More

    ಬಿಡಿಸಿಸಿ ಬ್ಯಾಂಕ್‌ಗೆ ರಾಜ್ಯದಲ್ಲಿ ಪ್ರಥಮ ಸ್ಥಾನ

    ಸಂಕೇಶ್ವರ, ಬೆಳಗಾವಿ: ಕೃಷಿ ಚಟುವಟಿಕೆಗಳಿಗೆ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ನೆರವು ಒದಗಿಸುವ ಮೂಲಕ ಬಿಡಿಸಿಸಿ ಬ್ಯಾಂಕ್ ರಾಜ್ಯದಲ್ಲಿ ಪ್ರಥಮ ಹಾಗೂ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿರುವುದು ಉತ್ತಮ ಬೆಳವಣಿಗೆ ಎಂದು ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

    ಸಮೀಪದ ಕಮತನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ವ್ಯವಸ್ಥೆ ಸದೃಢವಾಗಿ ಕಾರ್ಯ ಮಾಡಿದಾಗ ರೈತರ ಬದುಕಿನಲ್ಲಿ ಬದಲಾವಣೆ ತರಬಹುದು ಎಂದರು.

    ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ, ಹುಕ್ಕೇರಿ ತಾಲೂಕಿನ ಸಹಕಾರ ಸಂಘಗಳ ಕಾರ್ಯದಕ್ಷತೆ ಇಡಿ ವ್ಯವಸ್ಥೆಗೆ ಮಾದರಿಯಾಗಿದೆ. ಮೂರು ದಶಕಗಳಿಂದ ಜಿಲ್ಲೆಯ ರೈತರ ಆರ್ಥಿಕ ಅನುಕೂಲತೆಗಳನ್ನು ಕಲ್ಪಿಸಿಕೊಡುವಲ್ಲಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅವರ ಪಾತ್ರ ಮಹತ್ವದ್ದು. ರಾಜಕೀಯಕ್ಕಿಂತ ಸಹಕಾರ ರಂಗಕ್ಕೆ ಮಹತ್ವ ಕೊಡುವ ರಮೇಶ ಕತ್ತಿ ಜಿಲ್ಲೆಯ ಶ್ರೇಷ್ಠ ಸಹಕಾರಿಯಾಗಿದ್ದಾರೆ ಎಂದರು. ಯುವ ಧುರೀಣ ಪವನ ಕತ್ತಿ ಮಾತನಾಡಿ, ರೈತರಿಗೆ ಸಹಕಾರ ಸಂಘಗಳು ಜೀವಾಳವಾಗಿದ್ದು, ಸಹಕಾರ ಸಂಘಗಳಲ್ಲಿ ದೇವಸ್ಥಾನಗಳ ರೂಪದಲ್ಲಿ ಪಾರದರ್ಶಕತೆ ಹಾಗೂ ಪಾವಿತ್ರ್ಯತೆ ಕಾಪಾಡಿದಲ್ಲಿ ಸಹಕಾರ ಸಂಘಗಳು ಮತ್ತಷ್ಟು ಬೆಳೆಯಲು ಅನುಕೂಲವಾಗುತ್ತದೆ. ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಸರ್ಕಾರದ ವಿವಿಧ ಯೋಜನೆಯಡಿ ಸಿಗುವ ಸೌಲಭ್ಯ ಒದಗಿಸುತ್ತಿದ್ದಾರೆ ಎಂದರು. ಹಿರಾ ಶುಗರ್ಸ್‌ ನಿರ್ದೇಶಕ ಅಪ್ಪಾಸಾಹೇಬ ಶಿರಕೋಳಿ, ಪುರಸಭೆ ಸದಸ್ಯ ಶಿವಾನಂದ ಮುಡಸಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗಜಾನನ ಕ್ವಳ್ಳಿ, ಸಂಘದ ಅಧ್ಯಕ್ಷ ಕಲ್ಲಪ್ಪ ಚೌಗಲಾ, ಜಿ.ಬಿ.ಪಾಟೀಲ, ಬಿ.ಜೆ.ಪಾಟೀಲ, ಸುರೇಶ ಬೋರಗಲ್ಲಿ, ದುಂಡಪ್ಪ ಚೌಗಲಾ, ಮನೋಹರ ಚಾಳಣ್ಣವರ, ಶಿವಾನಂದ ತರಕಾರ, ಟಿಸಿಒ ಶ್ರೀಶೈಲ ಸನದಿ, ಬ್ಯಾಂಕ್ ನಿರೀಕ್ಷಕ ಕೆಂಪಯ್ಯ ಗವಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts