More

    ಬಿಜೆಪಿಯಿಂದ ಪ್ರತಿಭಟನೆ

    ಹಳಿಯಾಳ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ(ಟಿಎಪಿಎಂಎಸ್)ದಲ್ಲಿ ರೈತರಿಗೆ ಸೇರಬೇಕಾಗಿದ್ದ ರಸಗೊಬ್ಬರವನ್ನು ಬೇರೆ ಜಿಲ್ಲೆಯ ಕಾಳಸಂತೆಯಲ್ಲಿ ಮಾರಾಟ ಮಾಡಿ ಅಂದಾಜು 30 ಲಕ್ಷ ರೂ. ಅವ್ಯವಹಾರ ನಡೆಸಲಾಗಿದೆ ಎಂದು ಆಗ್ರಹಿಸಿ ಸೋಮವಾರ ಸ್ಥಳೀಯ ಬಿಜೆಪಿ ಘಟಕದವರು ಪ್ರತಿಭಟನೆ ನಡೆಸಿದರು.
    ಇಲ್ಲಿನ ಗಣೇಶ ಕಲ್ಯಾಣ ಮಂಟಪದಿಂದ ಟಿಎಪಿಎಂಎಸ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಹಾಗೂ ಕೃಷಿ ಸಹಾಯಕ ನಿರ್ದೇಶಕ ಪಿ.ಐ.ಮಾನೆಯವರೊಂದಿಗೆ ಮಾತನಾಡಿ, ಅವ್ಯವಹಾರದ ಕುರಿತು ಮಾಹಿತಿ ನೀಡಿ, ಇದಕ್ಕೆ ಕಾರಣರಾಗಿರುವ ಸಂಘದ ಕಾರ್ಯನಿರ್ವಾಹಕ ಈಶ್ವರ ನಾರಾಯಣ ಪಾಟೀಲ ಹಾಗೂ ಆಡಳಿತ ಮಂಡಳಿಯನ್ನು ಅಮಾನತಗೊಳಿಸಬೇಕು ಎಂದು ಆಗ್ರಹಿಸಿದರು.
    ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಘಟಕ ಅಧ್ಯಕ್ಷ ಗಣಪತಿ ಕರಂಜೇಕರ, ಶಿವಾಜಿ ನರಸಾನಿ, ವಿ.ಎಂ.ಪಾಟೀಲ, ಅನಿಲ ಮುತ್ನಾಳೆ, ಪುರಸಭಾ ಸದಸ್ಯ ಉದಯ ಹೂಲಿ, ಸಂತೋಷ ಘಟಕಾಂಭ್ಳೆ, ರಾಜೇಶ್ವರಿ ಹಿರೇಮಠ, ಸಂಗೀತಾ ಜಾದವ, ಪ್ರಮುಖರಾದ ವಿಲಾಸ ಯಡವಿ, ವಾಸುದೇವ ಪೂಜಾರಿ, ಸಂತಾನ ಸಾವಂತ, ಸಿದ್ದು ಶೆಟ್ಟಿ ಇದ್ದರು.

    ಕಾಳಸಂತೆಯಲ್ಲಿ ಮಾರಾಟ: ತಾಲೂಕು ಒಕ್ಕಲುತನ ಹುಟ್ಟವಳಿ ಮಾರಾಟ ಸಮಿತಿಯವರು ರೈತರಿಗೆ ಬಾರಿ ಮೋಸ ಮಾಡಿದ್ದು, ಕೃಷಿ ಹಂಗಾಮಿನ ಸಮಯದಲ್ಲಿ ರಸಗೊಬ್ಬರದ ಕೊರತೆ ಉದ್ಭವಿಸಿದಾಗಲೂ ತಾಲೂಕಿಗೆ ಬಂದಂತಹ ರಸಗೊಬ್ಬರವನ್ನು ಬೇರೆ ಜಿಲ್ಲೆಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ ನಮ್ಮ ರೈತವರ್ಗವನ್ನು ವಂಚಿಸಿದ್ದಾರೆ ಎಂದು ಮಾಜಿ ಶಾಸಕ ಸುನೀಲ ಹೆಗಡೆ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಳಿಯಾಳ ತಾಲೂಕಿನಲ್ಲಿ ರಸಗೊಬ್ಬರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ ಕಾಂಗ್ರೆಸ್ ಜನಪ್ರತಿನಿದಿ ಈಗ ಏಕೆ ಮೌನವಾಗಿದ್ದಾರೆ. ಅವರ ಕಾಂಗ್ರೆಸ್ ಪಕ್ಷದ ಆಡಳಿತವಿರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿಯಲ್ಲಿ ರಸಗೊಬ್ಬರ ಗೋಲಮಾಲ್ ನಡೆದರು ತುಟಿಬಿಚ್ಚುತ್ತಿಲ್ಲ ಏಕೆ? ಇದರ ಒಳಮರ್ಮವೇನು ಎಂದು ಪ್ರಶ್ನಿಸಿದರು. ಅವ್ಯವಹಾರ ನಡೆದರೂ ವಿಚಾರಿಸದ ಸಮಿತಿಯ ಆಡಳಿತ ಮಂಡಳಿಯ ಮೇಲೂ ಕ್ರಮ ಕೈಗೊಳ್ಳಬೇಕು ಎಂದರು.







    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts