More

    ಬಿಳವಾಣಿಯಿಂದ ಸೊರಬವರೆಗೆ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ

    ಸೊರಬ: ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯುಂಟಾಗುವ ಸನ್ನಿವೇಶ ಸೃಷ್ಟಿಯಾದ್ದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆಯೂ ಜಾತಿ, ಧರ್ಮಗಳ ಭೇದವಿಲ್ಲದೆ ಒಂದಾಗಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.
    ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಗುರುವಾರ ತಾಲೂಕಿನ ಬಿಳವಾಣಿ ಗ್ರಾಮದಿಂದ ಸೊರಬದವರೆಗೆ ಹಮ್ಮಿಕೊಂಡಿದ್ದ ರಾಷ್ಟ್ರಧ್ವಜದೊಂದಿಗೆ ಸ್ವಾತಂತ್ರ್ಯದ ನಡಿಗೆ ಪಾದಯಾತ್ರೆ ನಂತರ, ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
    ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವರು ಪ್ರಸ್ತುತ ಮನೆ ಮನೆಗಳಿಗೆ ರಾಷ್ಟ್ರಧ್ವಜ ನೀಡುತ್ತಿದ್ದಾರೆ. ದೇಶ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಗೌರವ ತೋರದವರ ವಿರುದ್ಧ ಮಹಾತ್ಮ ಗಾಂಧೀಜಿ ಅವರಂತೆ ಶಾಂತಿಯುತ ಹೋರಾಟ ಮಾಡುವುದು ತಿಳಿದಿದೆ ಹಾಗೂ ಸುಭಾಷ್ ಚಂದ್ರಬೋಸ್ ಅವರಂತೆ ಕ್ರಾಂತಿ ಮಾಡುವುದು ತಿಳಿದಿದೆ ಎಂದು ಎಚ್ಚರಿಸಿದರು.
    ಮಧು ಬಂಗಾರಪ್ಪ ಪತ್ನಿ, ಪುತ್ರ ಹೆಜ್ಜೆ:
    ಪಾದಯಾತ್ರೆಯಲ್ಲಿ ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಮತ್ತು ಪುತ್ರ ಸೂರ್ಯ ಹೆಜ್ಜೆ ಹಾಕಿದರು. ಪಾದಯಾತ್ರೆ ಬರುವ ಮಾರ್ಗದ ಗ್ರಾಮಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಆರತಿ ಬೆಳಗ ಸ್ವಾಗತ ನೀಡಿದರು. ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜು ಸಮೀಪ ವಿದ್ಯಾರ್ಥಿನಿಯರು ಮಧು ಬಂಗಾರಪ್ಪ ಅವರಿಗೆ ರಾಖಿ ಕಟ್ಟಿ ಶುಭ ಕೋರಿದರು. ಮಳೆ-ಗಾಳಿಯ ನಡುವೆಯು ರಾಷ್ಟ್ರ ಧ್ವಜದೊಂದಿಗೆ ಸುಮಾರು 15 ಕಿಮೀ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು. ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts