More

    ಬಿಜೆಪಿಯಿಂದ ಅಧಿಕಾರ ದುರ್ಬಳಕೆ

    ಚಿತ್ರದುರ್ಗ: ದೇಶದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿ, ಪ್ರಜೆಗಳಿಗೆ ನ್ಯಾಯ ಒದಗಿಸುವ ಬದಲು ಸಂಘ ಪರಿವಾರದ ಧ್ಯೇಯೋದ್ದೇಶಕ್ಕೆ ಬಿಜೆಪಿಗರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೇಶ ಉಳಿಸಿ ಸಂಕಲ್ಪ ಯಾತ್ರೆಯ ಮುಖ್ಯಸ್ಥ ರಾಮಚಂದ್ರಪ್ಪ ದೂರಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಣ್ಣದ ಮಾತಿನಲ್ಲೇ ಜನರನ್ನು ಮೋಡಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ಬದಲು ರಾಜಪ್ರಭುತ್ವ ಮರು ಸ್ಥಾಪಿಸಲು ಬಿಜೆಪಿಗರು ತಂತ್ರಗಾರಿಕೆ ಮಾಡಿದ್ದಾರೆ. ಹೀಗಾಗಿ ಆಪತ್ತಿನಲ್ಲಿರುವ ದೇಶ ರಕ್ಷಿಸುವ ಹೊಣೆಗಾರಿಕೆ ಎಲ್ಲರದ್ದಾಗಿದ್ದು, ಜಾಗೃತಿ ಮೂಡಿಸಲು ಯಾತ್ರೆ ಸಂಚರಿಸುತ್ತಿದೆ ಎಂದರು.

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನಿಸಲಿಲ್ಲ. ಭ್ರಷ್ಟಾಚಾರ ರಹಿತವೆಂದು ಭ್ರಷ್ಟರಿಗೆ ಕುಮ್ಮಕ್ಕು ನೀಡುತ್ತಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಂಡಿದೆ. ಕಾರ್ಪೊರೇಟ್ ಕಂಪನಿಗಳ, ಶ್ರೀಮಂತರ ಪರ ಕಾನೂನು ತಿದ್ದುಪಡಿ ಮಾಡಲು ಹೊರಟಿದೆ ಎಂದು ಆರೋಪಿಸಿದರು.

    ಮುಖಂಡ ಅಪ್ಪಾ ಸಾಹೇಬ್ ಮಾತನಾಡಿ, ಕೇಂದ್ರ ಸರ್ಕಾರ ರೈತರ ಸಾಲ ಬದಲು ಕಾರ್ಪೊರೇಟ್ ಕಂಪನಿಗಳ ಸಾಲವನ್ನು ಎನ್‌ಪಿಎ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂ. ಮನ್ನಾ ಮಾಡುತ್ತ ಬಂದಿದೆ. ಜಿಎಸ್‌ಟಿ ಹೆಸರಲ್ಲಿ ಜನಸಾಮಾನ್ಯರ ಜೇಬಿನಿಂದ ವರ್ಷಕ್ಕೆ ಸಾವಿರಾರು ರೂ. ಕಸಿದುಕೊಳ್ಳುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

    ಬಿಜೆಪಿ ಸೋಲಿಸುವ ಉದ್ದೇಶಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಲು ಏ. 8ರವರೆಗೆ ರಾಜ್ಯದ ಉದ್ದಗಲಕ್ಕೂ ಯಾತ್ರೆ ಸಂಚರಿಸಲಿದೆ. ಮೂರು ತಂಡಗಳಾಗಿ ವಿಂಗಡಿಸಿದ್ದು, ಅನೇಕ ಚಿಂತಕರು ಭಾಗವಹಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಯಾತ್ರೆ ಅಂತ್ಯಗೊಳ್ಳಲಿದೆ ಎಂದರು.

    ಶಫೀವುಲ್ಲಾ, ಗೌಸ್‌ಪೀರ್, ಯಾದವರೆಡ್ಡಿ, ಬಸಪ್ಪ, ಅಂಜನಮೂರ್ತಿ, ಸತ್ಯಪ್ಪ ಮಲ್ಲಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts