More

    ಬಿಜೆಪಿಯಿಂದ ಸಮಾಜದಲ್ಲಿ ನೆಮ್ಮದಿ ಹಾಳು : ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿ



    ಮೈಸೂರು: ಸಾವರ್ಕರ್ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಬಿಜೆಪಿ ನಾಯಕರು ವಿವಾದ ಮಾಡಿ, ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಆರೋಪಿಸಿದರು.
    ಗುರುವಾರ ತಿ.ನರಸೀಪುರ ತಾಲೂಕಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಯೋಧರಲ್ಲ. ಅವರೊಬ್ಬ ಧಾರ್ಮಿಕ ಮೂಲಭೂತವಾದಿಯಾಗಿದ್ದರು. ಅವರು ಮುಸ್ಲಿಮರನ್ನು ಎಂದೂ ಕೂಡ ಭಾರತೀಯರೆಂದು ಭಾವಿಸಿದವರಲ್ಲ. ‘ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಹಿಂದು ರಾಷ್ಟ್ರದ ಭಾಗವಾಗಲು ಸಾಧ್ಯವಿಲ್ಲ ಅವರು ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಾಗಿ ಹಿಂದು ರಾಷ್ಟ್ರ ಮತ್ತು ಅಧಿಕಾರವನ್ನು ಒಪ್ಪಿ ಬದುಕಬೇಕೆಂದು’ ಹೇಳಿದ್ದರು. ಸಾವರ್ಕರ್ ಅನ್ಯ ಮತದ್ವೇಷಿಯಾಗಿದ್ದರು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಕಿಡಿಕಾರಿದರು.
    ಹಿಂದುಗಳು ವಾಸ ಮಾಡುವ ಬಡಾವಣೆಯಲ್ಲಿ ಮೂಲಭೂತವಾದಿಗಳ ಚಿತ್ರ ಹಾಕಿದರೆ ಹಿಂದುಗಳಿಗೆ ಕೋಪ ಬರುವುದಿಲ್ಲವೇ. ಅದೇ ರೀತಿ ಮುಸ್ಲಿಮರ ಬಡಾವಣೆಯಲ್ಲಿ ಧಾರ್ಮಿಕ ಮೂಲಭೂತವಾದಿಗಳ ಚಿತ್ರ ಹಾಕಿರುವುದರಿಂದ ಅವರಿಗೆ ಕೋಪ ಬಂದಿದೆ. ಇದು ಸಹಜ ಎಂದು ಪ್ರಶ್ನಿಸಿದ ಯತೀಂದ್ರ ಸಿದ್ದರಾಮಯ್ಯ, ಮುಸ್ಲಿಮರನ್ನು ದ್ವೇಷಿಸುತ್ತಿದ್ದ ಸಾವರ್ಕರ್ ಚಿತ್ರವನ್ನು ಮುಸ್ಲಿಮರ ಬಡಾವಣೆಯಲ್ಲಿ ಹಾಕುವ ಮೂಲಕ ಪ್ರಚೋದನೆಗೆ ಅವಕಾಶ ಕೊಡಬಾರದು ಎಂದು ನಮ್ಮ ತಂದೆ ಸಿದ್ದರಾಮಯ್ಯ ಹೇಳಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.
    ಕೋಮುಗಲಭೆ ಹುಟ್ಟು ಹಾಕಿದವರನ್ನು, ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಬದಲಿಗೆ ಅನಗತ್ಯ ವಿವಾದ ಮಾಡುತ್ತಿದ್ದಾರೆ. ನಿಜವಾದ ಜವಾಬ್ದಾರಿ ಇರುವ ಸರ್ಕಾರವಾಗಿದ್ದರೆ ಕೋಮು ಗಲಭೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿ ಸಮಾಜದಲ್ಲಿ ಸಾಮರಸ್ಯ ತರುವ ಪ್ರಯತ್ನ ಮಾಡಬೇಕಿತ್ತು ಎಂದು ಸಲಹೆ ನೀಡಿದರು.
    ಆರ್‌ಎಸ್‌ಎಸ್ ಆಗಲೀ, ಹಿಂದು ಮಹಾಸಭಾವಾಗಲಿ ಸ್ವಾತಂತ್ರ್ಯ ಪೂರ್ವದಿಂದಲೂ ಭಾವೈಕ್ಯತೆಗೆ ವಿರುದ್ಧವಾಗಿಯೇ ಕೆಲಸ ಮಾಡಿಕೊಂಡು ಬಂದಿದೆ. ನಾಡಿನಲ್ಲಿ ದ್ವೇಷದ ಕಿಚ್ಚನ್ನು ಹಚ್ವಿ ರಾಜ್ಯದ ಶಾಂತಿ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts