More

    ಬೀದರ್ ಜಿಲ್ಲೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ

    ಬಸವಕಲ್ಯಾಣ: ಬೀದರ್ ಜಿಲ್ಲೆಯ ರೈತರ ಸಮಸ್ಯೆ ಬಗೆಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

    ರೈತರು ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಅತಿವೃಷ್ಟಿಯಿಂದ ಉದ್ದು, ಹೆಸರು, ಸೋಯಾ, ತೊಗರಿ ಇತರ ಬೆಳೆಗಳು ಸಂಪೂರ್ಣ ನಾಶವಾಗಿ ಕಂಗಾಲಾಗಿದ್ದಾರೆ. ತೆಲಂಗಾಣ ಮಾದರಿಯಲ್ಲಿ ಜಿಲ್ಲೆ ರೈತರಿಗೆ ಪ್ರತಿ ಎಕರೆಗೆ 10 ಸಾವಿರ ರೂ.ಪ್ರೋತ್ಸಾಹ ಧನ ಕೊಡಬೇಕು. ದಿನದ 24 ಗಂಟೆ ಕೃಷಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಲಾಗಿದೆ.

    ಬಿಎಸ್ಎಸ್ಕೆಗೆ ಕಬ್ಬು ಪೂರೈಸಿದ ಬೆಳೆಗಾರರ ಬಿಲ್ ಪಾವತಿಗಾಗಿ ಸರ್ಕಾರದಿಂದ 20 ಕೋಟಿ ರೂ. ಅನುದಾನ ಕೊಟ್ಟು ರೈತರ ಹಿತ ಕಾಪಾಡಬೇಕು. ಮುಂದಿನ ಹಂಗಾಮಿನಲ್ಲಿ ಕಾರ್ಖಾನೆ ಲೀಸ್ ಕೊಡುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲ ಸಕ್ಕರೆ ಕಾಖರ್ಾನೆಗಳು ಕಡಿಮೆ ಇಳುವರಿ ತೋರಿಸುತ್ತಿದ್ದು, ಸಕ್ಕರೆ ನಿರ್ದೇಶಕರ ಪರಿಶೀಲನೆ ವೇಳೆ ಇಳುವರಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ರೈತರಿಗೆ ಧೋಖಾ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

    ಸಂಪೂರ್ಣ ಬೆಳೆ ನಷ್ಟವಾದರೂ ರೈತರ ಖಾತೆಗೆ ಬೆಳೆ ವಿಮೆ ಜಮೆ ಆಗಿಲ್ಲ. ಶೀಘ್ರ ಜಮೆಗೆ ಕ್ರಮ ಕೈಗೊಳ್ಳಬೇಕು. ಗೋದಾವರಿ ಬೇಸಿನ್ (ಬಚಾವತ್ ಆಯೋಗ) ಪ್ರಕಾರ ಬೀದರ್ ಜಿಲ್ಲೆಯ ರೈತರಿಗೆ 23 ಟಿಎಂಸಿ ನೀರು ಉಪಯೋಗ ಆಗುವಂತೆ ಯೋಜನೆಗಳು ರೂಪಿಸಬೇಕು. ಎಲ್ಲ ರೈತರ ಭೂಮಿ ಸರ್ಕಾರದಿಂದಲೇ ಸಮಗ್ರ ಭೂಮಾಪನ ಮಾಡಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ರೈತರಿಂದ ತರಕಾರಿಗಳಿಗೆ ಶೇ.10ರಂತೆ ಕಮಿಷನ್ ವಸೂಲಿ ಮಾಡುತ್ತಿದ್ದು ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ಕಾಯರ್ಾಧಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಬಸವಕಲ್ಯಾಣ ತಾಲೂಕು ಕಾರ್ಯಾಧ್ಯಕ್ಷ ಸುಭಾಷ ರಗಟೆ, ಭಾಲ್ಕಿ ತಾಲೂಕು ಅಧ್ಯಕ್ಷ ಬಾಬುರಾವ ಜೆ, ಕಮಲನಗರ ಅಧ್ಯಕ್ಷ ಪ್ರವೀಣ ಕುಲಕರ್ಣಿ, ಮನೋಹರರಾವ ಪಾಟೀಲ್, ಮಹಾದೇವ ರೆಡ್ಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts