More

    ಬೀದರ್ ಜಿಲ್ಲಾದ್ಯಂತ ಹನುಮಾನ ಜಯಂತಿ ಸಂಭ್ರಮ

    ಬೀದರ್: ನಗರ ಸೇರಿ ಜಿಲ್ಲಾದ್ಯಂತ ಶನಿವಾರ ರಾಮ ಭಕ್ತ ಶ್ರೀ ಹನುಮಾನ ಜಯಂತಿ ಶ್ರದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು. ಹನುಮಾನ ಮಂದಿರಗಳಲ್ಲಿ ಬೆಳಗ್ಗಿನ ಜಾವ 5ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಶುರುವಾದವು. ವೀರಾಂಜನೇಯನಿಗೆ ತೊಟ್ಟಿಲಲ್ಲಿ ಹಾಕಿ ತೂಗಲಾಯಿತು. ಪೂಜೆ, ಅಭಿಷೇಕ, ಭಜನೆ ನಡೆದವು. ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹನುಮನ ಲೀಲೆ ಕುರಿತು ಉಪನ್ಯಾಸ ಸಹ ನೀಡಲಾಯಿತು.

    ಜನವಾಡ ರಸ್ತೆಯ ಶ್ರೀ ರೋಕಡೆ ಹನುಮಾನ ಮಂದಿರ, ಹೈದರಾಬಾದ್ ರಸ್ತೆಯ (ಶಾರ್) ಹನುಮಾನ ಮಂದಿರ ಹಾಗೂ ಕೆಇಬಿ ಹತ್ತಿರದ ಹನುಮಾನ ದೇವಸ್ಥಾನದಲ್ಲಿ ಭಾರಿ ಸಂಖ್ಯೆ ಭಕ್ತರು ಸೇರಿದ್ದರು. ಬೆಳಗ್ಗೆ ಮತ್ತು ಸಂಜೆ ಜನಜಾತ್ರೆಯೇ ಇತ್ತು. ಇತರೆಡೆಯ ಮಂದಿರಗಳಿಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತೆರಳಿ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಶನಿವಾರ ಜಯಂತಿ ಬಂದಿದ್ದರಿಂದ ಸಹಜವೇ ಹೆಚ್ಚಿನ ಜನರಿದ್ದರು.

    ಭವ್ಯ ಮೆರವಣಿಗೆ: ನಗರದಲ್ಲಿ ಬಜರಂಗ ದಳ ಮತ್ತು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಎಲ್ಲೆಡೆ ಬಜರಂಗ ಬಲಿ ಕೀ ಜೈ ಘೋಷಣೆಗಳು ಮಾರ್ದನಿಸಿದವು. ಶಾಹಗಂಜ್ ಹನುಮಾನ ಮಂದಿರದಿಂದ ಪ್ರಾರಂಭಗೊಂಡ ಮೆರವಣಿಗೆ ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ಚೌಕ್, ಕ್ರಾಂತಿ ಗಣೇಶ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಆಗಮಿಸಿ ಸಮಾವೇಶಗೊಂಡಿತು.

    ಶ್ರೀ ರಾಜೇಶ್ವರ ಶಿವಾಚಾರ್ಯ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಸೋಮಶೇಖರ ಪಾಟೀಲ್ ಗಾದಗಿ, ಎನ್.ಆರ್. ವಮರ್ಾ, ಸೂರ್ಯಕಾಂತ ಶೆಟಕಾರ, ಶಶಿ ಹೊಸಳ್ಳಿ, ಹಣಮಂತ ಬುಳ್ಳಾ, ಗುರುನಾಥ ರಾಜಗೀರಾ, ವೀರೇಶ ಸ್ವಾಮಿ, ವಿಶ್ವ ಹಿಂದು ಪರಿಷತ್ ಅಧ್ಯಕ್ಷ ರಾಮಕೃಷ್ಣ ಸಾಳೆ, ಬಜರಂಗ ದಳ ಜಿಲ್ಲಾ ಸಂಚಾಲಕ ಸುನೀಲ ದಳವೆ ಇತರರಿದ್ದರು.

    ಪ್ರಸಾದ ವ್ಯವಸ್ಥೆ: ರೈಲ್ವೆ ನಿಲ್ದಾಣ ಬಳಿ ವಾರ್ತಾ ಇಲಾಖೆ ಕಚೇರಿ ಹತ್ತಿರದ ಹನುಮಾನ ಮಂದಿರದಲ್ಲಿ ಬೆಳಗ್ಗೆ ವಿಶೇಷ ಪೂಜೆ, ತೊಟ್ಟಿಲು ಕಾರ್ಯಕ್ರಮ ನಡೆಯಿತು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ಪ್ರಮುಖರಾದ ಮಹಾದೇವ ಪಾಂಚಾಳ, ಶಂಕರ ಖ್ಯಾಮಾ, ರಾಜಕುಮಾರ, ದೇಶಪಾಂಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts