More

    ಬಿಸಿಎಂ ಕಚೇರಿಗೆ ಜಿಪಂ ಅಧ್ಯಕ್ಷರ ದಿಢೀರ್ ಭೇಟಿ

    ಶಿಗ್ಗಾಂವಿ: ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತರಣಾಧಿಕಾರಿಗಳ ಕಾರ್ಯಾಲಯಕ್ಕೆ ಜಿ.ಪಂ. ಅಧ್ಯಕ್ಷ ಬಸವರಾಜ ದೇಸಾಯಿ ಬುಧವಾರ ದಿಢೀರ್ ಭೇಟಿ ನೀಡಿ, ತಾಲೂಕಿನ ವಿವಿಧ ವಸತಿ ಶಾಲೆಗಳಲ್ಲಿ ಅಡುಗೆಯವರು ಹಾಗೂ ಸಹಾಯಕರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದರು.

    ನೇರ ನೇಮಕಾತಿ ನೆಪದಲ್ಲಿ ತಾಲೂಕಿನಾದ್ಯಂತ ವಸತಿ ಶಾಲೆಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಡುಗೆಯವರು ಮತ್ತು ಸಹಾಯಕರನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಸವರಾಜ, ಕೆಲಸದಿಂದ ತೆಗೆದು ಹಾಕಿದವರನ್ನು ಮರು ನೇಮಕ ಮಾಡಿಕೊಳ್ಳಬೇಕು ಎಂದು ಅಧಿಕಾರಿ ಎಸ್.ಬಿ. ಪುರಾಣಿಕಗೆ ತಾಕೀತು ಮಾಡಿದರು.

    ತಾಲೂಕಿನಲ್ಲಿ ಒಟ್ಟು 25 ಅಡುಗೆಯವರು ಮತ್ತು ಅಡುಗೆ ಸಹಾಯಕರು ವಿವಿಧ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ 2002 ರಿಂದ 2019ರವರೆಗೆ ಸೇವೆ ಸಲ್ಲಿಸಿದ್ದಾರೆ. ಈಗ ಅವರನ್ನು ಕೆಲಸದಿಂದ ತೆಗೆದು ಹಾಕಿರುವುದರಿಂದ ಅವರ ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ಕೂಡಲೆ ಅವರನ್ನು ಕೆಲಸಕ್ಕೆ ತೆಗೆದುಕೊಂಡು ಅವರ ಜೀವನ ನಿರ್ವಹಣೆಗೆ ನೆರವಾಗಿ ಎಂದರು.

    ತಾಪಂ ಇಒ ಪ್ರಶಾಂತ ತುರಕಾಣಿ, ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಓಲೇಕಾರ, ಶಾಂತಾ ಗಡ್ಡಿಯವರ, ಸುಜಾತಾ ಹಾರೆಗೊಪ್ಪ, ರೇಣುಕಾ ದ್ಯಾಮನಗೌಡ್ರ, ಶಾಂತವ ತುಪ್ಪದವರು, ರಿಂದವ್ವ ಭಜಂತ್ರಿ, ಶಶಿಕಲಾ ಜೋಗಣ್ಣವರ, ಶಾಂತಾ ಕಲಾಲ್, ಶಾಂತವ್ವ ಸಿಂಗಾಪುರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts