More

    ಬಿಸಿಗಾಳಿ ತಡೆಗೆ ಮತಗಟ್ಟೆಗಳಲ್ಲಿ ಫ್ಯಾನ್

    ಚಿತ್ರದುರ್ಗ: ಬೇಸಿಗೆಯ ಬೀಸಿಗಾಳಿ ಕುರಿತಂತೆ ರಾಜ್ಯ ನಿರ್ವಹಣಾ ಪ್ರಾಧಿಕಾರ, ಜನರ ಆರೋಗ್ಯ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದ ಮಾರ್ಗಸೂಚಿ ಬಿಡುಗಡೆ ಮಾಡಿರುವ ಬೆನ್ನಲ್ಲೇ, ಸವಾಲುಗಳು ಹೆಚ್ಚಾಗಿವೆ.
    ರಾಜ್ಯದಲ್ಲಿ ನಡೆಯಲಿರುವ ಎರಡು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಪ್ರಕ್ರಿಯೆ ಸುಗಮಗೊಳಿಸುವ ಆಯಾ ಜಿಲ್ಲಾ ಚುನಾವಣಾಧಿಕಾರಿಗಳ ಮೇಲೆ ಒತ್ತಡ ಬೀಳುತ್ತಿದೆ.
    ಈಚಿನ ಹತ್ತಾರು ವರ್ಷಗಳಲ್ಲಿ ಬೇಸಿಗೆ ತಾಪದಲ್ಲಿ ಏರಿಕೆ ಕಾಣುತ್ತಿದ್ದು, ಈ ವರ್ಷವೂ ಅಸಾಧ್ಯವೆಂಬಂತೆ ಬಿಸಿಲಿನ ತಾಪ ಹೆಚ್ಚಾಗಿದೆ. ಇದರಿಂದಾಗಿ ಒಂದೆಡೆ ಜನ ಸಾಮಾನ್ಯರ ಬಳಲುತ್ತಿದ್ದರೆ, ಪ್ರಚಾರದಲ್ಲಿ ನಿರತ ಅಭ್ಯರ್ಥಿಗಳು ಹಾಗೂ ಕಾರ‌್ಯಕರ್ತರು, ಬೆಂಬಲಿಗರು ಹೈರಾಣಾಗುತ್ತಿದ್ದಾರೆ.
    ಸದ್ಯದಲ್ಲೇ ಮಳೆ ಬರದಿದ್ದರೆ ನೀರು, ವಿದ್ಯುತ್ ಕೊರತೆ ಇನ್ನಷ್ಟು ಅಧಿಕವಾಗಲಿದೆವೆಂಬ ಆತಂಕವಿದೆ. ಮುನಿದ ಪ್ರಕೃತಿಯಿಂದಾಗಿ ಎದುರಾಗಲಿರುವ ಸಮಸ್ಯೆಗಳ ನಡುವೆ ಚುನಾವಣೆ ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಅಗತ್ಯ ಸಮಾಲೋಚನೆಯಲ್ಲಿ ನಿರತರಾಗಿದ್ದಾರೆ.
    ಮತಗಟ್ಟೆಗಳಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಚಿತ್ರದುರ್ಗ ಜಿಲ್ಲಾಡಳಿತ ಮುಂದಾಗಿದ್ದು, ಎಲ್ಲ ಮತಗಟ್ಟೆಗಳ ಕೊಠಡಿಗಳಲ್ಲಿ ಫ್ಯಾನ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಮತಗಟ್ಟೆಗಳಿಗೆ ನಿರಂತರ ವಿದ್ಯುತ್ ಪೂರೈಕೆ, ಕುಡಿವ ನೀರು, ಶೌಚಗೃಹ, ಎಲ್ಲ ಮತಗಟ್ಟೆಗಳಲ್ಲಿ ಒಆರ್‌ಎಸ್ ಲಭ್ಯತೆ, ಸಾಧ್ಯವಾದಷ್ಟು ಸಮೀಪದಲ್ಲಿ ಆಂಬುಲೆನ್ಸ್ ಹಾಗೂ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದ್ದಾರೆ.
    ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿ 2167 ಮತಗಟ್ಟೆಗಳ ಪೈಕಿ ಚಿತ್ರದುರ್ಗ ಜಿಲ್ಲೆಗೆ ಸಂಬಂಧಿಸಿದ 1661 ಮತಗಟ್ಟೆಗಳಲ್ಲಿ ಫ್ಯಾನ್ ಅಳವಡಿಸಲಾಗುತ್ತಿದೆ ಹಾಗೂ ಕಾರಿಡಾರ್‌ಗಳಲ್ಲಿ ಸೂಕ್ತ ನೆರಳು ಇಲ್ಲವಾದಲ್ಲಿ ತೆಂಗಿನ ಗರಿ ಚಪ್ಪರ ಅಥವಾ ಶಾಮಿಯಾನ ಹಾಕಲು ಸೂಚಿಸಿದ್ದಾರೆ.
    ಬಿಸಿಲ ತಾಪಕ್ಕೆ ಇವಿಎಂಗಳು ಕೈಗೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮತಯಂತ್ರಗಳನ್ನು ಕಾಯ್ದಿರಿಸಿ ಕೊಳ್ಳಲಾಗಿದೆ. ವಿಶೇಷವಾಗಿ ವಿವಿ ಪ್ಯಾಟ್‌ಗಳ ಕ್ಷಮತೆಯೆಡೆಗೆ ಗಮನಹರಿಸುವಂತೆ ಸೂಚಿಸಿದ್ದಾರೆ.
    *ವೆಬ್‌ಕಾಸ್ಟಿಂಗ್: ಜಿಲ್ಲೆ ವ್ಯಾಪ್ತಿ 280 ಕ್ರಿಟಿಕಲ್ ಮತಗಟ್ಟೆಗಳಿವೆ. ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಟಿಕಲ್ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, ಮೈಕ್ರೋ ಅಬ್ಸರ್‌ವರ್ ಅಥವಾ ಸಿಆರ್‌ಪಿಎಫ್ ಯೋಧರ ನಿಯೋಜನೆ ಕಡ್ಡಾಯ. ಆದರೆ, ಜಿಲ್ಲಾಡಳಿತ ಈ ಎಲ್ಲ ಕ್ರಿಟಿಕಲ್ ಮತಗಟ್ಟೆಗಳು ಸೇರಿ ಶೇ.50 ಮತಗಟ್ಟೆಗಳಲ್ಲಿ ಶೇ.50 ವೆಬ್‌ಕಾಸ್ಟಿಂಗ್‌ಗೆ ವ್ಯವಸ್ಥೆ ಮಾಡಿದೆ. ಉಳಿದ ಶೇ.50ರ ಪೈಕಿ 300ಕ್ಕೂ ಹೆಚ್ಚು ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್‌ವರ್‌ಗಳನ್ನು ನಿಯೋಜಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts