More

    ಬೆಂಗಳೂರಿನ ಇಬ್ಬರಿಗೆ ಪಾಸಿಟಿವ್

    ತೀರ್ಥಹಳ್ಳಿ: ಬೆಂಗಳೂರಿನಲ್ಲಿದ್ದ ತಾಯಿಯನ್ನು ಮಂಡಗದ್ದೆ ಸಮೀಪದ ಸಿಂಧುವಾಡಿಯಲ್ಲಿರುವ ಸೋದರ ಮಾವನ ಮನೆಗೆ ಮನೆಗೆ ಬಿಡಲು ಬಂದಿದ್ದ 25 ವರ್ಷದ ಮಗ ಹಾಗೂ ಆತನ ಸ್ನೇಹಿತನಿಗೆ ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇಬ್ಬರೂ ಯುವಕರನ್ನು ಬುಧವಾರ ರಾತ್ರಿಯೇ ಶಿವಮೊಗ್ಗ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಿಂಧುವಾಡಿ ಮೂಲದ ಮಹಿಳೆಯನ್ನು ಆಕೆಯ ತಮ್ಮನ ಮನೆಗೆ ಬಿಡಲು ಜೂ.17ರಂದು ಕಾರಿನಲ್ಲಿ ಬಂದಿದ್ದರು. ಮಾವನ ಮನೆಯವರ ಒತ್ತಾಯದ ಮೇಲೆ ಇಲ್ಲಿಯೇ ಉಳಿದುಕೊಂಡಿದ್ದರು. ಜೂ.22ರಂದು ಅವರಿಬ್ಬರ ಸ್ವ್ಯಾಬ್ ಪರೀಕ್ಷೆ ಮಾಡಿದ್ದು ಇಬ್ಬರಿಗೂ ಸೋಂಕು ಇರುವುದು ಬುಧವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಮಂದಿ ಇರುವ ಸಿಂಧುವಾಡಿಯ ಒಂದು ಮನೆಯನ್ನು ಕಂಟೇನ್​ವೆುಂಟ್ ಹಾಗೂ ಇನ್ನೊಂದು ಮನೆಯನ್ನು ಬಫರ್ ಜೋನ್ ಎಂದು ಘೊಷಣೆ ಮಾಡಲಾಗಿದೆ. ಸೋಂಕಿತರು ಬೆಂಗಳೂರಿನ ಆಡುಗೋಡಿ, ಎಲೆಕ್ಟ್ರಾನಿಕ್​ಸಿಟಿ ನಿವಾಸಿಗಳಾಗಿದ್ದು ಈ ಪೈಕಿ ಒಬ್ಬರು ಜಿಮ್ಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts