More

    ಬಿಗಿ ಭದ್ರತೆಯಲ್ಲಿ ಕೂರ್ಮಗಡ ಜಾತ್ರೆ ಆರಂಭ

    ಕಾರವಾರ: ಕಂದಾಯ ಹಾಗೂ ಪೊಲೀಸ್ ಇಲಾಖೆಗಳ ಬಿಗಿ ಭದ್ರತೆಯಲ್ಲಿ ಕೂರ್ಮಗಡ ಹಾಗೂ ಕಾಳಿ ಮಾತಾ ದೇವಸ್ಥಾನದ ಜಾತ್ರೆಗಳು ಪ್ರಾರಂಭವಾಗಿವೆ.

    ಅರಬ್ಬಿ ಸಮುದ್ರದ ನಡುವೆ ಇರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಜ.10 ರಂದು ಜರುಗಲಿದೆ. ಅಂದು ಕಡವಾಡದಿಂದ ನರಸಿಂಹ ದೇವರನ್ನು ಪಲ್ಲಕ್ಕಿಯಲ್ಲಿ ತಂದು, ಸಿಂಗಾರಗೊಂಡ ದೋಣಿಯಲ್ಲಿ ದ್ವೀಪಕ್ಕೆ ಕೊಂಡೊಯ್ದು ಪೂಜೆ ಮಾಡಲಾಗುತ್ತದೆ. ಅಂದು ತಾಲೂಕು ಹಾಗೂ ಹೊರ ರಾಜ್ಯದಿಂದ ಹತ್ತಾರು ಸಾವಿರ ಜನರು ಆಗಮಿಸುತ್ತಾರೆ.

    ಅದಕ್ಕೂ ಪೂರ್ವದಲ್ಲಿ ದೇವಬಾಗದಿಂದ ನರಸಿಂಹ ದೇವರನ್ನು ಕೊಂಡೊಯ್ದು ಪೂಜೆ ಸಲ್ಲಿಸುವ ವಾಡಿಕೆ ಇದೆ. ಮಂಗಳವಾರ ದೇವಬಾಗದಿಂದ 6 ದೋಣಿಗಳಲ್ಲಿ ನೂರಾರು ಭಕ್ತರು ದ್ವೀಪಕ್ಕೆ ತೆರಳಿ, ದೇವರನ್ನು ಕೊಂಡೊಯ್ದು ಪೂಜೆ ಸಲ್ಲಿಸಿ ವಾಪಸಾದರು. ಚಿತ್ತಾಕುಲಾ ಪಿಎಸ್​ಐ ಪ್ರವೀಣ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಂದಾಯ ಇಲಾಖೆ ಸಿಬ್ಬಂದಿ ಎಲ್ಲ ಬೋಟ್​ಗಳಲ್ಲೂ ಸ್ವತಃ ತೆರಳಿ ಅಪಾಯ ಸಂಭವಿಸದಂತೆ ಜಾಗ್ರತೆ ವಹಿಸಿದರು. ಎಲ್ಲರಿಗೂ ಲೈಫ್ ಜಾಕೆಟ್ ಒದಗಿಸಲಾಗಿತ್ತು. ದೋಣಿಗಳನ್ನು ನೋಂದಾಯಿಸಲಾಗಿತ್ತು.

    ಕಾಳಿ ಮಾತಾ ಜಾತ್ರೆ ಇಂದು: ಕಾಳಿ ಸಂಗಮದ ದ್ವೀಪದಲ್ಲಿರುವ ಕಾಳಿ ಮಾತಾ ದೇವಸ್ಥಾನದ ಜಾತ್ರಾ ಮಹೋತ್ಸವ ಜ. 8ರಂದು ಜರುಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಮಂಗಳವಾರ ದ್ವೀಪದ ದೇವಸ್ಥಾನದಲ್ಲಿ ಹೋಮ, ಹವನಗಳು ಜರುಗಿದವು. ನೂರಾರು ಜನರು ದೋಣಿಯಲ್ಲಿ ತೆರಳಿ ದೇವರ ದರ್ಶನ ಪಡೆದು ಬಂದರು. ಕೋಡಿಬಾಗದ ಸಂತೋಷಿಮಾತಾ ದೇವಸ್ಥಾನದಿಂದ ದೋಣಿ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ಸಿಬ್ಬಂದಿ ಇದ್ದು, ಸುರಕ್ಷಾ ಕ್ರಮಗಳನ್ನು ಕೈಗೊಂಡರು. ಬುಧವಾರ ಜಾತ್ರೆಗೆ ಸಾವಿರಾರು ಜನ ದೋಣಿಯಲ್ಲಿ ತೆರಳುವ ನಿರೀಕ್ಷೆ ಇದ್ದು, ಅದಕ್ಕಾಗಿ ಪೊಲೀಸ್ ಇಲಾಖೆ ಭದ್ರತಾ ವ್ಯವಸ್ಥೆ ಮಾಡಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts