More

    ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಉಚ್ಚಾಟಿಸಿ

    ಚಿತ್ರದುರ್ಗ: ಸಹಕಾರಿ ಬ್ಯಾಂಕ್‌ಗಳಿಗೆ 439 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಒತ್ತಾಯಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೂಡಲೇ ರಮೇಶ್ ಅವರು ನೈತಿಕ ಹೊಣೆ ಹೊತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಿಜೆಪಿ ತನ್ನ ತತ್ವ ಸಿದ್ಧಾಂತಕ್ಕೆ ಬೆಲೆ ಕೊಡುವುದೇ ಆದರೆ, ಇಂತಹ ವ್ಯಕ್ತಿಗಳಿಗೆ ಪಕ್ಷದಲ್ಲಿ ಮಾನ್ಯತೆ ಕೊಡಬಾರದು ಎಂದು ಆಗ್ರಹಿಸಿದರು.

    ವಂಚನೆಯಿಂದಾಗಿ ಹಿಂದುಳಿದ ರೈತರಿಗೆ ಅನ್ಯಾಯವಾಗಿದೆ. ಸಹಕಾರಿ ಬ್ಯಾಂಕ್‌ಗಳು ರಾಜಕಾರಣಿಗಳ ಕೈಗೆ ಸಿಕ್ಕು ನಷ್ಟ ಅನುಭವಿಸುತ್ತಿವೆ. ಅವರ ಹಿಡಿತದಿಂದ ತಪ್ಪಿಸಬೇಕಾಗಿದೆ. ಮೋಸ ಮಾಡುವವರನ್ನು ದೂರವಿಡಬೇಕಿದೆ. ಭ್ರಷ್ಟರ ವಿರುದ್ಧ ಕ್ರಮದ ಅಗತ್ಯವಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

    ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಈ ಮೂಲಕ ಗಾಂಧಿ, ಅಂಬೇಡ್ಕರ್ ಅವರ ರಾಮರಾಜ್ಯದ ಚಿಂತನೆ ಸಾಕಾರದ ಕಡೆಗೆ ಸಾಗಬೇಕು. ಲೂಟಿಕೋರರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸೂಕ್ತ ಕ್ರಮ ಜರುಗಿಸಿ, ದೇಶ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

    ಸಂವಿಧಾನದ ಮೊದಲ ಆಶಯ ನಿಂತಿರುವುದು ಮಹಾಭಾರತ, ರಾಮಾಯಣದ ಪರಿಕಲ್ಪನೆಯಲ್ಲಿ. ನ್ಯಾಯಾಲಯದಲ್ಲೂ ಸಾಕ್ಷಿ ನುಡಿಯುವಾಗ ಭಗವದ್ಗೀತೆ ಮೇಲೆ ಪ್ರಮಾಣ ಮಾಡುತ್ತೇವೆ. ದೇಶ ಭವ್ಯ ಪರಂಪರೆ ಹೊಂದಿದ್ದು, ಅದು ಮರು ಸ್ಥಾಪನೆಯಾಗಬೇಕು. ಎಲ್ಲ ಧರ್ಮೀಯರು ಸಹೋದರತ್ವದಿಂದ ಬಾಳುವ ವಾತಾವರಣ ಸೃಷ್ಟಿಸಲು ವ್ಯವಸ್ಥೆ ಸರಿಪಡಿಸಬೇಕು ಎಂದು ಮನವಿ ಮಾಡಿದರು.

    ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ, ಪದಾಧಿಕಾರಿಗಳಾದ ರವಿಕುಮಾರ್, ಲಿಂಗರಾಜು, ತನ್ವೀರ್, ಅನ್ವರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts