More

    ಬೃಹತ್ ಗುಂಡಿಗಳಿಂದ ಅಧ್ವಾನ

    ವಿಜಯವಾಣಿ ಸುದ್ದಿಜಾಲ ರಟ್ಟಿಹಳ್ಳಿ

    ರಟ್ಟಿಹಳ್ಳಿ-ಹಿರೇಕೆರೂರ ತಾಲೂಕುಗಳನ್ನು ಸಂರ್ಪಸುವ ಮುಖ್ಯರಸ್ತೆ ಹದಗೆಟ್ಟು ಹೋಗಿದೆ. ಅಲ್ಲಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

    ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಒಳಪಡುವ ರಟ್ಟಿಹಳ್ಳಿ- ತಾವರಗಿ ಮಾರ್ಗವಾಗಿ ಹಿರೇಕೆರೂರಗೆ ಸಂರ್ಪಸುವ 15 ಕಿ.ಮೀ. ರಸ್ತೆ ಇದಾಗಿದೆ. ತಾವರಗಿ ಕ್ರಾಸ್​ನಿಂದ ಹಿರೇಕೆರೂರವರೆಗಿನ 5 ಕಿ.ಮೀ. ರಸ್ತೆ ರಾಜ್ಯ ಹೆದ್ದಾರಿಯಾಗಿ ಅಭಿವೃದ್ಧಿ ಹೊಂದಿದ್ದರೆ, ರಟ್ಟಿಹಳ್ಳಿಯಿಂದ ತಾವರಗಿ ಕ್ರಾಸ್​ವರೆಗಿನ 10 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದೆ.

    ಪಟ್ಟಣದ ಹೊರವಲಯದಿಂದ ತಾವರಗಿ ಕ್ರಾಸ್​ವರೆಗೆ 5-6 ಕಡೆ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ. ಕೆಲ ಗುಂಡಿಗಳಿಗೆ ಪ್ಯಾಚ್​ವರ್ಕ್ ಮಾಡಿದ್ದು ಬಿಟ್ಟರೆ ಹಲವು ವರ್ಷಗಳಿಂದ ರಸ್ತೆ ಮರು ಡಾಂಬರೀಕರಣಗೊಂಡಿಲ್ಲ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗಿದೆ. ಲೋಕೋಪಯೋಗಿ ಇಲಾಖೆಯವರು ತುರ್ತು ರಸ್ತೆಯಲ್ಲಿರುವ ಗುಂಡಿಗಳನ್ನಾದರೂ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.

    ಈ ಪ್ರಮುಖ ರಸ್ತೆಯಲ್ಲೇ ಕೃಷಿ ಸಚಿವ ಬಿ.ಸಿ. ಪಾಟೀಲ ಸೇರಿದಂತೆ ಅವಳಿ ತಾಲೂಕುಗಳ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಸಂಚರಿ ಸುತ್ತಾರೆ. ಆದರೂ ರಸ್ತೆ ಅಭಿವೃದ್ಧಿಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಮಾರ್ಗದಲ್ಲಿ ರಟ್ಟಿಹಳ್ಳಿ ಪಟ್ಟಣದ ಹೊರವಲಯದಿಂದ 1.8 ಕಿ.ಮೀ. ರಸ್ತೆಯನ್ನು ಮರುಡಾಂಬರೀಕರಣ ಮಾಡಲಾಗಿದೆ. ಇದೇ ಕಾಮಗಾರಿಯನ್ನು ತಾವರಗಿವರೆಗೂ ಮುಂದುವರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ರಟ್ಟಿಹಳ್ಳಿಯಿಂದ ತಾವರಗಿ ಗ್ರಾಮದ ಕ್ರಾಸ್​ವರೆಗೆ ಕೆಲವೆಡೆ ಗುಂಡಿಗಳು ನಿರ್ವಣವಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ರಸ್ತೆ ಡಾಂಬರೀಕರಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ರಸ್ತೆಯಲ್ಲಿ ನಿರ್ವಣವಾಗಿರುವ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚಿಸಲಾಗುವುದು.

    | ಬಿ.ಸಿ. ಪಾಟೀಲ ಕೃಷಿ ಸಚಿವ

    ರಟ್ಟಿಹಳ್ಳಿ ತಾವರಗಿ ಕ್ರಾಸ್​ವರೆಗೆ ತುಂಬ ಹದಗೆಟ್ಟು ಹೋಗಿರುವಲ್ಲಿ ಡಾಂಬರೀಕರಣ ಮತ್ತು ಕೆಲವೆಡೆ ಪ್ಯಾಚ್ ವರ್ಕ್ ಕಾಮಗಾರಿಯನ್ನು ಶೀಘ್ರ ಕೈಗೊಳ್ಳಲಾಗುವುದು.

    | ಎಸ್.ವಿ. ಪುರಾಣಿಕ ಎಇಇ, ಲೋಕೋಪಯೋಗಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts