More

    ಬೆಟ್ಟದ ತುದಿಯಲ್ಲಿ ಬೆಳಗಿದ ರಾಮಜ್ಯೋತಿ


    ಯಾದಗಿರಿ: ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರ ದ ಹೃದಯ ಭಾಗದಲ್ಲಿನ ಐತಿಹಾಸಿ ಕೋಟೆಯ ಮೇಲಿನ ರಾಮಲಿಂಗೇಶ್ವರ ದೇವರ ಗುಡಿಯಲ್ಲಿ ಯುವಕರಿಂದ ವಿಶೇಷ ಪೂಜೆ ಹಾಗೂ ರಾಮಜ್ಯೋತಿ ಬೆಳಗುವ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.


    ಬೆಟ್ಟದ ತುತ್ತ ತುದಿಯಲ್ಲಿ ಕಬ್ಬಿಣದಿಂದ ತಯಾರಿಸಲಾದ ಬೃಹತ್ ಹಣತೆಯಲ್ಲಿ ಸೋಮವಾರ ಸಂಜೆ ದೀಪ ಪ್ರಜ್ವಲನೆ ಮಾಡಿ ಮಾತನಾಡಿದ ಬಿಜೆಪಿ ಸಂಘಟನಾ ವಿಭಾಗ ಪ್ರಧಾನ ಕಾರ್ಯದಶರ್ಿ ಅರುಣ ಬಿನ್ನಾಡಿ, ಜಗತ್ತೆ ನಿಬ್ಬೆರಗಾಗಿ ನೋಡುವಂತೆ ಮಾಡಿದ ಶ್ರೀರಾಮ ಮಂದಿರ ನಿಮರ್ಾಣ ಹಾಗೂ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಪ್ರಧಾನಿ ನರೇಂದ್ರ ಮೋದಿಯವರ ಶ್ರಮದಿಂದ ಸಾಕಾರಗೊಂಡಿದೆ ಎಂದರು.


    ಅಯ್ಯಪ್ಪ ಸ್ವಾಮಿಯ ಶಬರಿಮಲೈನಲ್ಲಿ ಗೋಚರಿಸುವ ಮಕರ ಜ್ಯೋತಿಯ ಮಾದರಿಯಲ್ಲಿ ಯಾದಗಿರಿ ಬೆಟ್ಟದಲ್ಲಿ ರಾಮಜ್ಯೋತಿ ಬೆಳಗಿಸಿರುವುದು ವಿಶೇಷವಾಗಿದೆ. ಶ್ರೀರಾಮ ದೇಗುಲ ನಿಮರ್ಾಣದಿಂದ ಸತ್ಯ ಹಾಗೂ ಇತಿಹಾಸದ ನೈಜ ಪರಿಚಯ ದೇಶದ ಜನರಿಗೆ ಆಗಿದೆ ಎಂದು ಹೇಳಿದರು.


    ನಗರಸಭೆ ಮಾಜಿ ಅಧ್ಯಕ್ಷ ಸುರೇಶ ಅಂಬಿಗೇರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಶ್ರೀರಾಮನ ನಾಮ ಫಲಕವನ್ನು ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ್ ಅನಾವರಣಗೊಳಿಸಿದರು. ಮುಖಂಡರಾದ ಮಂಜುನಾಥ ಜಡಿ, ಮರೆಪ್ಪ ಸೈದಾಪುರ, ಶಂಕರ ಕರಣಿ, ಸಾಬು ಚಂಡ್ರಿಕಿ. ಮಹೇಶ ಜಲವಾದಿ, ತಾಯಿ ಭುವನೇಶ್ವರಿ ದೇವಸ್ಥಾನದ ಅರ್ಚಕ ಶಿವರಾಮ ಕಟ್ಟಿಮನಿ, ಆಕಾಶ, ವಿಶ್ವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts