More

    ಬೆಟಗೇರಿ ದುರ್ಗಾದೇವಿ ರಥೋತ್ಸವ ಅದ್ದೂರಿ

    ಅಳವಂಡಿ: ಸಮೀಪದ ಬೆಟಗೇರಿ ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೆ ಅಂಗವಾಗಿ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ಜರುಗಿತು.

    ಜಾತ್ರೋತ್ಸವ ನಿಮಿತ್ತ ದೇವಿಗೆ ಬೆಳಗ್ಗೆ ವಿವಿಧ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಂದ ಅಗ್ನಿ ಹಾಯುವ ಕಾರ್ಯಕ್ರಮ ನಡೆಯಿತು. ಹರಕೆ ಹೊತ್ತವರು ಮನೆಯಿಂದ ದೇವಸ್ಥಾನದವರೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.

    ಸಂಜೆ ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಥ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆಹಣ್ಣು, ಹೂವನ್ನು ತೂರಿ ಭಕ್ತಿ ಸಮರ್ಪಿಸಿದರು. ಜಾತ್ರೆ ನಿಮಿತ್ತ ಗುರುವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಪ್ರಮುಖರಾದ ವೆಂಕನಗೌಡ ಹಿರೇಗೌಡ್ರ, ಗವಿಸಿದ್ದಪ್ಪ ಕರಡಿ, ವೀರೇಶ ಸಜ್ಜನ, ಮಲ್ಲಿಕಾರ್ಜುನ ಯತ್ನಳ್ಳಿ, ಶ್ರೀನಿವಾಸ ಪಾತರದ, ಬಸವರಾಜ ಯತ್ನಳ್ಳಿ, ಶರಣಪ್ಪ ಮತ್ತೂರು, ಹನುಮರಡ್ಡಿ, ನಾಗರಾಜ ಪಾತ್ರದ, ಕೊಟ್ರೇಶ ಗೊರೆಬಾಳ, ವೆಂಕಟೇಶ, ಭೀಮಣ್ಣ, ಯಂಕಣ್ಣ ನಾಗರಡ್ಡಿ, ಶರಣಪ್ಪ ಮತ್ತೂರ, ಶ್ರೀಕಾಂತ ಭಾವಿ, ವೆಂಕಟೇಶ, ಶರಣಪ್ಪ, ಜಗದೀಶ, ಸಿದ್ದಣ್ಣ ಸಜ್ಜನ, ಬಸವರಾಜ ನಾಗರಡ್ಡಿ, ಏಳುಕೋಟೇಶ, ಮುದಿಯಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts