.

    ಸಾಹಿತಿ ಹಾಗೂ ವಿದ್ವಾಂಸ ಡಾ.ಬಾಳಪ ಈರಪ್ಪ ಚಿನಗುಡಿ ಮಾತನಾಡಿ, ವಿಶ್ವಕ್ಕೆ ತಾಯಿತನ, ವಾತ್ಸಲ್ಯ, ಪ್ರೀತಿ, ತ್ಯಾಗ ಎಲ್ಲ ಕೌಶಲ ವಿರುವ ಮಹಿಳೆ ತಾಯಿ ಎನಿಸಿಕೊಳ್ಳತ್ತಾಳೆ. ಕನ್ನಡ ನಾಡಿನಲ್ಲಿ ಅದರಲ್ಲಿಯೂ ಬೆಳಗಾವಿ ಮಹಿಳೆಯ ಸಾಧನೆ ಕೇಳಿದರೆ ರೋಮಾಂಚನವಾಗುತ್ತದೆ. ಅದೇ ನೆಲದಿಂದ ಬಂದ ಈಗಿನ ಮಹಿಳೆಯರು ಸಮಸ್ಯೆ ಎದುರಿಸುವ ಸಾಮರ್ಥ್ಯ ತೋರಬೇಕು ಎಂದು ಸಲಹೆ ನೀಡಿದರು. ಹೆಣ್ಣು ಮಗುವಿಗೆ ಉನ್ನತ ಶಿಕ್ಷಣಕ್ಕಾಗಿ ಆಶಾ ಕೋರೆ ವಿದ್ಯಾರ್ಥಿ ವೇತನ ಪ್ರಾರಂಭಿಸಲಾಯಿತು. ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಉಪಕುಲಪತಿ ಡಾ.ನಿತಿನ ಗಂಗಾನೆ, ಡಾ.ಎನ್.ಎಸ್.ಮಹಾಂತಶೆಟ್ಟಿ, ಡಾ.ಅಲ್ಕಾ ಕಾಳೆ, ಡಾ.ಪ್ರೀತಿ ಕೋರೆ, ಡಾ.ಸೋನಲ್ ಜೋಷಿ, ಡಾ.ನೇಹಾ ಧಡೆದ, ಡಾ.ರೇಣುಕಾ, ಡಾ.ಹರಪ್ರೀತ್ ಕೌರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts