More

    ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ರಾಜ್ಯಕ್ಕೆ ಬಂಪರ್

    ರಾಮದುರ್ಗ: ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಜನತೆಗೆ ಬಂಪರ್ ಗ್‌ಟಿ ದೊರೆಯುವ ವಿನೂತನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಜನರು ಸರ್ಕಾರದ ಸಾಧನೆ ಹಾಗೂ ಮುಂದಿನ ಭರವಸೆ ಅರಿತು ನನಗೆ ಮತ ನೀಡಿ, ಆಯ್ಕೆ ಮಾಡಬೇಕು ಎಂದು ಬಿಜೆಪಿ ಅಭ್ಯರ್ಥಿ ಚಿಕ್ಕರೇವಣ್ಣ ಮನವಿ ಮಾಡಿದರು.

    ತಾಲೂಕಿನ ಓಬಳಾಪೂರ, ಸೊಪ್ಪಡ್ಲ, ದಾಡಿಭಾಂವಿ, ವೆಂಕಟಾಪೂರ, ಸಾಲಾಪೂರ, ಬಟಕುರ್ಕಿ, ನಾಗನೂರ ಸೇರಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸೋಮವಾರ ಮತಯಾಚನೆ ಮಾಡಿ ಮಾತನಾಡಿದರು.

    ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಪ್ರಮುಖ ಹಬ್ಬಗಳಿಗೆ ಬಿಪಿಎಲ್ ಕುಟುಂಬಕ್ಕೆ ಉಚಿತ ಸಿಲಿಂಡರ್, ಪ್ರತಿದಿನ ಅರ್ಧ ಲೀಟರ್ ಹಾಲು ಕೊಡುವುದು, ಐದು ಕೆಜಿ ಉಚಿತ ಅಕ್ಕಿ, ಕೈಗೆಟಕುವ ದರದಲ್ಲಿ ಅಟಲ್ ಆಹಾರ ಕೇಂದ್ರಗಳ ಸ್ಥಾಪನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಎಸ್‌ಸಿ, ಎಸ್ಟಿ ಸಮುದಾಯಗಳಿಗೆ ಸ್ಥಿರ ಠೇವಣಿ ಇಡುವುದು ಸೇರಿದಂತೆ ನೂರಾರು ಯೋಜನೆಗಳನ್ನು ಜಾರಿಗೆ ತರಲು ಸರ್ವರೂ ಬಿಜೆಪಿ ಬೆಂಬಲಿಸಿ ಮತ ನೀಡಬೇಕು ಎಂದು ವಿನಂತಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಜೇಶ ಬೀಳಗಿ ಮಾತನಾಡಿ, ಪಕ್ಷದ ವರಿಷ್ಠರು ಬಡವರ, ನಾಡಿನ ಸರ್ವರ ಕಲ್ಯಾಣಕ್ಕಾಗಿ ಹಲವು ವಿನೂತನ ಯೋಜನೆ ಜಾರಿಗೆ ತಂದಿದ್ದಾರೆ. ಅವುಗಳನ್ನು ಈಡೇರಿಸಲುವಲ್ಲಿ ಬಿಜೆಪಿ ಬದ್ಧವಿದ್ದು, ರಾಮದುರ್ಗ ಮತಕ್ಷೇತ್ರ ಸೇರಿ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧವಿದೆ. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಂದಾಗಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮತದಾರರು ಪಕ್ಷದ ಅಭ್ಯರ್ಥಿಯ ಗುರುತಾದ ಕಮಲಕ್ಕೆ ಬಹುಮತ ನೀಡಬೇಕು ಎಂದರು.

    ರಾಮದುರ್ಗ ಮತಕ್ಷೇತ್ರದ ರೈತರ ನೀರಾವರಿ ಸೌಲಭ್ಯ, ಬಡವರಿಗೆ ಹಾಗೂ ನಾಗರಿಕರಿಗೆ ಮೂಲ ಸೌಲಭ್ಯ ಒದಿಸುವ ಜತೆಗೆ ನಿರುದ್ಯೋಗ ಸಮಸ್ಯೆಗೆ ಕಡಿವಾಣ ಹಾಕಲು ಶ್ರಮಿಸುತ್ತೇನೆ. ಕ್ಷೇತ್ರದ ಮತದಾರರು ನನ್ನನ್ನು ಅತ್ಯಧಿಕ ಮತಗಳಿಂದ ಆಶೀರ್ವದಿಸಬೇಕು ಎಂದರು. ಪಿ.ಎಫ್. ಪಾಟೀಲ, ರಾಜೇಶ ಬೀಳಗಿ, ರೇಣಪ್ಪ ಸೋಮಗೊಂಡ, ಡಾ.ಕೆ.ವಿ. ಪಾಟೀಲ, ಮಾರುತಿ ಕೊಪ್ಪದ, ಉಮೇಶ ಕೊಳವಿ, ಲಕ್ಷ್ಮಣ ತಪಸಿ, ರೇಖಾ ಚಿನ್ನಾಕಟ್ಟಿ, ಶ್ರೀದೇವಿ ಮಾದನ್ನವರ, ಡಾ. ಬಿ.ಎನ್. ಮಾದನ್ನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts