More

    ಬೆಂಗಳೂರಿನಲ್ಲಿ ಮತ್ತೆ ಮಹಾ ಹೋರಾಟ

    ನರಗುಂದ: ಮಹದಾಯಿ ಯೋಜನೆಗೆ ಮೀಸಲಿಟ್ಟಿರುವ 500 ಕೋಟಿ ರೂ ಅನುದಾನದಲ್ಲಿ ತಕ್ಷಣವೇ ಕಾಮಗಾರಿ ಆರಂಭಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿವಿಧ 9 ಇಲಾಖೆಗಳನ್ನು ಸ್ಥಳಾಂತರಗೊಳಿಸಬೇಕು. ಮಹಾರಾಷ್ಟ್ರ ಸರ್ಕಾರ ಪದೇಪದೆ ಗಡಿ ಕ್ಯಾತೆ ತೆಗೆಯುತ್ತಿರುವುದಕ್ಕೆ ದಿಟ್ಟ ನಿರ್ಧಾರ ಕೈಗೊಳ್ಳುವಂತೆ ಆಗ್ರಹಿಸಿ ರೈತಸೇನಾ ಕರ್ನಾಟಕ ಸಂಘಟನೆಯಿಂದ ಬೆಂಗಳೂರಿನಲ್ಲಿ ಮತ್ತೆ ನಿರಂತರ ಹೋರಾಟ ಪ್ರಾರಂಭಿಸಲಾಗುವುದು ಎಂದು ರೈತಸೇನಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.

    ಮಹದಾಯಿ ಯೋಜನೆಗೆ ಆಗ್ರಹಿಸಿ ನರಗುಂದ ಪಟ್ಟಣದಲ್ಲಿ ನಡೆಯುತ್ತಿರುವ 2024 ನೇ ದಿನದ ಹೋರಾಟ ವೇದಿಕೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಹದಾಯಿ ಯೋಜನೆಗೆ 500 ಕೋಟಿ ರೂ ಅನುದಾನ ನೀಡಿದ್ದಾರೆ. ಅದರಲ್ಲಿ ನವಿಲು ತೀರ್ಥ ಜಲಾಶಯ ಹಾಗೂ ನದಿ ಜೋಡಣೆಯ ಕಾಮಗಾರಿಗೆ ತಕ್ಷಣವೇ ಟೆಂಡರ್ ಕರೆದು ಕಾಮಗಾರಿ ಕೈಗೆತ್ತಿಕೊಳ್ಳಬೇಕು. ನಂಜುಂಡಪ್ಪ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು. ಪೊಲೀಸರು ಕರೊನಾ ನೆಪದಲ್ಲಿ ರೈತರ ಹೋರಾಟ ತಡೆದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮಲ್ಲಣ್ಣ ಅಲೇಕಾರ, ಗುರು ರಾಯನಗೌಡ್ರ, ಎಸ್.ಬಿ. ಜೋಗಣ್ಣವರ, ನರೇಶ ಜೋಳದ, ಚಿದು ಹಂಚಿನಮನಿ, ವಾಸು ಚವ್ಹಾಣ, ರಾಘವೇಂದ್ರ ಗುಜಮಾಗಡಿ, ಈರಬಸಪ್ಪ ಹೂಗಾರ, ರಾಮು ಸಾಬಳೆ, ಪರಮೇಶಪ್ಪ ಅಣ್ಣಿಗೇರಿ, ಅರ್ಜುನ ಮಾನೆ, ಬಸಪ್ಪ ಗುಡದರಿ, ಎಚ್.ಸಿ. ಹಿರೇಹೊಳಿ, ರಿಯಾಜ್ ಪಠಾಣ, ಜೈತುನಬಿ ಮುಲ್ಲಾನವರ, ಎಸ್.ಕೆ. ಗಿರಿಯಣ್ಣವರ, ಕಾಶವ್ವ ಉಳ್ಳಾಗಡ್ಡಿ, ಯಾಸೀನ್ ವಿಜಯಪೂರ, ಅಂದಪ್ಪ ಕುರಿ, ಚಿನ್ನವ್ವ ರಡ್ಡೇರ, ಪಾರವ್ವ ದಾನರಡ್ಡಿ, ಶಂಕ್ರಪ್ಪ ಜಾಧವ ಹಾಗೂ 4 ಜಿಲ್ಲೆ 9 ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts