More

    ಬಿಜೆಪಿ ತೆಕ್ಕೆಗೆ ಎಪಿಎಂಸಿ ಅಧ್ಯಕ್ಷ ಗಾದಿ

    ಕುಮಟಾ: ಏಳು ವರ್ಷಗಳ ನಂತರ ಕುಮಟಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನವು ಬಿಜೆಪಿಗೆ ಒಲಿದಿದೆ. ಅಧ್ಯಕ್ಷರಾಗಿ ರಮೇಶ ಪ್ರಸಾದ ಹಾಗೂ ಉಪಾಧ್ಯಕ್ಷರಾಗಿ ಶಾಂತರಾಜ ಶಿವಯ್ಯ ನಾಯ್ಕ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

    ಒಟ್ಟು 14 ಸದಸ್ಯ ಬಲದ ಎಪಿಎಂಸಿಯಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯ ಪಡೆದಿದ್ದು, ಶಾಸಕ ದಿನಕರ ಶೆಟ್ಟಿ ಅವರ ಒತ್ತಾಸೆಯಿಂದ ಚಿದಾನಂದ ನಾಯ್ಕ, ಬಬ್ಬು ಪಟಗಾರ, ಕಲ್ಪನಾ ಆನಂದ ದೇಶಭಂಡಾರಿ ಅವರನ್ನು ನಾಮನಿರ್ದೇಶನ ಮಾಡಿದ್ದರಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ.

    ಸತತವಾಗಿ ನಾಲ್ಕು ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್​ನ ರಾಮನಾಥ ಶಾನಭಾಗ (ಧೀರು) ಈ ಬಾರಿ ಕೂಡ ಆ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಅಧ್ಯಕ್ಷ ಸ್ಥಾನಕ್ಕೇರುವುದಿದ್ದಲ್ಲಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಬೇಕು ಎಂದು ಬಿಜೆಪಿ ಷರತ್ತು ವಿಧಿಸಿದ್ದರಿಂದ ಅನಿವಾರ್ಯವಾಗಿ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎನ್ನಲಾಗಿದೆ.

    ನೂತನ ಅಧ್ಯಕ್ಷ ರಮೇಶ ಪ್ರಸಾದ ಮಾತನಾಡಿ, ಶಾಸಕ ದಿನಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತಾಲೂಕಿನ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ನೂತನ ಉಪಾಧ್ಯಕ್ಷ ಶಾಂತರಾಜ ನಾಯ್ಕ, ಬಿಜೆಪಿ ಮುಖಂಡ ಕುಮಾರ ಮಾರ್ಕಂಡೆ, ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ರಾಮನಾಥ ಶಾನಭಾಗ ಇದ್ದರು. ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಸುರೇಶ ಅವರ ಸಹಕಾರದಲ್ಲಿ ತಹಸೀಲ್ದಾರ್ ಮೇಘರಾಜ ನಾಯ್ಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

    ಕಾರವಾರ ಎಪಿಎಂಸಿಗೆ ಅವಿರೋಧ ಆಯ್ಕೆ

    ಕಾರವಾರ: ಅಂಕೋಲಾ-ಕಾರವಾರ ಎಪಿಎಂಸಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸಾಯಿನಾಥ ಶ್ರೀಕಾಂತ ನಾಯ್ಕ, ಉಪಾಧ್ಯಕ್ಷರಾಗಿ ಗಣಪತಿ ಬೊಮ್ಮಯ್ಯ ನಾಯಕ ಶೀಳ್ಯ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.

    ಒಟ್ಟು 13 ಸದಸ್ಯರ ಬಲದ ಎಪಿಎಂಸಿಯಲ್ಲಿ ನಾಲ್ವರು ಕಾಂಗ್ರೆಸ್ ಹಾಗೂ 9 ಬಿಜೆಪಿ ಸದಸ್ಯರಿದ್ದಾರೆ. ಇದರ ಜತೆಗೆ, ಮುರಾರಿ ಗಾಂವಕರ, ಉದಯ ನಾಯ್ಕ, ಮಂಗಲಾ ನಾಯ್ಕ ಅವರನ್ನು ಸರ್ಕಾರ ನಾಮ ನಿರ್ದೇಶನ ಮಾಡಿದ್ದು, ಇದರಿಂದ ಬಿಜೆಪಿ ಬಲ ಇನ್ನಷ್ಟು ಹೆಚ್ಚಿತು. ಹೀಗಾಗಿ, ನಿರಾಯಾಸವಾಗಿ ಅವಿರೋಧ ಆಯ್ಕೆ ನಡೆಯಿತು. ಹಿಂದೆ ಅಧ್ಯಕ್ಷರಾಗಿದ್ದ ಗಣಪತಿ ನಾಯಕ ಈಗ ಉಪಾಧ್ಯಕ್ಷ ಸ್ಥಾನ ಪಡೆದರು.

    ಶಾಸಕಿ ರೂಪಾಲಿ ನಾಯ್ಕ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಪರಸ್ಪರ ಸಹಕಾರದಿಂದ ರೈತರಿಗೆ ಅನುಕೂಲವಾಗುವ ಕಾರ್ಯವನ್ನು ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.

    ಸದಸ್ಯರಾದ ವಿದ್ಯಾಧ್ಯರ ಗಾಂವಕರ, ನಾರಾಯಣ ಹೆಗಡೆ, ಸುಬ್ರಾಯ ಸಿದ್ದಿ, ಸೀತಾ ಗೌಡ, ಪ್ರಸಾದ ಕಾಮತ, ಕುಷ್ಟಾ ಹುಲಸ್ವಾರ, ಸುಜಾತಾ ದಳವಿ, ಅಂಕೋಲಾ ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಗ್ರಾಮಿಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೆಕರ್, ವಿನಾಯಕ ಪಡ್ತಿ, ಪ್ರದೀಪ ಗುನಗಿ ಇದ್ದರು. ತಹಸೀಲ್ದಾರ್ ರಾಮಚಂದ್ರ ಕಟ್ಟಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts