More

    ಬೆಂಬಲ ಬೆಲೆಯಲ್ಲಿ ಉಳ್ಳಾಗಡ್ಡಿ ಖರೀದಿಯಾಗಲಿ

    ಡಂಬಳ: ಲಾಕ್​ಡೌನ್ ಪರಿಣಾಮದಿಂದ ಉಳ್ಳಾಗಡ್ಡಿ ಬೆಲೆ ಕುಸಿದಿದೆ. ಇದರಿಂದ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡಲೇ ಬೆಂಬಲಬೆಲೆ ನಿಗದಿಪಡಿಸಿ ಉಳ್ಳಾಗಡ್ಡಿ ಖರೀದಿಸಬೇಕೆಂದು ಡಂಬಳ ವ್ಯಾಪ್ತಿಯ ರೈತರು ಉಪತಹಸೀಲ್ದಾರ್ ಸಿ.ಕೆ. ಬಳವಟಿಗೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಬೇಸಿಗೆ ಹಂಗಾಮಿನಲ್ಲಿ ಈ ಭಾಗದ ರೈತರು 1000 ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆದಿದ್ದು, ಸದ್ಯ ಉಳ್ಳಾಗಡ್ಡಿ ಕಟಾವು ಮಾಡಲಾಗಿದೆ. ಬೆಂಗಳೂರು-ಹುಬ್ಬಳ್ಳಿ ಮತ್ತಿತರ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಉಳ್ಳಾಗಡ್ಡಿ 200 ರಿಂದ 250 ರೂ.ಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಸಾಗಾಟದ ಖರ್ಚೂ ಬರದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. 1 ಎಕರೆಯಲ್ಲಿ ಉಳ್ಳಾಗಡ್ಡಿ ಬೆಳೆಯಲು 40 ರಿಂದ 50 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ, ಸಮರ್ಪಕ ಬೆಲೆ ಇಲ್ಲದೆ, ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಪ್ರತಿ ಕ್ವಿಂಟಾಲ್ ಉಳ್ಳಾಗಡ್ಡಿಗೆ 1500 ರೂ. ಬೆಂಬಲಬೆಲೆ ನಿಗದಿ ಪಡಿಸಬೇಕು ಅಥವಾ ಪ್ರತಿ ಎಕರೆಗೆ 2500 ರೂ. ಪರಿಹಾರ ಘೊಷಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಮನವಿಯಲ್ಲಿ ಎಚ್ಚರಿಸಿದ್ದಾರೆ.

    ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ, ಆರ್.ಆರ್. ಕೊರ್ಲಗಟ್ಟಿ, ಮಲ್ಲಪ್ಪ ಕರಡ್ಡಿ, ಸಿದ್ದಪ್ಪ ಬಂಡಾರಿ, ದೇವಪ್ಪ ಹೊಸಕೇರಿ, ನೆರೆಯಪ್ಪ ಮಠದ, ಬಿ.ಎಚ್. ಪಲ್ಲೇದ, ಲಂಕೆಪ್ಪ ಬಂಡಿ, ರಾಮಪ್ಪ ಮಂಗೋಜಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts