More

    ಬಿಳಗಿ ಮಾರಿಕಾಂಬಾದೇವಿ ಜಾತ್ರೆ ಇಂದಿನಿಂದ

    ಸಿದ್ದಾಪುರ: ಭಕ್ತರ ಇಷ್ಟಾರ್ಥ ಪೂರೈಸುತ್ತಿರುವ ತಾಲೂಕಿನ ಐತಿಹಾಸಿಕ ಕ್ಷೇತ್ರ ಬಿಳಗಿ ಶ್ರೀ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವ ಜ. 28ರಿಂದ ಫೆ. 5ರೆವರೆಗೆ ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

    ಬಿಳಗಿ ಅರಸರ ಕಾಲದಿಂದ ಆರಂಭಗೊಂಡ ಮಾರಿಕಾಂಬಾ ಜಾತ್ರೆ ಅಂದಿನಿಂದ ಇಂದಿನವರೆಗೂ ಸಂಪ್ರದಾಯದಂತೆ ನಡೆಯುರತ್ತಿದೆ. ಆರೇಳು ತಲೆಮಾರುಗಳ ಹಿಂದಿನಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತಿರುವುದರಿಂದ ಬಿಳಗಿ ಹಾಗೂ ಸುತ್ತ್ತನ ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಅಲ್ಲದೆ, ದೂರದ ನೆಂಟರಿಷ್ಟರು ಆಗಮಿಸಿ ಮಾರಿಕಾಂಬಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ, ಹರಕೆ ಒಪ್ಪಿಸುವ ಮೂಲಕ ತಮ್ಮ ಮನದ ಇಷ್ಟಾರ್ಥ ಈಡೇರಿಸುವಂತೆ ದೇವಿಯಲ್ಲಿ ಮೊರೆ ಇಡುತ್ತಾರೆ.

    ಮಾರಿಕಾಂಬಾದೇವಿಗೆ ಬಿಳಗಿ ಸೀಮೆಯ ಭಕ್ತರು ಮಾತ್ರವಲ್ಲ, ನಾಡಿನ ಹಲವೆಡೆ ಭಕ್ತರಿದ್ದು ವರ್ಷಕ್ಕೆರಡು ಬಾರಿ ಭೇಟಿ ನೀಡಿ ಪೂಜೆ ಸಲ್ಲಿಸಿ ಹೋಗುತ್ತಾರೆ. ಜಾತ್ರಾ ಸಮಯದಲ್ಲಿ ಜಿಲ್ಲೆಯ ವಿವಿಧ ತಾಲೂಕು ಹಾಗೂ ಮಂಗಳೂರು, ಉಡುಪಿ ಜಿಲ್ಲೆಯ ಭಕ್ತರು ಆಗಮಿಸಿ ಮಾರಿಕಾಂಬಾದೇವಿಗೆ ಪೂಜೆ ಸಲ್ಲಿಸಿ ತಾವು ತಂದ ಕಾಣಿಕೆ ನೀಡಿ, ಹರಕೆ ಒಪ್ಪಿಸಿ ಮೂರ್ನಾಲ್ಕು ದಿನ ಇಲ್ಲಿಯೇ ಉಳಿದು ಹೋಗುತ್ತಾರೆ. ಮಾರಿಕಾಂಬಾ ದೇವಾಲಯದಲ್ಲಿ ಪ್ರತಿ ವರ್ಷ ಆರಿದ್ರಾ ನಕ್ಷತ್ರ, ನವರಾತ್ರಿ ಉತ್ಸವ ಹಾಗೂ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಂದ ಭಜನಾ ಸೇವೆ ನಡೆಯುತ್ತದೆ.

    ಮಾದರಿ ಜಾತ್ರೆಗೆ ತಯಾರಿ: ಕಳೆದ ಎರಡೂವರೆ ತಿಂಗಳಿನಿಂದ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು, ಭಕ್ತರು, ಸಾರ್ವಜನಿಕರು ಜಾತ್ರಾ ಸಿದ್ಧತೆಯಲ್ಲಿ ತೊಂಡಗಿದ್ದು, ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಲು ಮುಂದಾಗಿದ್ದಾರೆ.

    ಕಾರ್ಯಕ್ರಮ: ಜ. 28ರಂದು ಬೆಳಗ್ಗೆ ದೇವಾಲಯದಲ್ಲಿ ಜಾತ್ರಾ ಸಂಪ್ರದಾಯದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮ. ರಾತ್ರಿ ಹೊಳೆ ಚಪ್ಪರದಲ್ಲಿ ಮಾರಿಕಾಂಬಾ ದೇವಿಯ ಧಾರ್ವಿುಕ ಕಾರ್ಯಕ್ರಮ ಆರಂಭಗೊಂಡು ರಾತ್ರಿ 12ಕ್ಕೆ ರಥೋತ್ಸವದ ಮೆರವಣಿಗೆಯೊಂದಿಗೆ ಜಾತ್ರಾ ಗದ್ದುಗೆಗೆ ಬರುತ್ತದೆ. 29ರಂದು ಬೆಳಗ್ಗೆ ಮೊಕ್ತೇಸರರ ಯಜಮಾನತ್ವದಲ್ಲಿ ಪುರೋಹಿತರಿಂದ ಪೂಜೆ ವಿಧಿ- ವಿಧಾನ. ಮಧ್ಯಾಹ್ನ 11ರಿಂದ ಗ್ರಾಮಸ್ಥರಿಂದ ಪೂಜೆಯಾದ ನಂತರ ಭಕ್ತರಿಂದ ಸೇವೆ ಪ್ರಾರಂಭ. ಪ್ರತಿದಿನ ಬೆಳಗ್ಗೆ ದೇವಿ ಸಪ್ತಶತಿ ಪಾರಾಯಣ, ಬೆಳಗ್ಗೆ 8ರಿಂದ ರಾತ್ರಿ 9ರವರೆಗೆ ದೇವಿಯ ದರ್ಶನ. ಫೆ. 5ರಂದು ಬೆಳಗ್ಗೆ 9ರವರೆಗೆ ಭಕ್ತರಿಂದ ಸೇವೆಗೆ ಅವಕಾಶ. ನಂತರ ದೇವಿಯ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಅನ್ನ ಸಂತರ್ಪಣೆ: ಫೆ. 4ರಂದು ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ.

    ಸಿಸಿಟಿವಿ ಕ್ಯಾಮರಾ ಅಳವಡಿಕೆ: ಜಾತ್ರೆಯಲ್ಲಿ ಯಾವುದೇ ಅನೈತಿಕ ಹಾಗೂ ಅಶ್ಲೀಲ ಚಟುವಟಿಕೆ ನಡೆಯದಂತೆ ಜಾತ್ರಾ ಕಮಿಟಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, 16 ಕಡೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts