More

    ಬೆನಕನಕೊಂಡ ರಸ್ತೆ ಅಭಿವೃದ್ಧಿಗೆ ಚಾಲನೆ

    ರಾಣೆಬೆನ್ನೂರ: ಇಲ್ಲಿಯ ಎಪಿಎಂಸಿ ಸದಸ್ಯ ಪರಮೇಶ ಗೂಳಣ್ಣನವರ ಸ್ವಂತ ಖರ್ಚಿನಲ್ಲಿ ರಾಣೆಬೆನ್ನೂರ-ಬೆನಕನಕೊಂಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

    ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಇಂದು ಕೇಕ್ ಕತ್ತರಿಸಿ ಅಥವಾ ಪಾರ್ಟಿ ಮಾಡುತ್ತ ಜನ್ಮದಿನ ಆಚರಿಸಿ ಕೊಳ್ಳುತ್ತಾರೆ. ಆದರೆ ಪರಮೇಶ ಅವರು ರೈತರಿಗೆ ಹಾಗೂ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ರಸ್ತೆ ಅಭಿವೃದ್ಧಿ ಪಡಿಸುವ ಮೂಲಕ ಜನ್ಮದಿನ ಆಚರಣೆ ಮಾಡಿಕೊಂಡಿದ್ದು ಶ್ಲಾಘನೀಯ ಎಂದರು.

    ಪರಮೇಶ ಗೂಳಣ್ಣನವರ ಮಾತನಾಡಿ, ಈ ರಸ್ತೆ ಹಲವು ವರ್ಷದಿಂದ ಗಿಡ ಗಂಟಿಗಳು ಬೆಳೆದು ಪಾಳು ಬಿದ್ದು, ರೈತರು, ಜಾನುವಾರು ಓಡಾಡಲು ತೀವ್ರ ತೊಂದರೆಯಾಗುತ್ತಿತ್ತು. ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ 2 ಕಿ.ಮೀ. ರಸ್ತೆ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ನಗರಸಭೆ ಸದಸ್ಯರಾದ ಪ್ರಕಾಶ ಬುರಡಿಕಟ್ಟಿ, ಪ್ರಕಾಶ ಪೂಜಾರ, ನಾಗರಾಜ ಅಡ್ಮನಿ, ಎಪಿಎಂಸಿ ಸದಸ್ಯ ರಮೇಶ ನಾಯ್ಕ, ಪ್ರಮುಖರಾದ ವಿಶ್ವನಾಥ ಪಾಟೀಲ, ರಾಯಣ್ಣ ಮಾಕನೂರ, ಮೃತ್ಯುಂಜಯ ಕಾಕೋಳ, ಚನ್ನಬಸಪ್ಪ ತೋಟಪ್ಪನವರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts